ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಗರಿಕರಿಂದ ದುರಸ್ತಿ, ಚುನಾವಣೆ ಬಹಿಷ್ಕಾರದ ಎಚ್ಚರಿಕೆ

ಹೊಸಮಠ-ಉಳಿಪ್ಪು ಕೂಡಿಗೆ ರಸ್ತೆಯ ದುರವಸ್ಥೆ
Last Updated 23 ಜುಲೈ 2022, 13:50 IST
ಅಕ್ಷರ ಗಾತ್ರ

ಕಡಬ(ಉಪ್ಪಿನಂಗಡಿ):ಕಡಬ ತಾಲ್ಲೂಕು ಕುಟ್ರುಪಾಡಿ ಗ್ರಾಮದ ವಾಳ್ಯ-ಉಳಿಪ್ಪು-ಕೂಡಿಗೆ ಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಕೆಸರುಗದ್ದೆಯಂತಾಗಿದ್ದು, ಗ್ರಾಮಸ್ಥರು ಕೆಂಪು ಕಲ್ಲು ಹಾಸಿ ರಸ್ತೆಯನ್ನು ದುರಸ್ತಿ ಮಾಡಿದರು.

ಹೊಸಮಠದಿಂದ ಉಳಿಪ್ಪು-ಕೂಡಿಗೆಯವರೆಗೆ ಸುಮಾರು 6 ಕಿ.ಮೀ. ಅಂತರವಿದ್ದು, ವಾಳ್ಯದವರೆಗೆ 2 ಕಿ.ಮೀ. ರಸ್ತೆ ಡಾಮರೀಕರಣ ಹಾಗೂ ಕಾಂಕ್ರಿಟ್‌ ಮಾಡಲಾಗಿದೆ. ಇನ್ನೂ 4 ಕಿ.ಮೀ. ಕಚ್ಚಾ ರಸ್ತೆ ಇದೆ. ಉಳಿಪ್ಪು ಭಾಗದಲ್ಲಿ ಸುಮಾರು 200ಕ್ಕಿಂತಲೂ ಹೆಚ್ಚು ಮನೆಗಳು ಇದ್ದು, ಇಲ್ಲಿನ ಜನರಿಗೆ ಪೇಟೆ ಸಂಪರ್ಕಕ್ಕೆ ಏಕೈಕ ರಸ್ತೆ ಇದಾಗಿದೆ.

ಮಳೆಗಾಲದಲ್ಲಿ ಈ ರಸ್ತೆಯ ಪರಿಸ್ಥಿತಿ ಹೇಳತೀರದು. ಕೆಸರಿನ ಸಿಂಚನದೊಂದಿಗೆ ಶಾಲೆಗೆ ಹೆಜ್ಜೆ ಹಾಕಬೇಕಾಗಿದೆ. ಅಲ್ಲಲ್ಲಿ ನೀರು ನಿಂತು ರಸ್ತೆ ಸಂಪೂರ್ಣ ಕೆಸರುಗದ್ದೆಯಂತಾಗಿದೆ. ನಡೆದಾಡುವುದಕ್ಕೂ ಸಾಧ್ಯವಿಲ್ಲ ಎಂದು ವಿದ್ಯಾರ್ಥಿಗಳು ಅಳಲು ತೋಡಿಕೊಂಡಿದ್ದಾರೆ.

12 ವರ್ಷದಿಂದ ಹೋರಾಟ:
ಈ ರಸ್ತೆಯನ್ನು ಅಭಿವೃದ್ಧಿ ಪಡಿಸಬೇಕು ಎಂಬ ಬೇಡಿಕೆ 40 ವರ್ಷಗಳಿಂದ ಇದೆ. 12 ವರ್ಷಗಳಿಂದ ಶಾಸಕರಿಗೆ, ಸಂಸದರಿಗೆ, ಅಧಿಕಾರಿಗಳಿಗೆ ಮನವಿ, ಪ್ರತಿಭಟನೆ, ಒತ್ತಡಗಳನ್ನು ತರಲಾಗಿದ್ದರೂ ಯಾವುದೇ ಪ್ರಯೋಜನವಾಗಿಲ್ಲ, ಯಾರೂ ಅಭಿವೃದ್ದಿ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಗ್ರಾಮ ಪಂಚಾಯಿತಿಯಿಂದ ವರ್ಷಕ್ಕೊಮ್ಮೆ ₹5 ರಿಂದ ₹10 ಸಾವಿರ ಖರ್ಚು ಮಾಡಿ ತೇಪೆ ಹಾಕುವುದು ಬಿಟ್ಟರೆ ಬೇರೆ ಯಾವುದೇ ಅನುದಾನ ಮಂಜೂರು ಆಗಿಲ್ಲ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT