ಮಂಗಳೂರು: ಬಳಕೆಯಾದ 201 ಸ್ಮಾರ್ಟ್ಫೋನ್ಗಳನ್ನು ದಕ್ಷಿಣ ರೈಲ್ವೆಯ ಪಾಲಕ್ಕಾಡ್ ವಿಭಾಗದ ರೈಲ್ವೆ ಸುರಕ್ಷತಾ ಪಡೆ (ಆರ್ಪಿಎಫ್) ಸಿಬ್ಬಂದಿ ಮಂಗಳೂರು ಜಂಕ್ಷನ್ ರೈಲು ನಿಲ್ದಾಣದಲ್ಲಿ ಸೋಮವಾರ ವಶಪಡಿಸಿಕೊಂಡಿದ್ದಾರೆ. ಅವುಗಳ ಮೌಲ್ಯ ₹ 10.05 ಲಕ್ಷ ಎಂದು ಅಂದಾಜಿಸಲಾಗಿದೆ.

ಕೇರಳ ರಾಜ್ಯದ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದು, ಚಿನ್ನ, ನಗದು, ಮತ್ತಿತರ ಬೆಲೆಬಾಳುವ ವಸ್ತುಗಳು ರೈಲಿನ ಮೂಲಕ ಆ ರಾಜ್ಯಕ್ಕೆ ಕಳ್ಳಸಾಗಣೆಯಾಗುವುದನ್ನು ತಪ್ಪಿಸಲು ಆರ್ಪಿಎಫ್ ಸಿಬ್ಬಂದಿಯು ರೈಲುಗಳಲ್ಲಿ ತಪಾಸಣಾ ಕಾರ್ಯವನ್ನು ತೀವ್ರಗೊಳಿಸಿದ್ದಾರೆ. ಸ್ಮಾರ್ಟ್ಫೋನ್ಗಳಿದ್ದ ಬ್ಯಾಗ್ ಈ ತಪಾಸಣೆ ವೇಳೆ ಪತ್ತೆಯಾಗಿದೆ.

‘ಜಾಮ್ನಗರ– ತಿರುನೆಲ್ವೇಲಿ ಜಂಕ್ಷನ್ ಎಕ್ಸ್ಪ್ರೆಸ್ ರೈಲು (ಸಂಖ್ಯೆ 19578) ಮಂಗಳೂರು ಜಂಕ್ಷನ್ ನಿಲ್ದಾಣದ ಪ್ಲ್ಯಾಟ್ಫಾರಂ–3ರಲ್ಲಿ ನಿಂತಿದ್ದಾಗ ಆರ್ಪಿಎಫ್ನ ಹೆಡ್ ಕಾನ್ಸ್ಟೆಬಲ್ ಸುಜೀಶ್ ಹಾಗೂ ಕಾನ್ಸ್ಟೆಬಲ್ ರಾಮಕೃಷ್ಣ ಅವರು ಬೋಗಿಗಳ ತಪಾಸಣೆ ನಡೆಸಿದ್ದರು. ರೈಲಿನ ಸಾಮಾನ್ಯ ಬೋಗಿಯಲ್ಲಿ ಮೇಲುಗಡೆ ಲಗೇಜು ಇಡುವ ಸ್ಥಳದಲ್ಲಿ ವಾರಸುದಾರರು ಇಲ್ಲದ ಮೂರು ಬ್ಯಾಗ್ಗಳು ಇರುವುದನ್ನು ಸಿಬ್ಬಂದಿ ಗಮನಿಸಿದ್ದರು. ಸಂದೇಹದಿಂದ ಬ್ಯಾಗ್ಗಳನ್ನು ಪರಿಶೀಲಿಸಿದಾಗ, ಅದರಲ್ಲಿ ಬೇರೆ ಬೇರೆ ಬ್ರ್ಯಾಂಡ್ಗಳ ಬಳಕೆಯಾದ 201 ಸ್ಮಾರ್ಟ್ಫೋನ್ಗಳು ಸಿಕ್ಕಿದ್ದವು. ವಶಪಡಿಸಿಕೊಂಡ ಸ್ಮಾರ್ಟ್ಫೋನ್ಗಳ ಮಹಜರನ್ನು ಇಬ್ಬರು ಸಾಕ್ಷಿದಾರರ ಸಮ್ಮುಖದಲ್ಲಿ ನಡೆಸಲಾಗಿದೆ. ಈ ಬಗ್ಗೆ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ರೈಲ್ವೆ ಇಲಾಖೆಯ ಪಾಲಕ್ಕಾಡ್ ವಿಭಾಗದ ಪ್ರಕಟಣೆ ತಿಳಿಸಿದೆ.

ರೈಲು ನಿಲ್ದಾಣದಲ್ಲಿ ಕರ್ತವ್ಯ ನಿರ್ವಹಿಸಿದ್ದ ಸಿಬ್ಬಂದಿ ದೇಹದಲ್ಲಿ ಧರಿಸಿದ್ದ ಕ್ಯಾಮೆರಾಗಳಲ್ಲಿ (ಬಾಡಿ ವೋರ್ನ್ ಕ್ಯಾಮೆರಾ) ದಾಖಲಾದ ದೃಶ್ಯಗಳನ್ನು ಪರಿಶೀಲಿಸಲಾಗಿದೆ. ಈ ಬೋಗಿಯಲ್ಲಿ ತಪಾಸಣಾ ಕಾರ್ಯ ನಡೆಯುತ್ತಿದ್ದಾಗ ಇಬ್ಬರು ವ್ಯಕ್ತಿಗಳು ಅನುಮಾನಾಸ್ಪದವಾಗಿ ವರ್ತಿಸಿರುವುದು ಕಂಡುಬಂದಿದೆ. ಅಪರಾಧ ಗುಪ್ತವಾರ್ತೆ ಶಾಖೆ ಮತ್ತು ವಿಭಾಗೀಯ ಅಪರಾಧ ತಡೆ ಮತ್ತು ಪತ್ತೆ ದಳದ ನೆರವಿನೊಂದಿಗೆ ಈ ಅನುಮಾನಾಸ್ಪದ ವ್ಯಕ್ತಿಗಳ ಪತ್ತೆಗೆ ಕ್ರಮ ವಹಿಸಲಾಗಿದೆ. ಈ ಬಗ್ಗೆ ಸರ್ಕಾರದ ಜೊತೆಗೂ ಮಾಹಿತಿ ಹಂಚಿಕೊಳ್ಳಲಾಗಿದ್ದು, ರೈಲ್ವೆ ಪೊಲೀಸರು ಪ್ರಕರಣದ ತನಿಖೆಯನ್ನು ಹಾಗೂ ವಶಪಡಿಸಿಕೊಂಡ ಸ್ವತ್ತುಗಳ ಕುರಿತ ಕಾನೂನು ಪ್ರಕ್ರಿಯೆಯನ್ನು ಮುಂದುವರಿಸಿದ್ದಾರೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

‘ಕೇರಳದ ಚುನಾವಣೆ ಸಂದರ್ಭದಲ್ಲಿ ರೈಲಿನ ಮೂಲಕ ಬೆಲೆ ಬಾಳುವ ವಸ್ತುಗಳನ್ನು ಹಾಗೂ ನಿಷೇಧಿತ ವಸ್ತುಗಳನ್ನು ಸಾಗಿಸುವುದನ್ನು ತಡೆಯಲು ಎಲ್ಲ ರೈಲು ನಿಲ್ದಾಣಗಳಲ್ಲೂ ವಿಶೇಷ ನಿಗಾ ಮತ್ತು ತಪಾಸಣಾ ಅಭಿಯಾನ ಮುಂದುವರಿಯಲಿದೆ. ರೈಲ್ವೆ ಜಾಲದ ಸುರಕ್ಷತೆ ಹಾಗೂ ಬದ್ಧತೆ ಕಾತರಿಪಡಿಸಲು ಎಲ್ಲ ರೀತಿಯ ಕ್ರಮ ವಹಿಸಲಾಗುತ್ತದೆ’ ಎಂದು ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.