ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವಕರ್ಮರ ಕುಲಕಸುಬು ನಶಿಸದಿರಲಿ

‘ವಿಶ್ವಕರ್ಮ ಜಯಂತಿ‘ಯಲ್ಲಿ ಶಾಸಕ ವೇದವ್ಯಾಸ ಕಾಮತ್‌
Last Updated 17 ಸೆಪ್ಟೆಂಬರ್ 2022, 14:46 IST
ಅಕ್ಷರ ಗಾತ್ರ

ಮಂಗಳೂರು: ‘ಶಿಲೆಯಲ್ಲಿ ಕಲೆ ಅರಳಿಸುವ ವಿಶ್ವಕರ್ಮ ಸಮುದಾಯದವರ ಕೆಲಸಗಳು ಜಗತ್ತಿನ ವಿವಿಧೆಡೆಗಳಿಂದ ಪ್ರವಾಸಿಗರನ್ನು ದೇಶಕ್ಕೆ ಆಕರ್ಷಿಸುತ್ತಿವೆ.ಈ ಸಮುದಾಯದ ಕುಲ ಕಸುಬುಗಳು ಆಧುನಿಕತೆಯ ಭರಾಟೆಗೆ ಸಿಲುಕಿ ನಶಿಸಿ ಹೋಗುವ ಆತಂಕ ಎದುರಿಸುತ್ತಿವೆ. ಹೀಗಾಗುವುದಕ್ಕೆ ಅವಕಾಶ ನೀಡಬಾರದು’ ಎಂದು ಶಾಸಕ ಡಿ.ವೇದವ್ಯಾಸ ಕಾಮತ್ ಹೇಳಿದರು.

ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ರಥಬೀದಿಯ ಕಾಳಿಕಾಂಬ ವಿನಾಯಕ ದೇವಸ್ಥಾನದ ಆಶ್ರಯದಲ್ಲಿ ಶನಿವಾರ ಇಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶ್ವಕರ್ಮ ಜಯಂತಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಇತರ ಸಮುದಾಯಗಳಿಗೆ ಹೋಲಿಸಿದರೆ ವಿಶ್ವಕರ್ಮ ಸಮುದಾಯದವರು ಬಹಳ ಶ್ರಮಿಕರು. ಆಧುನಿಕತೆಗೆ ಒಗ್ಗಿಕೊಂಡು, ಯಂತ್ರಗಳ ಬಳಕೆಗೆ ಒಗ್ಗಿಕೊಂಡು ಕುಲಕಸುಬುಗಳನ್ನು ಮುಂದುವರಿಸುವ ಅನಿವಾರ್ಯ ಇದೆ’ ಎಂದರು.

‘ಪುರಾಣಗಳಲ್ಲಿ ಉಲ್ಲೇಖವಾಗಿರುವಂತೆ, ಹಲವಾರು ನಗರಗಳ ನಿರ್ಮಾಣ, ದೇಶದ ಅಪೂರ್ವ ಶಿಲ್ಪಕಲೆಗಳೆಲ್ಲವೂ ವಿಶ್ವಕರ್ಮ ಸಮುದಾಯದವರ ಕೊಡುಗೆ. ಬಂಗಾರ, ಮರ, ಕಬ್ಬಿಣ ಸೇರಿದಂತೆ ಪಂಚ ಕಸುಬುಗಳನ್ನು ನಿರ್ವಹಿಸುವ ಈ ಸಮುದಾಯದವರು ಕಲ್ಲಿನಿಂದ ನಿರ್ಮಿಸುವ ಮೂರ್ತಿ ಭಕ್ತಿಯ ವಾತಾವರಣವನ್ನು ಸೃಷ್ಟಿಸುತ್ತದೆ’ ಎಂದರು.

ಮಂಗಳೂರಿನ ಮೇಯರ್ ಜಯಾನಂದ ಅಂಚನ್, ಉಪ ಮೇಯರ್ ಪೂರ್ಣಿಮಾ, ತಹಶೀಲ್ದಾರ್ ಪುರಂದರ, ದೇವಸ್ಥಾನದ ಆಡಳಿತ ಮೊಕ್ತೇಸರ ಕೆ.ಕೇಶವ ಆಚಾರ್ಯ, ಎರಡನೇ ಮೊಕ್ತೇಸರ ಬೆಳುವಾಯಿ ಸುಂದರ ಆಚಾರ್ಯ, ಮೂರನೇ ಮೊಕ್ತೇಸರ ಚಿಲಿಂಬಿ ಲೋಕೇಶ್ ಆಚಾರ್ಯ ವೇದಿಕೆಯಲ್ಲಿದ್ದರು.

ವೇದ ಹಾಗೂ ಸಂಸ್ಕೃತ ಶಿಕ್ಷಕರರಾದಬೇಲೂರಿನ ವಿಶ್ವನಾಥ ಶರ್ಮ ಅವರು ವಿಶ್ವಕರ್ಮ ಜಯಂತಿಯ ಸಂದೇಶ ನೀಡಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜೇಶ್ ಜಿ. ಸ್ವಾಗತಿಸಿದರು. ಸುಜೀರ್‌ ವಿನೋದ್‌ ಹಾಗೂ ಭರತ್‌ರಾಜ್‌ ಬೈಕಂಪಾಡಿ ಕಾರ್ಯಕ್ರಮ ನಿರ್ವಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT