ವಿಟ್ಲ: ಮಾಣಿ ಭಾಗದ ಕರಿಂಕದಲ್ಲಿ 50 ವರ್ಷದ ಹಿಂದೆ ಹಾಕಿದ ತಂತಿ ತುಂಡಾಗಿ ಬೀಳುತ್ತಿದೆ. ಹಿಂದಿನ ಜನ ಸಂಪರ್ಕ ಸಭೆಯಲ್ಲಿ ಅರ್ಜಿ ನೀಡಿದ್ದರೂ ಕ್ರಮ ಕೈಗೊಂಡಿಲ್ಲ. ಮೀಟರ್ ಓದುವಾಗ ಯುನಿಟ್ ಹೆಚ್ಚು ಬರುತ್ತಿದ್ದು, ದುಪ್ಪಟ್ಟು ಹಣ ವಿಧಿಸಿದ್ದನ್ನು ಹಿಂತಿರುಗಿಸಬೇಕು ಎಂಬ ಆಗ್ರಹ ಮಂಗಳವಾರ ಇಲ್ಲಿ ನಡೆದ ಮೆಸ್ಕಾಂ ವಿಟ್ಲ ಉಪವಿಭಾಗದ ಜನ ಸಂಪರ್ಕ ಸಭೆಯಲ್ಲಿ ವ್ಯಕ್ತವಾಯಿತು.

ಮೀಟರ್ ರೀಡಿಂಗ್ ಸಮಯಕ್ಕೆ ಸರಿಯಾಗಿ ನಡೆಯುತ್ತಿಲ್ಲ. ಕೋಡಪದವು ಭಾಗದಲ್ಲಿ ಲಿಂಕ್ ಲೈನ್ ನೀಡುವ ಬಗ್ಗೆ ಹಲವು ಸಮಯದಿಂದ ಬೇಡಿಕೆ ಸಲ್ಲಿಸಲಾಗುತ್ತಿದೆ. ಒಂದು ಭಾಗದಲ್ಲಿ ಸಮಸ್ಯೆಯಾದರೆ, ಎ, ಬಿ ಸ್ವಿಚ್ ಮೂಲಕ ಎಲ್ಲ ಭಾಗಕ್ಕೂ ವಿದ್ಯುತ್ ಕಡಿತ ಮಾಡುವುದು ಸರಿಯಲ್ಲ ಎಂದು ಗ್ರಾಹಕರು ಹೇಳಿದರು.

ಮಳೆಗಾಲದಲ್ಲಿ ಉಂಟಾಗುವ ಸಮಸ್ಯೆಗಳನ್ನು ಸರಿಪಡಿಸಬೇಕು. ಎನ್ಒಸಿ, ಪೆರ್ನೆ ಸೆಕ್ಷನ್ ಕಚೇರಿ, ಓವರ್ ಲೋಡ್ ಸಮಸ್ಯೆ, ಕೋಡಂದೂರು ಭಾಗದ ಸಮಸ್ಯೆ ಬಗ್ಗೆ ಚರ್ಚೆ ನಡೆಯಿತು.

ಪುತ್ತೂರು ಗ್ಯಾರಂಟಿ ಸಮಿತಿ ಅಧ್ಯಕ್ಷ ಉಮಾನಾಥ ರೈ, ಬಂಟ್ವಾಳ ಕಾರ್ಯನಿರ್ವಾಹಕ ಎಂಜಿನಿಯರ್ ಸಂತೋಷ್ ನಾಯಕ್, ಬಂಟ್ವಾಳದ ಲೆಕ್ಕಾಧಿಕಾರಿ ಚಂದ್ರಶೇಖರ್, ವಿಟ್ಲದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಗೋವಿಂದರಾಜು ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260325-29-765944116

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.