ಶನಿವಾರ, 12 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮೊಬೈಲ್ ಅತಿಯಾದ ಬಳಕೆಯಿಂದ ಮಕ್ಕಳಲ್ಲಿ ದೃಷ್ಟಿದೋಷ: ಡಾ.ರಾಮಚಂದ್ರ

ಕಾವು ನನ್ಯದಲ್ಲಿ ನಡೆದ ಕಣ್ಣಿನ ಉಚಿತ ತಪಾಸಣಾ ಶಿಬಿರದಲ್ಲಿ
Published : 16 ಸೆಪ್ಟೆಂಬರ್ 2024, 15:31 IST
Last Updated : 16 ಸೆಪ್ಟೆಂಬರ್ 2024, 15:31 IST
ಫಾಲೋ ಮಾಡಿ
Comments

ಪುತ್ತೂರು: ಇತ್ತೀಚಿನ ದಿನಗಳಲ್ಲಿ ಅತಿಯಾದ ಮೊಬೈಲ್ ಬಳಕೆಯಿಂದಾಗಿ ಮಕ್ಕಳಲ್ಲಿ ಕಣ್ಣಿನ ದೃಷ್ಟಿ ದೋಷ ಕಂಡು ಬರುತ್ತಿದ್ದು, ಈ ಬಗ್ಗೆ ಜಾಗೃತಿ ಅಗತ್ಯ. ಈ ಬಗ್ಗೆ ಮಕ್ಕಳ ಪೋಷಕರೂ ಹೆಚ್ಚಿನ ಕಾಳಜಿ ವಹಿಸುವ ಅಗತ್ಯವಿದೆ ಎಂದು ನ್ಯೂವಿಷನ್ ಕಾರ್ಯಕ್ರಮದ ಮ್ಯಾನೇಜರ್‌ ಡಾ.ರಾಮಚಂದ್ರ ಹೇಳಿದರು.

ಪುತ್ತೂರು ತಾಲ್ಲೂಕಿನ ಮಾಡ್ನೂರು ಗ್ರಾಮದ ನನ್ಯ ಜನಮಂಗಲ ಸಭಾಭವನದಲ್ಲಿ ಕಾವು ನನ್ಯ ತುಡರ್ ಯುವಕ ಮಂಡಲದ ನೇತೃತ್ವದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಂಧತ್ವ ನಿವಾರಣಾ ವಿಭಾಗದ ವತಿಯಿಂದ, ಅರಿಯಡ್ಕ ಗ್ರಾಮ ಪಂಚಾಯಿತಿ ಸಹಕಾರದಲ್ಲಿ ನಡೆದ ಕಣ್ಣಿನ ಉಚಿತ ತಪಾಸಣಾ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಕಾವು ಲಯನ್ಸ್ ಕ್ಲಬ್ ಅಧ್ಯಕ್ಷ ಜಗನ್ನಾಥ ರೈ ಗುತ್ತು ಅವರು ಕಾರ್ಯಕ್ರಮ ಉದ್ಘಾಟಿಸಿದರು.

ನಿವೃತ್ತ ಶಿಕ್ಷಕ ರಾಮಣ್ಣ ಡಿ.ಅಚಾರಿಮೂಲೆ ಮಾತನಾಡಿದರು.

ತುಡರ್ ಯುವಕ ಮಂಡಲದ ಅಧ್ಯಕ್ಷ ಪುರುಷೋತ್ತಮ ಆಚಾರ್ಯ ನನ್ಯ ಅಧ್ಯಕ್ಷತೆ ವಹಿಸಿದ್ದರು.

ಗೌರವಾಧ್ಯಕ್ಷರಾದ ರಾಮಣ್ಣ ನಾಯ್ಕ, ಶೇಸಪ್ಪ ಗೌಡ ಪರನೀರು, ಪದಾಧಿಕಾರಿಗಳಾದ ಹರ್ಷಿತ್‌ ಎ.ಆರ್., ಲಿಂಗಪ್ಪ ನಾಯ್ಕ, ಜಗನ್ನಾಥ ಗೌಡ ಪರನೀರು, ಭವಿತ್ ರೈ, ರತೀಶ್ ಕೌಡಿಚ್ಚಾರು, ನಿರಂಜನ್ ರಾವ್, ರಮೇಶ್ ಗೌಡ ಆಚಾರಿಮೂಲೆ, ಬಾಲಕೃಷ್ಣ ಪಾಟಾಳಿ ನನ್ಯ, ರಾಜೇಶ್ ಬಿ. ಭಾಗವಹಿಸಿದ್ದರು.

ಉಪಾಧ್ಯಕ್ಷ ಯತೀಶ್ ರೈ ಸ್ವಾಗತಿಸಿದರು. ಮಾಜಿ ಅಧ್ಯಕ್ಷ ಜಗದೀಶ್ ನಾಯ್ಕ ಆಚಾರಿಮೂಲೆ ವಂದಿಸಿದರು. ಮಾಜಿ ಅಧ್ಯಕ್ಷ ಸುನೀಲ್ ನಿಧಿಮುಂಡ ನಿರೂಪಿಸಿದರು.

85 ಮಂದಿಗೆ ಉಚಿತ ಕನ್ನಡಕ: ಶಿಬಿರದಲ್ಲಿ 115 ಮಂದಿ ಭಾಗವಹಿಸಿದ್ದರು. ಈ ಪೈಕಿ ದೃಷ್ಟಿ ದೋಷವಿರುವ 85 ಮಂದಿಗೆ ಉಚಿತವಾಗಿ ಕನ್ನಡಕ ವಿತರಿಸಲಾಯಿತು. ಡಾ.ರಾಮಚಂದ್ರ, ಅಭಿಲಾಷ್, ರಕ್ಷತಾ ಮತ್ತು ಪ್ರಜ್ಞಾ ಅವರು ಶಿಬಿರ ನಡೆಸಿಕೊಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT