ಉಜಿರೆ (ಧರ್ಮಸ್ಥಳ): 'ಮತಾಂತರ ಸಂಘರ್ಷವನ್ನು ಸೃಷ್ಟಿಸುತ್ತದೆ. ಅದು ಇರುವಲ್ಲಿ ಸಾಮರಸ್ಯಕ್ಕೆ ಅವಕಾಶ ಇಲ್ಲ. ಧರ್ಮಗಳ ನಡುವೆ ಸಾಮರಸ್ಯ ಕಾಪಾಡಬೇಕಾದರೆ ಧಾರ್ಮಿಕ ಮತಾಂತರಕ್ಕೆ ಪೂರ್ಣವಿರಾಮ ಹಾಕಬೇಕು' ಎಂದು ಉಪ ರಾಷ್ಟ್ರಪತಿ ಸಿ.ಪಿ.ರಾಧಾಕೃಷ್ಣನ್ ಹೇಳಿದರು.

ಶ್ರೀ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆ ಬೆಳ್ತಂಗಡಿಯಲ್ಲಿ ನಿರ್ಮಿಸಿರುವ 'ಸಿರಿ ಮಾತೃಶ್ರೀ ಕೈಗಾರಿಕಾ ಪಾರ್ಕ್' ಅನ್ನು ಭಾನುವಾರ ಇಲ್ಲಿ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
.ಧರ್ಮಸ್ಥಳದಲ್ಲಿ ಉಪರಾಷ್ಟ್ರಪತಿ.
'ಹಿಂದೂ ಮೂಲಭೂತವಾದಿಯನ್ನು ಯಾವತ್ತೂ ನೋಡಿಲ್ಲ. ಹಿಂದೂಗಳು ಬೇರೆ ಧರ್ಮವನ್ಜು ದ್ವೇಷಿಸುವುದನ್ನು ನೋಡಿಲ್ಲ. ನಾವು ಎಲ್ಲ ಧರ್ಮಗಳನ್ನು ಗೌರವದಿಂದ ಕಾಣುತ್ತೇವೆ. ನಾವು ಎಲ್ಲ ಧರ್ಮಗಳ ಪರ ಇರುವವರು. ಆದರೆ ಮತಾಂತರದ ವಿರುದ್ದ ಇದ್ದೇವೆ' ಎಂದರು.

'21 ನೇ ಶತಮಾನದಲ್ಲೂ ಮತಾಂತರದ ಔಚಿತ್ಯ ಇದೆಯೇ ಎಂದು ಯೋಚಿಸಬೇಕು. ಎಲ್ಲರಿಗೂ ದೇವರ ಆರಾಧನೆಯ ಹಕ್ಕು ಇದೆ. ದೇವರು ಒಬ್ಬನೇ. ಎಲ್ಲ ಧರ್ಮಗಳೂ ಮಾನವರ ಏಳಿಗೆಗೆ ಶ್ರಮಿಸುತ್ತಿವೆ. ಎಲ್ಲರಿಗೂ ಭಕ್ತಿ ಮುಖ್ಯವೇ ಹೊರತು ಅದು ಕ್ರೈಸ್ತ, ಇಸ್ಲಾಂ, ಹಿಂದೂ ಭಕ್ತಿಯೇ ಎಂಬುದು ಮುಖ್ಯವಲ್ಲ' ಎಂದರು.

'ಅಲ್ಲಾಹ್, ಯೇಸುಕ್ರಿಸ್ತರನ್ನು ದೇವರು ಎಂದು ಒಪ್ಪಲು ಹಿಂದೂಗಳಿಗೆ ಹಿಂಜರಿಕೆ ಇಲ್ಲ. ಆದರೆ ನಾವು ಮಂಜುನಾಥ ಸ್ವಾಮಿ ಮೇಲೆ ಹೊಂದಿರುವ ಭಕ್ತಿಯನ್ನು ಬದಲಿಸುವಂತೆ ಬಲವಂತ ಮಾಡಬೇಡಿ ಎಂದು ಹೇಳುತ್ತೇವೆ. ಇದರಲ್ಲಿ ಬೇರೆ ಧರ್ಮಕ್ಕೆ ಹಾನಿ ಮಾಡುವ ಅಂಶವೇನಿದೆ' ಎಂದು ಅವರು ಪ್ರಶ್ಬಿಸಿದರು.
.ಧರ್ಮಸ್ಥಳ ದೇವಸ್ಥಾನಕ್ಕೆ ಉಪರಾಷ್ಟ್ರಪತಿ ರಾಧಾಕೃಷ್ಣನ್ ಭೇಟಿ: ಪ್ರಾರ್ಥನೆ ಸಲ್ಲಿಕೆ.
'ಜಾತ್ಯತೀತ ಎಂದರೆ ಎಲ್ಲ ಧರ್ಮಗಳನ್ನು ಸಮಾನವಾಗಿ ಕಾಣುವುದು. ಎಲ್ಲ ಧಾರ್ಮಿಕ ವ್ಯಕ್ತಿಗಳನ್ನು ಗೌರವದಿಂದ ಕಾಣುವುದು. ಧರ್ಮವನ್ನು ಒಲೈಕೆ ಮಾಡುವುದಲ್ಲ. ನನಗೆ ಮಂಜುನಾಥ ಸ್ವಾಮಿ ಮೇಲೆ ನಂಬಿಕೆ ಇದೆ. ಬೇರೆಯಾರಾದರೂ ಯೇಸುಕ್ರಿಸ್ತರ ಮೇಲೆ ನಂಬಿಕೆ ಇಟ್ಟುಕೊಂಡರೆ ಅದಕ್ಕೆ ಆಭ್ಯಂತರ ಇಲ್ಲ' ಎಂದರು.

'ಗ್ರಾಮೀಣ ಅಭಿವೃದ್ದಿ ಆಗಬೇಕು ಎಂದು ರಾಜಕೀಯ ವ್ಯಕ್ತಿಗಳಿಂದ ಹಿಡಿದು ಎಲ್ಲರೂ ಬಯಸುತ್ತಾರೆ. ಆದರೆ ಇಲ್ಲಿ ಕುಳಿತಿರುವ ಗ್ರಾಮೀಣ ಮಹಿಳೆಯರು ಇದನ್ನು ಸಾಧಿಸಿ ತೋರಿಸಿದ್ದಾರೆ.

ವೀರೇಂದ್ರ ಹೆಗ್ಗಡೆ ಅವರ ಕಳಕಳಿ ಹಾಗೂ ಸಾಮಾಜಿಕ ಜವಾಬ್ದಾರಿಯಿಂದ, ಹೇಮಾವತಿ ವಿ.ಹೆಗ್ಗಡೆ ಪ್ರೇರಣೆಯಿಂದ ಗ್ರಾಮೀಣ ಮಹಿಳೆಯರ ಸಬಲೀಕರಣ ಸಾಧ್ಯವಾಗಿದೆ. ಮಹಿಳೆಯರು ಗೌರವಯುತ ಬದುಕು ರೂಪಿಸಿಕೊಳ್ಳಲು ಅವಕಾಶ ಸಿಕ್ಕಿದೆ' ಎಂದರು.

'ಆಧ್ಯಾತ್ಮಿಕತೆಯ ಮೂಲಕವೂ ಸಾಮಾಜಿಕ ಬದಲಾವಣೆ ಸಾಧ್ಯ ಎಂದು ವೀರೇಂದ್ರ ಹೆಗ್ಗಡೆ ತೋರಿಸಿದ್ದಾರೆ. ಆಡಳಿತದಲ್ಲಿ ಶಿಸ್ತು, ಕಾಯಕದಲ್ಲಿ ಶ್ರದ್ಧೆಯ ಮೂಲಕ ದೇಶ ಕಟ್ಟುವ ಮಾದರಿಯನ್ನು ಮುಂದಿಟ್ಟಿದ್ದಾರೆ. ಈ ಕ್ಷೇತ್ರವು ಶಿಕ್ಷಣ, ಆರೋಗ್ಯ ಸಂಸ್ಕೃತಿ, ಪರಂಪರೆಯ ರಕ್ಷಣೆ, ಪರಿಸರ ಸುಸ್ಥಿರತೆ, ಸಾಮಾಜಿಕ ಬದಲಾವಣೆಗಾಗಿ ಕೈಗೊಂಡ ಕಾರ್ಯಗಳನ್ನು ನೋಡಿ ಹೆಮ್ಮೆಯಾಗುತ್ತದೆ' ಎಂದರು.
.ತಂತ್ರಜ್ಞಾನ ಸ್ವಾವಲಂಬನೆಗೆ ಸಹಭಾಗಿತ್ವ: ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ .
'ನಮ್ಮ ಸೋದರಿಯರು ತಾಯಂದರಿ ತಯಾರಿಸಿದ ಸಿರಿ ಉತ್ಪನ್ನಗಳು ಗುಣಮಟ್ಟಕ್ಕೆ ಸಾಕ್ಷಿ. ಈ ಕೈಗಾರಿಕಾ ಪಾರ್ಕ್ ಯಶಸ್ವಿ ಆಗಲಿದೆ' ಎಂದರು.

'ಈ ಕ್ಷೇತ್ರದಲ್ಲಿ ಧರ್ಮಗಳಿಗೂ ಮೀರಿ ಬಡವರ ಸೇವೆ ಪ್ರತಿನಿತ್ಯ ನಿರಂತರವಾಗಿ ನಡೆಯುತ್ತಿದೆ. ಸಮಾಜ ಸೇವಾ ಸಂಸ್ಥೆಗಳ ಮೂಲಕ ಸಮಾಜಿಕ ಚಳವಳಿಯೇ ನಡೆಯುತ್ತಿದೆ. ಸಹಬಾಳ್ವೆ ಸಾಮರಸ್ಯ ಶತಮಾನಗಳಿಂದ ಇಲ್ಲಿ ನೆಲೆಸಿದೆ. ಪರಸ್ಪರ ಗೌರವದಿಂದ ಕಾಣುವ, ಅವಕಾಶಗಳನ್ನು ಸೃಷ್ಡಿಸುವ ಎಲ್ಲರನ್ನು ಒಳಗೊಳ್ಳುವ ಅಭಿವೃದ್ಧಿಯ ಮಾದರಿ ಇದು. ಪ್ರಧಾನಿ ನರೇಂದ್ರ ಮೋದಿ ಅವರ ಆಶಯವೂ ಇದೇ ಆಗಿದೆ' ಎಂದರು.

ಮಹಿಳಾ ಉದ್ಯಮಿಗಳನ್ನು ರೂಪಿಸುತ್ತಿರುವ ಸಿರಿ, ಸಮೃದ್ಧಿಯ ಸಂಕೇತ. ಇದು ಲಾಭಕ್ಕಾಗಿ ಹುಟ್ಟು ಹಾಕಿದ ಸಂಸ್ಥೆಯಲ್ಲ. ಮಹಿಳಾ ಸ್ವಾವಲಂಬನೆ ಮತ್ತು ಆತ್ಮಗೌರವದ ಪ್ರತೀಕವಿದು. ಸುಮಾರು 3000 ಮಂದಿಗೆ ನೇರ ಹಾಗೂ 10 ಸಾವಿರ ಮಂದಿಗೆ ಪರೋಕ್ಷವಾಗಿ ನೆರವಾಗಿದೆ. ಗ್ರಾಮೀಣ ಬಡ ಹಾಗೂ ದುರ್ಬಲ ವರ್ಗದ ಮಹಿಳೆಯರ ನಿಜವಾದ ಸಾಮಾಜಿಕ ಪರಿವರ್ತನೆ ಎಂದರೆ ಇದುವೇ. ರಾತ್ರಿ ಬೆಳಗಾಗುವಷ್ಟರಲ್ಲಿ ನಡೆದಿದ್ದಲ್ಲ. ಇದರ ಹಿಂದೆ ದಶಕಗಳ ತಾಳ್ಮೆ, ಪರಿಶ್ರಮ ಇದೆ. ಪ್ರಯೋಗಶೀಲತೆ ಅಡಗಿದೆ ಎಂದರು.

'ನಾವು ಬೇರೆ ದೇಶಗಳ ಮೇಲಿನ ಅವಲಂಬನೆ ಕಡಿಮೆ ಮಾಡಬೇಕಿದೆ. ಆತ್ಮನಿರ್ಭರತೆಗೆ, ಸ್ಥಳಿಯ ಉತ್ಪನ್ನಗಳಿಗೆ ದನಿಯಾಗಬೇಕಿದೆ' ಎಂದರು.
.ಉಪರಾಷ್ಟ್ರಪತಿ ಭೇಟಿ ಮರು ಪರಿಶೀಲಿಸಲು ‘ಕೊಂದವರು ಯಾರು‘ ಅಭಿಯಾನದ ಸದಸ್ಯರ ಆಗ್ರಹ .
ರಾಜ್ಯಪಾಲ ಥಾವರಚಂದ್ ಗೆಹಲೋತ್, 'ಮಾತೃಶ್ರೀ ಕೈಗಾರಿಕಾ ಪಾರ್ಕ್ ಉದ್ಯೋಗ ಗ್ರಾಮಿಣ ಮಹಿಳೆ ಆರ್ಥಿಕ ಸಶಕ್ತೀಕರಣವು ಆತ್ಮನಿರ್ಭರ ಭಾರತ ನಿರ್ಮಾಣದತ್ತ ಮಹತ್ವದ ಹೆಜ್ಜೆ. ಗ್ರಾಮ ವಿಕಾಸ ಯೋಜನೆ ಗ್ರಾಮೀಣ ಭಾಗದ ಲಕ್ಷಾಂತರ ಜನರ ಬದುಕು ಬದಲಿಸಿದೆ. ಉದ್ಯೋಗ ಹೆಚ್ಚಿದಷ್ಡೂ ದೇಶ ಸಮೃದ್ಧವಾಗುತ್ತದೆ' ಎಂದರು.

ಧರ್ಮಸ್ಥಳದ ಧರ್ಮಾಧಿಕಾರಿ ಹಾಗೂ ರಾಜ್ಯ ಸಭಾ ಸದಸ್ಯ ವೀರೇಂದ್ರ ಹೆಗ್ಗಡೆ,' ಬೆಳ್ತಂಗಡಿಯ ರೆಂಕೆದ ಗುತ್ತು ಬಳಿ ಏಳು ಎಕರೆ ಪ್ರದೇಶದಲ್ಲಿ 1.5 ಲಕ್ಷ ಚ.ಅಡಿ ಜಾಗದಲ್ಲಿ ಸುಮಾರು ₹ 71 ಕೋಟಿ ಮೊತ್ತದಲ್ಲಿ ಸುಸಜ್ಜಿತ ಸಿರಿ ಕೈಗಾರಿಕಾ ಪಾರ್ಕ್ ನಿರ್ಮಾಣವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ 2000 ಸ್ವಸಹಾಯ ಸಂಘಗಳು ಸಿರಿ ಅಡಿ ಕಾರ್ಯನಿರ್ವಹಿಸುತ್ತಿವೆ . ಗುಣಮಟ್ಟದ ಆಹಾರೋತ್ಪನ್ನಗಳು, ಸಿರಿಧಾನ್ಯ ಉತ್ಪನ್ನಗಳು, ಜವಳಿ, ಅಗರಬತ್ತಿ, ರೆಕ್ಸಿನ್ ಸಾಮಗ್ರಿಗಳು ಹಾಗೂ ಸ್ವಚ್ಛತಾ ಸಾಮಗ್ರಿಗಳನ್ನು ಈ ಕೈಗಾರಿಕಾ ಪಾರ್ಕ್ ನಲ್ಲಿ ತಯಾರಿಸಲಾಗುತ್ತದೆ. ಸುಮಾರು 1000ಕ್ಕೂ ಅಧಿಕ ಮಹಿಳೆಯರಿಗೆ ಉದ್ಯೋಗ ಸಿಗಲಿದೆ ಎಂದು ತಿಳಿಸಿದರು.

ಸಿರಿ ಕೈಪಿಡಿಯನ್ನು ರಾಧಾಕೃಷ್ಣನ್ ಬಿಡುಗಡೆಮಾಡಿದರು. ಸಿರಿ ಕೈಗಾರಿಕಾ ಪಾರ್ಕ್ ನ ಫಲಕ ಅನಾವರಣಗೊಳಿಸಿದರು.

ಸಂಸದ ಕ್ಯಾ.ಬ್ರಿಜೇಶ್ ಚೌಟ, ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್, ಹೇಮಾವತಿ ವಿ. ಹೆಗ್ಗಡೆ, ಎಸ್ ಡಿಎಂ ಸೊಸೈಟಿ ಉಪಾಧ್ಯಕ್ಷ ಸುರೇಂದ್ರ ಕುಮಾರ್ ಭಾಗವಹಿಸಿದ್ದರು.

ಎಸ್ ಡಿಎಂ ಸಂಸ್ಥೆಗಳ ಉಪಾಧ್ಯಕ್ಷ ಸುರೇಂದ್ರ ಕುಮಾರ್ ಭಾಗವಹಿಸಿದ್ದರು. ಸುಪ್ರೀತಾ ಪ್ರಾರ್ಥನೆ ಹಾಡಿದರು. ಸಿರಿ ವ್ಯವಸ್ಥಾಪಕ ನಿರ್ದೇಶಕ ಕೆ.ಎನ್.ಜನಾರ್ಧನ ಸ್ವಾಗತಿಸಿದರು. ಶ್ರೀಧರ ಭಟ್ ಕಾರ್ಯಕ್ರಮ ನಿರೂಪಿಸಿದರು.
.ಖರ್ಗೆಗೆ ಕಪ್ಪು–ಬಿಳುಪಿನ ವ್ಯತ್ಯಾಸ ಗೊತ್ತಿಲ್ಲ: ಉಪರಾಷ್ಟ್ರಪತಿ ರಾಧಾಕೃಷ್ಣನ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.