ಬೆಳ್ತಂಗಡಿ: ತಾಲ್ಲೂಕಿನ ವೇಣೂರು ಮಹಾಲೀಂಗೇಶ್ವರ ದೇವಸ್ಥಾನವು ಸುಮಾರು ₹ 9 ಕೋಟಿ ವೆಚ್ಚದಲ್ಲಿ ಜೀರ್ಣೋದ್ಧಾರಗೊಂಡಿದ್ದು, ಕ್ಷೇತ್ರದಲ್ಲಿ ಪುನರ್ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲ ಶೋತ್ಸವ ಮತ್ತು ಜಾತ್ರೋತ್ಸವ ಫೆ.18ರಿಂದ ಮಾರ್ಚ್ 1ರ ವರೆಗೆ ನಡೆಸಲು ಸಿದ್ಧತೆ ನಡೆಸಲಾಗಿದೆ ಎಂದು ಶಾಸಕ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಹರೀಶ್ ಪೂಂಜ ಹೇಳಿದರು.

ದೇವಸ್ಥಾನದ ಆವರಣದಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಅಳದಂಗಡಿ ಅಜಿಲ ಸೀಮೆಯ ಅತ್ಯಂತ ಪುರಾತನ ಕ್ಷೇತ್ರ ಇದಾಗಿದ್ದು, ಸುಮಾರು 1400 ವರ್ಷಗಳ ಇತಿಹಾಸವನ್ನು ಹೊಂದಿದೆ. ಈ ದೇವಸ್ಥಾನವು 4 ರಾಜ್ಯಗುತ್ತು ಹಾಗೂ 12 ಮಾಗಣೆಗುತ್ತುಗಳಿಗೊಳಪಟ್ಟ 32 ಗ್ರಾಮ ವ್ಯಾಪ್ತಿಗೆ ಸಂಬಂಧಿಸಿದ ಸೀಮಾ ದೇವಾಲಯವಾಗಿದೆ. ಧಾರ್ಮಿಕ ದತ್ತಿ ಇಲಾಖೆಗೆ ಒಳಪಟ್ಟಿದೆ ಎಂದರು.

2019ರ ಜೂನ್ 26ರಂದು ಶೃಂಗೇರಿಯ ಪೀಠದ ವಿಧುಶೇಖರ ಭಾರತಿ ಸ್ವಾಮೀಜಿ ಮತ್ತು ಧರ್ಮಸ್ಥಳ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಅವರು ನಡೆಸಿದ್ದರು. ದೇವಸ್ಥಾನದ ಪುನರ್ ನಿರ್ಮಾಣಕ್ಕೆ ಅಂದಾಜು ₹ 9 ಕೋಟಿ ವೆಚ್ಚ ತಗಲಿದೆ. ದೇವಸ್ಥಾನ ಸಂಪೂರ್ಣ ಶಿಲಾಮಯವಾಗಿದ್ದು, ಸುತ್ತುಪೌಳಿಗೆ ಸಂಪೂರ್ಣ ತಾಮ್ರದ ಹೊದಿಕೆ ಹಾಸಲಾಗಿದೆ ಎಂದರು.

27ರಂದು ಬ್ರಹ್ಮಕಲಶ: ಫೆ.23ರಂದು ಬೆಳಿಗ್ಗೆ 8.22ಕ್ಕೆ ಮಹಾಲಿಂಗೇಶ್ವರ ದೇವರ ಪ್ರತಿಷ್ಠೆ, ಗಣಪತಿ, ಸುಬ್ರಹ್ಮಣ್ಯ, ಜನಾರ್ದನ ದೇವರ ಪ್ರತಿಷ್ಠೆ ನಡೆಯಲಿದೆ. ಫೆ.27ರಂದು ಬೆಳಿಗ್ಗೆ 8.27ಕ್ಕೆ ಬ್ರಹ್ಮಕಲಶಾಭಿಷೇಕ ನಡೆಯಲಿದೆ ಎಂದರು.

ಫೆ.25ಕ್ಕೆ ಸಿಎಂ ಭೇಟಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಫೆ.25ರಂದು ಕ್ಷೇತ್ರಕ್ಕೆ ಭೇಟಿ ನೀಡುವರು. ಪ್ರತಿದಿನ ನಡೆಯುವ ಧಾರ್ಮಿಕ ಸಭೆಯಲ್ಲಿ ಸ್ವಾಮೀಜಿಗಳು, ವಿವಿಧ ಕ್ಷೇತ್ರದ ಗಣ್ಯರು, ಸಚಿವರು, ಶಾಸಕರು ಭಾಗವಹಿಸಲಿದ್ದಾರೆ. ಪ್ರತಿದಿನ ಪ್ರಸಿದ್ಧ ಕಲಾವಿದರಿಂದ ವಿವಿಧ ಪ್ರಕಾರಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.

ಈಗಾಗಲೇ ಭಕ್ತರಿಂದ ಸುಮಾರು ₹ 3.50 ಕೋಟಿಯಷ್ಟು ಕರಸೇವೆ ನಡೆದಿದೆ. ಕಳೆದ 4 ತಿಂಗಳುಗಳಿಂದ ಭಕ್ತಿ ಭಾವದಿಂದ ಶ್ರಮದಾನ ನಡೆಯುತ್ತಿದ್ದು, ದೇವಾಲಯದ ಅಲಂಕಾರ, ಮಣ್ಣು ಹಾಸುವಿಕೆ ಹಾಗೂ ವಿವಿಧ ಕೆಲಸಗಳು ಶ್ರಮದಾನದ ಮೂಲಕ ನಡೆದಿದೆ. ಒಮ್ಮೆ ಸಾವಿರಾರು ಜನ ಕುಳಿತು ಊಟ ಮಾಡಬಹುದಾದ ಅನ್ನಛತ್ರವನ್ನು ನಿರ್ಮಿಸಲಾಗಿದೆ ಎಂದರು.

ಸಮಿತಿ ಕಾರ್ಯಾಧ್ಯಕ್ಷ ಜಯಂತ್ ಕೋಟ್ಯಾನ್, ಪ್ರಧಾನ ಕಾರ್ಯದರ್ಶಿ ಯಜ್ಞ ನಾರಾಯಣ ಭಟ್, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಿ.ಎನ್.ಪುರುಷೋತ್ತಮ ರಾವ್, ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷ ಸುಂದರ ಹೆಗ್ಡೆ, ವೇಣೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ನೇಮಯ್ಯ ಕುಲಾಲ್ ಇದ್ದರು.

22 ಕಿ.ಮೀ. ರಸ್ತೆ ದೀಪಾಲಂಕಾರ

ಮೈಸೂರು ದಸರಾ ಉತ್ಸವದಂತೆ ಸುಮಾರು 22 ಕಿ.ಮೀ. ರಸ್ತೆ ದೀಪಾಲಂಕಾರ ಮಾಡಲಾಗಿದೆ. ಸುಮಾರು 80 ಕಿ.ಮೀ ವರೆಗೆ ಚಪ್ಪರ, ಅಲಂಕಾರ ಮಾಡಲಾಗಿದೆ. ಯಕ್ಷ ವೇದಿಕೆಯಲ್ಲಿ ಸುಮಾರು 10 ಯಕ್ಷಗಾನ ಪ್ರದರ್ಶನ ನಡೆಯಲಿದೆ. ಈಗಾಗಲೇ ಎಲ್ಲಾ ರೀತಿಯ ಪೂರ್ವಸಿದ್ಧತೆಗಳು ನಡೆದಿದೆ. ಬ್ರಹ್ಮಕಲಶೋತ್ಸವದಲ್ಲಿ ಸುಮಾರು 2.50 ಲಕ್ಷ ಭಕ್ತರು ಭಾಗವಹಿಸುವ ಸಾಧ್ಯತೆಯಿದೆ ಎಂದು ಅವರು ತಿಳಿಸಿದರು.

ಹೊರಕಾಣಿಕೆ ಇಂದು

ತಾಲ್ಲೂಕಿನ 81 ಗ್ರಾಮಗಳಿಂದ ಹಾಗೂ ಹೊರ ತಾಲ್ಲೂಕಿನಿಂದ ಹಸಿರುವಾಣಿ ಹೊರೆಕಾಣಿಕೆ ದೇವರಿಗೆ ಸಮರ್ಪಣೆಯಾಗಲಿದೆ. ಗುರುವಾಯನಕೆರೆ ಶಕ್ತಿ ನಗರದಲ್ಲಿ ಮಧ್ಯಾಹ್ನ ಗಂಟೆ 2ಕ್ಕೆ ಎಲ್ಲರೂ ಸೇರಿ ಮೆರವಣಿಗೆಯಲ್ಲಿ ಪಾಲ್ಗೊಳ್ಳುವುದು. ಚೆಂಡೆ, ಮದ್ದಳೆ, ಕೊಂಬು, ಭಜನೆ ಹಾಗೂ ವಿವಿಧ ವೇಷ ಭೂಷಣ ಮತ್ತು ಸುಡುಮದ್ದು ಪ್ರದರ್ಶನದೊಂದಿಗೆ ಹಸಿರುವಾಣಿ ಹೊರೆಕಾಣಿಕೆಯ ಭವ್ಯ ಮೆರವಣಿಗೆ ನಡೆಯಲಿದೆ. ಉಜಿರೆ ಲಕ್ಷ್ಮಿ ಗ್ರೂಪ್ಸ್ನ ಆಡಳಿತದಾರ ಮೋಹನ್ ಕುಮಾರ್ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.