ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮೀಣ ಸೊಗಡನ್ನು ಪರಿಚಯಿಸಿ: ಡಾ.ರವೀಂದ್ರನಾಥ್ ಶಾನುಭೋಗ್

ವಿಟ್ಲ: ಭೂಮಿ ತಾಯಿ ಹಸಿರು ಹೊದಿಕೆ ಕಾರ್ಯಕ್ರಮ 
Last Updated 8 ಆಗಸ್ಟ್ 2022, 5:25 IST
ಅಕ್ಷರ ಗಾತ್ರ

ವಿಟ್ಲ: ಗ್ರಾಮೀಣ ಸೊಗಡನ್ನು ಮುಂದಿನ ಜನಾಂಗಕ್ಕೆ ಪರಿಚಯಿಸುವ ಕಾರ್ಯ ನಿರಂತರವಾಗಿ ನಡೆಯಬೇಕು.ಮಂಗಳೂರು ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟ ಮಾಡುತ್ತಿರುವ ಕಾರ್ಯಗಳು ಎಲ್ಲರಿಗೂ ಮಾದರಿ ಎಂದು ಬಳಕೆದಾರ ವೇದಿಕೆ ಬಸೂರು ಮತ್ತು ಉಡುಪಿ ಮಾನವ ಹಕ್ಕು ಪ್ರತಿಷ್ಠಾನದ ಡಾ.ರವೀಂದ್ರನಾಥ್ ಶಾನುಭೋಗ್ ಹೇಳಿದರು.

ಪುಣಚದಲ್ಲಿ ಮಂಗಳೂರು ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟ (ಎನ್.ಇ.ಸಿ.ಎಫ್) ವತಿಯಿಂದ ಭಾನುವಾರ ‘ಭೂಮಿ ತಾಯಿ ಹಸಿರು ಹೊದಿಕೆ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಎನ್.ಇ.ಸಿ.ಎಫ್. ಕಾರ್ಯದರ್ಶಿ ಶಶಿಧರ ಶೆಟ್ಟಿ ಮಾತನಾಡಿ, ಪಶ್ಚಿಮಘಟ್ಟದ ಹಸಿರು ಹೊದಿಕೆ ಕಾರ್ಯಕ್ರಮವನ್ನು ಜೂನ್‌ನಿಂದ ಆಗಸ್ಟ್ ತನಕ ಪ್ರತಿ ಭಾನುವಾರ ಹಾಕಿಕೊಂಡಿದ್ದು, ಅದರಲ್ಲಿ ಭಾಗವಹಿಸಿದ ಎಲ್ಲರೂ ಒಟ್ಟಾಗಿ ಒಂದು ದಿನ ಆಟೋಟಗಳನ್ನು ಆಡುವ ಮೂಲಕ ಮನರಂಜನೆಯನ್ನು ಮಾಡುವ ಜತೆಗೆ ಗದ್ದೆ ಕೃಷಿಯ ಮಾಹಿತಿಯನ್ನು ಪಡೆದುಕೊಳ್ಳುವ ಕಾರ್ಯ ಇದಾಗಿದೆ ಎಂದರು.

ಸಾವಯವ ಕೃಷಿಕ ಮಾಹಿತಿಯನ್ನು ಕೃಷ್ಣಪ್ಪ ಪುರುಷ ಕೇಪು ನೀಡಿದರು. ದೇವರಗುಂಡಿ ಮೋರಿಸ್ ಟೆಲ್ಲಿಸ್ ಅವರ ಗದ್ದೆಯಲ್ಲಿ ನೇಜಿ ನಡುವ ಪ್ರಾತ್ಯಕ್ಷಿಕೆ ನಡೆಯಿತು. ಗ್ರೀನ್ ಫಿಲ್ಡ್ ವಿಕ್ಟರ್ ಕುಠೀನ್ ಅವರ ಗದ್ದೆಯಲ್ಲಿ ಕ್ರೀಡಾಕೂಟ ನಡೆಯಿತು.

ಮಂಗಳೂರು ತಂಡದ ಹರೀಶ್ ಪಡೀಲ್, ಮಾದವ ಭಕ್ತ, ದಿನೇಶ್ ಶೆಟ್ಟಿ, ತನುಜ, ಮಾರ್ಕ್ ರಿಚರ್ಡ್ ಪಿರೇರಾ, ಗೋಪಿಕಾ, ಸುರಕ್ಷಾ, ಪುತ್ತೂರು ತಂಡದ ದಿನೇಶ್ ಹೆಗಡೆ ಪುತ್ತೂರು, ರಾಜೇಶ್ ಶರ್ಮ, ಸುಧೀರ್, ರೋಷನ್ ಪುಣಚ, ವೆಂಕಟ್ರಮಣ ಪುಣಚ, ಅಶೋಕ್ ಅಡ್ಯಾಂತಾಯ ಉಪ್ಪಿನಂಗಡಿ, ವಸಂತ ನಾಯಕ್, ಯೋಗೀಶ್ ಕಾಶಿಮಠ, ರಾಜ್ಯ ರೈತ ಸಂಘ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಶ್ರೀಧರ ಶೆಟ್ಟಿ ಬೈಲುಗುತ್ತು ಇದ್ದರು.

ಮುಟ್ಟಾಳೆ ತಯಾರಕ ಗಂಗಯ್ಯ ನಲಿಕೆ, ಬುಟ್ಟಿ ಹೆಣೆಯುವ ಸೋನೆ ಪುಣಚ, ಮಡಿಕೆ ತಯಾರಕ ಕೃಷ್ಣಪ್ಪ ಕುಲಾಲ್, ಸಾಮಾಜಿಕ ಹೋರಾಟಗಾರ ಮುರುವ ಮಹಾಬಲ ಭಟ್ ಅವರನ್ನು ಸನ್ಮಾನಿಸಲಾಯಿತು. ಪಡುಬಿದ್ರಿ ಜೈನ್ ಟ್ಯೂಬ್ಸ್ ಮಾಲೀಕ ದಿವ್ಯಕುಮಾರ್ ಜೈನ್, ಅನುಜ ದಿವ್ಯಕುಮಾರ್, ಆಳ್ವಾಸ್ ಎಜುಕೇಶನ್ ಫೌಂಡೇಷನ್ ಟ್ರಸ್ಟಿ ವಿವೇಕ್ ಆಳ್ವ, ಗ್ರೀಷ್ಮಾ ಆಳ್ವ ಅವರನ್ನು ಗೌರವಿಸಲಾಯಿತು.

ಓಟ, ರಿಲೇ ಓಟ, ಮಡಿಕೆ ಒಡೆಯುವುದು, ಕಬಡ್ಡಿ, ನಿಧಿ ಶೋಧ, ಹಿಮ್ಮುಖನಡಿಗೆ, ಹಗ್ಗಜಗ್ಗಾಟ, ಉಪ್ಪುಗೋಣಿ, ಅಡಿಕೆ ಹಾಳೆ ಎಳೆಯುವ ಆಟಗಳು ಗದ್ದೆಯಲ್ಲಿ ನಡೆಯಿತು. ಮಕ್ಕಳಿಗೆ, ಯುವಕರಿಗೆ ಹಾಗೂ ಹಿರಿಯರಿಗೆ ಪ್ರತ್ಯೇಕ ವಿಭಾಗದಲ್ಲಿ ಸ್ಪರ್ಧೆಗಳು ನಡೆಯಿತು. ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT