ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೌರವ ಉಳಿಸಿ: ಶಾಸಕ ವಸಂತ ಬಂಗೇರ

Last Updated 15 ಆಗಸ್ಟ್ 2022, 3:58 IST
ಅಕ್ಷರ ಗಾತ್ರ

ಬೆಳ್ತಂಗಡಿ: ‘ಸ್ವಾತಂತ್ರ್ಯದ ಅಮೃತ ಮಹೋತ್ಸವ ಐತಿಹಾಸಿಕ ಕ್ಷಣದಲ್ಲಿದ್ದು, ಈ ದೇಶಕ್ಕೆ ತ್ಯಾಗ, ಬಲಿದಾನ ನೀಡಿದವರನ್ನು ಸ್ಮರಿಸುವ ಜೊತೆ ರಾಷ್ಟ್ರಧ್ವಜ ಹಾಗೂ ಆಚರಣೆಯ ಅರ್ಥವನ್ನು ಅರಿತುಕೊಳ್ಳಬೇಕಿದೆ. ಸಂಭ್ರಮದ ಹೆಸರಿನಲ್ಲಿ ರಾಷ್ಟ್ರಕ್ಕೆ ಹಾಗೂ ಆಚರಣೆಗೆ ಅಪಮಾನ ಮಾಡದಿರಿ’ ಎಂದು ಮಾಜಿ ಶಾಸಕ ಕೆ.ವಸಂತ ಬಂಗೇರ ಹೇಳಿದರು.

ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಆಗಸ್ಟ್ 15 ರಂದು ಜರಗುವ ಸ್ವಾತಂತ್ರ್ಯ ಸುವರ್ಣ ಮಹೋ
ತ್ಸವಕ್ಕೆ ಸರ್ಕಾರದ ಅನುದಾನ ಇಲ್ಲದೇ, ಹಣ ಸಂಗ್ರಹಿಸಿ ಆಚರಣೆ ನಡೆಸುವುದು ಸರಿಯಲ್ಲ. ಇಂದೊಂದು ರೀತಿಯ ಹಫ್ತಾವಾಗಬಾರದು’ ಎಂದರು.

ಅಕ್ರಮ ಸಕ್ರಮ ಒಂದು ಸಭೆ ನಡೆಸಿ, ಬಳಿಕ ಬೈಠಕ್ ಮೊಟಕುಗೊಳಿಸಿರುವುದು ಯಾಕೆ? ಮುಂದಿನ 15 ದಿನಗಳ ಒಳಗಾಗಿ ಅಕ್ರಮ-ಸಕ್ರಮ ಬೈಠಕ್ ನಡೆಸದಿದ್ದಲ್ಲಿ ತಾಲ್ಲೂಕು ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದರು.

ಬಹುತೇಕ ರಸ್ತೆಗಳು ಹದಗೆಟ್ಟಿದ್ದು, ಸರಿ ಮಾಡಿ. ಮರಳು ದಂಧೆ ಮತ್ತು ಮರಗಳವು ನಿಯಂತ್ರಿಸಬೇಕು. ಪೊಲೀಸ್ ಠಾಣೆಗಳಲ್ಲಿ ಬಡವರಿಗೆ ಅನ್ಯಾಯ ಮಾಡುತ್ತಿದ್ದಾರೆ. ಇವುಗಳ ವಿರುದ್ಧ ಹೋರಾಟ ನಡೆಸಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT