ಉಪ್ಪಿನಂಗಡಿ: ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಸ್ಥಾನದ ಅಭಿವೃದ್ಧಿ ಯೋಜನೆಗಾಗಿ ₹ 1.99 ಕೋಟಿ ಅನುದಾನ ಮಂಜೂರಾಗಿ ಅನುಮೋದನೆ ದೊರೆತಿದ್ದು, ದೇವಾಲಯದಲ್ಲಿನ ನೇತ್ರಾವತಿ ಸಮುದಾಯ ಭವನದ ಮೇಲಿನ ಮಹಡಿಯಲ್ಲಿ ಸಭಾ ಭವನವನ್ನು ನಿರ್ಮಿಸೊಲು ಯೋಜನೆ ರೂಪಿಸಲಾಗಿದೆ. ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ ಎಂದು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ.ರಾಧಾಕೃಷ್ಣ ನಾಯಕ್ ತಿಳಿಸಿದರು.

ದೇವಳದಲ್ಲಿ ಅವರ 2 ವರ್ಷದ ಆಡಳಿತಾವಧಿಯಲ್ಲಿ ನಡೆದ ಅಭಿವೃದ್ಧಿ ಕೆಲಸಗಳ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೇವಾಲಯದಲ್ಲಿದ್ದ ಹಳೆಯ ಕಟ್ಟಡಗಳ ದುರಸ್ತಿ ಕಾಮಗಾರಿ, ಮೂಲಭೂತ ಅವಶ್ಯಕತೆಗಳ ನಿರ್ಮಾಣ, ದೈವಗಳ ಗುಡಿ ಪುನರ್ ನಿರ್ಮಾಣ, ದೇವಳದ ಮುಂಭಾಗದಲ್ಲಿನ 32 ಸೆಂಟ್ಸ್ ಭೂಮಿಯನ್ನು ₹ 1.51 ಕೋಟಿಗೆ ಖರೀದಿ ಮಾಡಿರುವುದು, ದೇವಳದ ಹಕ್ಕಿನ 29 ಸೆಂಟ್ಸ್ ಭೂಮಿಯನ್ನು ಅದರ ಅನುಭೋಗದಾರರು ಸ್ವಯಂ ಪ್ರೇರಣೆಯಿಂದ ದೇವಳಕ್ಕೆ ಹಿಂತಿರುಗಿಸುವಂತೆ ಮಾಡಿರುವುದು, ದೇವಳದ ಸುತ್ತಮುತ್ತಲು ಇಂಟರ್ ಲಾಕ್ ಅಳವಡಿಸಲಾಗಿದೆ ಎಂದರು.

2027ರಲ್ಲಿ ಬ್ರಹ್ಮಕಲಶ: ಸಹಸ್ರಲಿಂಗೇಶ್ವರ ದೇವಾಲಯದಲ್ಲಿ 2027ರಲ್ಲಿ ನಡೆಯಬೇಕಾಗಿರುವ ಬ್ರಹ್ಮಕಲಶೋತ್ಸವವನ್ನು ಶಾಸಕರ ಪ್ರಯತ್ನದ ಫಲವಾಗಿ ದೊರಕಲಿರುವ ₹ 352 ಕೋಟಿ ವೆಚ್ಚದ ಅಭಿವೃದ್ಧಿ ಕಾರ್ಯಗಳ ಅನುಷ್ಠಾನದ ಬಳಿಕವೇ ನಡೆಸಲು ಸಂಕಲ್ಪಿಸಲಾಗಿದೆ ಎಂದು ಅವರು ತಿಳಿಸಿದರು.

ಅಣೆಕಟ್ಟೆಯ ಹಿನ್ನೀರಿನಿಂದಾಗಿ ಉದ್ಭವಲಿಂಗಕ್ಕೆ ಈ ಬಾರಿಯೂ ಪೂಜೆ ಸಲ್ಲಿಸಲು ಆಗದೆ ಇರುವುದು ಬೇಸರ ಉಂಟುಮಾಡಿದೆ. ಈ ಭಾಗದ ರೈತರ ಹಿತದೃಷ್ಟಿ ಮತ್ತು ಜನರ ಕುಡಿಯುವ ನೀರಿನ ಸಂಗ್ರಹಕ್ಕಾಗಿ ಮಾಡಲಾದ ವ್ಯವಸ್ಥೆಯನ್ನು ಗೌರವಿಸಿ ಈ ನ್ಯೂನತೆ ಒಪ್ಪಿಕೊಳ್ಳಲಾಗಿದೆ. ನೀರಕಟ್ಟೆ ಅಣೆಕಟ್ಟೆಯಲ್ಲಿ ಜಲವಿದ್ಯುತ್ ಸ್ಥಾವರ ಕಾರ್ಯಾರಂಭಗೊಂಡೆ ಹಾಗೂ ಮುಗೇರಡ್ಕದ ಅಣೆಕಟ್ಟೆಯಲ್ಲೂ ನೀರು ಸಂಗ್ರಹಿಸಿದರೆ ಬಿಳಿಯೂರು ಅಣೆಕಟ್ಟೆಗೆ ಜಾತ್ರೆ ಮುಗಿಯುವವರೆಗೆ ಗೇಟು ಅಳವಡಿಸದೆ ಇರುವ ಬಗ್ಗೆ ಸಂಬಂಧಿತ ಇಲಾಖಾಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದು ತಿಳಿಸಿದರು.

ನದಿಗೆ ಶೌಚಾಲಯದ ತ್ಯಾಜ್ಯ ಸೇರ್ಪಡೆ ಅಮಾನುಷ: ನದಿಗೆ ಶೌಚಾಲಯದ ನೀರನ್ನು ಹರಿಯಬಿಡುತ್ತಿರುವುದು ಅಮಾನುಷ ನಡೆಯಾಗಿದೆ. ಇದರ ಬಗ್ಗೆ ಸಂಬಂಧಿತ ಆಡಳಿತಾಧಿಕಾರಿಗಳು ಗಮನ ಹರಿಸಬೇಕು ಎಂದರು.

ಈ ಬಾರಿಯ ಜಾತ್ರೋತ್ಸವ ಕಾರ್ಯಕ್ರಮ ಚೆನ್ನಾಗಿ ನಡೆದಿದೆ. ಕ್ಷೇತ್ರದ ಶಾಸಕರ ಆಶೋತ್ತರದಂತೆ ಅಳವಡಿಸಲಾದ ವಿದ್ಯುತ್ ದೀಪವನ್ನು ಪಿಡಿಒ ಕತ್ತರಿಸಿದ್ದು, ಹಾಗೂ ಶಾಸಕರ ಸೂಚನೆಯಂತೆ ನಿರುಪಯುಕ್ತವಾಗಿದ್ದ ಕುಡಿಯುವ ನೀರಿನ ಘಟಕವನ್ನು ದೇವಳದ ವೆಚ್ಚದಲ್ಲಿ ತೆರವು ಮಾಡಿರುವುದಕ್ಕೆ ನೋಟಿಸ್ ಜಾರಿ ಮಾಡಿರುವುದು ಬೇಸರ ತಂದಿದೆ ಎಂದರು.

ವ್ಯವಸ್ಥಾಪನಾ ಸಮಿತಿ ಸದಸ್ಯರಾದ ವೆಂಕಪ್ಪ ಪೂಜಾರಿ ಮರುವೇಲು, ಡಾ.ರಮ್ಯ ರಾಜಾರಾಮ್, ಸೋಮನಾಥ, ಗೋಪಾಲಕೃಷ್ಣ ರೈ ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260328-29-1315564880

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.