ಮಂಗಳೂರು: ದೇಶದ ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ವೃದ್ಧಿ, ತಲಾ ಆದಾಯ ಹೆಚ್ಚಳ, ಆರೋಗ್ಯ ಮತ್ತು ರಕ್ಷಣಾ ಕ್ಷೇತ್ರದಲ್ಲಿ ಸದೃಢಗೊಂಡರೆ ಭಾರತವು 2047ನೇ ಇಸವಿಯ ವೇಳೆಗೆ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಲು ಸಾಧ್ಯವಿದೆ. ಪ್ರಸ್ತುತ ದೇಶ ಮುನ್ನಡೆಯುತ್ತಿರುವ ಮಾರ್ಗವು ಈ ಗುರಿಗೆ ಪೂರಕವಾಗಿದೆ ಎಂಬ ಅಭಿಪ್ರಾಯ ‘ವಿಕಸಿತ ಭಾರತದತ್ತ ಭಾರತದ ಆರ್ಥಿಕತೆ’ ಕುರಿತ ಸಂವಾದದಲ್ಲಿ ವ್ಯಕ್ತವಾಯಿತು.

ಬಿಜೆಪಿ ದಕ್ಷಿಣ ಕನ್ನಡದ ಆರ್ಥಿಕ ಸೆಲ್ ವತಿಯಿಂದ ಇಲ್ಲಿ ನಡೆದ ಸಂವಾದದಲ್ಲಿ ಬಿಜೆಪಿ ಆರ್ಥಿಕ ಸೆಲ್ನ ರಾಜ್ಯ ಘಟಕದ ಸಂಯೋಜಕ ಪ್ರಶಾಂತ್ ಜಿ.ಎಸ್, ಆರ್ಥಿಕ ತಜ್ಞ ರಾಜೇಶ್ ರಾವ್, ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾ. ಗಣೇಶ್ ಕಾರ್ಣಿಕ್ ಭಾಗವಹಿಸಿದರು.

ಪ್ರಶಾಂತ್ ಜಿ.ಎಸ್ ಮಾತನಾಡಿ, ಹಿಂದಿನ ವರ್ಣಾಶ್ರಮವನ್ನು ಈಗ ಬಡವ, ಯುವ, ಅನ್ನದಾತ ಹಾಗೂ ನಾರಿಶಕ್ತಿ ಈ ನಾಲ್ಕು ಜಾತಿಗಳಾಗಿ ಪರಿಗಣಿಸಿ, ಇವರ ಉನ್ನತಿ ಶ್ರಮಿಸಿದಾಗ ದೇಶ ಅಭಿವೃದ್ಧಿ ಹೊಂದಲು ಸಾಧ್ಯವಿದೆ ಎಂದು ದೇಶದ ಪ್ರಧಾನಿ ಹೇಳಿದ್ದಾರೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಈ ನಾಲ್ಕು ವಿಭಾಗದವರಿಗೆ ಹಲವಾರು ಯೋಜನೆಗಳನ್ನು ಅನುಷ್ಠಾನಗೊಳಿಸಿದೆ ಎಂದರು.

ಪ್ರಸ್ತುತ ಭಾರತದ ಜನಸಂಖ್ಯೆ 140 ಕೋಟಿ ಇದ್ದು, ಇವರಲ್ಲಿ 7.75 ಕೋಟಿ ಜನರು ಮಾತ್ರ ಆದಾಯ ತೆರಿಗೆ ಫೈಲ್ ಮಾಡುತ್ತಾರೆ. ಹೊಸ ಆದಾಯ ತೆರಿಗೆ ಮಾನದಂಡದಂತೆ, ಇವರಲ್ಲಿ ಇನ್ನು ತೆರಿಗೆ ಪಾವತಿಸುವವರು 1.5 ಕೋಟಿ ಜನರು ಮಾತ್ರ. ಈ 1.5 ಕೋಟಿ ಜನರು ಇಡೀ ದೇಶದ ಜನರನ್ನು ಸಾಕುವಂತಾಗಿದೆ. ದೇಶದ ಶೇ 90ರಷ್ಟು ಜನರು ಆದಾಯ ತೆರಿಗೆ ಪಾವತಿಸುವ ಮಟ್ಟ ತಲುಪಿದಾಗ ದೇಶ ವಿಕಸಿತ ಭಾರತ ಆಗಲು ಸಾಧ್ಯ ಎಂದು ಹೇಳಿದರು.

ರಾಜೇಶ್ ರಾವ್ ಮಾತನಾಡಿ, ವಿಶ್ವಸಂಸ್ಥೆಯ 193 ಸದಸ್ಯ ರಾಷ್ಟ್ರಗಳಲ್ಲಿ 40 ಅಭಿವೃದ್ಧಿ ಹೊಂದಿದ ರಾಷ್ಟ್ರಗಳು, 21 ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳು ಇವೆ. ಚೀನಾ ಸಾಕಷ್ಟು ಮುಂದುವರಿದಿದ್ದರೂ, ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಪಟ್ಟಿಯಲ್ಲಿ ಈ ದೇಶದ ಹೆಸರು ಸೇರಿಕೊಂಡಿಲ್ಲ. ಅಮೆರಿಕ ಈ ಪಟ್ಟಿಯಲ್ಲಿದೆ. ಜನಸಂಖ್ಯೆ ಆಧಾರದಲ್ಲಿ ಭಾರತವನ್ನು ಚೀನಾ ಹೋಲಿಸಿಕೊಂಡು, ನಾವು ಅಭಿವೃದ್ಧಿಯತ್ತ ಯೋಚಿಸಬೇಕಾಗಿದೆ. ಚೀನಾದ ಜಿಡಿಪಿ ನಮಗಿಂತ ಸಾಕಷ್ಟು ಹೆಚ್ಚಿದೆ. ಭಾರತದ ಪ್ರಸ್ತುತ ಜಿಡಿಪಿ 4.2 ಟ್ರಿಲಿಯನ್ ಇದ್ದು, 2047ರ ವೇಳೆಗೆ 25 ಟ್ರಿಲಿಯನ್ ತಲುಪಬೇಕಾಗಿದೆ ಎಂದರು.

ನಮ್ಮ ತಲಾ ಆದಾಯ ಹೆಚ್ಚಳ ತಲಾ ಆದಾಯ ₹1 ಲಕ್ಷ ತಲುಪಬೇಕು. ಮನುಷ್ಯನ ಜೀವಿತಾವಧಿ ಹೆಚ್ಚಳ, ಕೈಗಾರಿಕೀಕರಣ ಹೆಚ್ಚಳ, ಅಧಿಕ ಪ್ರಮಾಣದ ರಫ್ತು, ಖಾಸಗಿ ಕ್ಷೇತ್ರದ ಸಕ್ರಿಯ ಪಾಲ್ಗೊಳ್ಳುವಿಕೆ ಇವೆಲ್ಲವೂ ಸಾಕಾರಗೊಂಡಾಗ ವಿಕಸಿತ ಭಾರತದ ಗುರಿ ತಲುಪುವುದು ಕಷ್ಟವಲ್ಲ ಎಂದು ಅವರು ಹೇಳಿದರು.

ಶಾಸಕ ವೇದವ್ಯಾಸ ಕಾಮತ್ ಕಾರ್ಯಕ್ರಮ ಉದ್ಘಾಟಿಸಿದರು. ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸತೀಶ್ ಕುಂಪಲ ಅಧ್ಯಕ್ಷತೆ ವಹಿಸಿದ್ದರು. ಪ್ರೇಮಾನಂದ ಶೆಟ್ಟಿ ಇದ್ದರು. ಬಿಜೆಪಿ ಆರ್ಥಿಕ ಸೆಲ್ನ ಸಹ ಸಂಯೋಜಕ ಎಸ್.ಎಸ್.ನಾಯಕ್ ಸಂವಾದ ಸಮನ್ವಯಕಾರರಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.