ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಾಮುಖಿ ಕಾರ್ಯದಿಂದ ದೇವರ ಅನುಗ್ರಹ

ವಿಟ್ಲ ಶೋಕಮಾತಾ ದೇವಾಲಯದ ಸಮುದಾಯ ಭವನ ಲೋಕಾರ್ಪಣೆ: : ಡಾ.ಪೀಟರ್ ಪಾವ್ಲ್ ಸಲ್ದಾನ್ಹಾ 
Last Updated 13 ಆಗಸ್ಟ್ 2022, 16:23 IST
ಅಕ್ಷರ ಗಾತ್ರ

ವಿಟ್ಲ: ವಿಟ್ಲ ಶೋಕಮಾತಾ ದೇವಾಲಯದ ಶತಮಾನೋತ್ಸವ ಸ್ಮಾರಕ ಸಮುದಾಯ ಭವನದ ಉದ್ಘಾಟನಾ ಸಮಾರಂಭ ಶನಿವಾರ ನಡೆಯಿತು.

ಉದ್ಘಾಟಿಸಿದ ಮಂಗಳೂರು ಕ್ರೈಸ್ತ ಧರ್ಮಪ್ರಾಂತ್ಯದ ಅಧ್ಯಕ್ಷ ಡಾ.ಪೀಟರ್ ಪಾವ್ಲ್ ಸಲ್ದಾನ್ಹಾ ಮಾತನಾಡಿ, ಸಮಾಜಮುಖಿ ಕಾರ್ಯಗಳಿಂದ ಭಕ್ತರು ದೇವರ ಪ್ರೀತಿಗೆ ಪಾತ್ರಾರಾಗುತ್ತಾರೆ ಎಂದರು.

ವಿಧಾನಸಭೆಯಲ್ಲಿನ ವಿರೋಧ ಪಕ್ಷದ ಉಪನಾಯಕ ಶಾಸಕ ಯು.ಟಿ ಖಾದರ್ ಮಾತನಾಡಿ, ಕ್ರೈಸ್ತ ಸಮುದಾಯ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿ ನಿರ್ಮಿಸಿದೆಎಂದುಶ್ಲಾಘಿಸಿದರು.

ಮಾಜಿ ಸಚಿವ ಬಿ ರಮಾನಾಥ ರೈ ಮಾತನಾಡಿ, ಸಾಮಾಜಿಕ ಸಾಮರಸ್ಯದ ಮೂಲಕ ಜೀವನ ನಡೆಸಿದಾಗ, ಸಮಾಜಿಕ ಜೀವನ ಉತ್ತಮವಾಗಿರುತ್ತದೆ ಎಂದರು.

ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಮಾತನಾಡಿ, ಈ ಭವನದಿಂದ ಎಲ್ಲರಿಗೂ ಅನುಕೂಲವಾಗಲಿದೆ. ಈ ಭವನದಿಂದ ವಿಟ್ಲಕ್ಕೆ ಕಿರೀಟ ಬಂದಾಂತಾಗಿದೆ ಎಂದರು.

ಶಾಸಕ ಸಂಜೀವ ಮಠಂದೂರು, ಕಾಸ್ಸಿಯಾ ಸಂತ ರೀಟಾ ದೇವಾಲಯದ ಧರ್ಮಗುರು ಎರಿಕ್ ಕ್ರಾಸ್ತ ಮತ್ತು ವಿಟ್ಲ ಶೋಕಮಾತೆಯ ದೇವಾಲಯದ ಧರ್ಮಗುರು ಐವನ್ ಮೈಕಲ್ ರೊಡ್ರಿಗಸ್ ಮಾತನಾಡಿದರು.

ಪಾಲನ ಆಯೋಗದ ಸಂಯೋಜಕ ಲುವಿಸ್ ಮಸ್ಕರೇನಸ್, ಪ್ರಮುಖರಾದ ಪೀಟರ್ ಲಸ್ರಾದೊ, ಆ್ಯಂಟನಿ ಲೋಬೊ, ಸಿ.ಎಫ್ ಸಿಕ್ವೇರ, ರಾಬರ್ಟ್ ಮಸ್ಕರೇನಸ್ ಅವರನ್ನು ಸನ್ಮಾನಿಸಲಾಯಿತು. ಭವನ ನಿರ್ಮಿಸಲು ಸಹಕಾರ ನೀಡಿದ ಗಣ್ಯರನ್ನು ಗೌರವಿಸಲಾಯಿತು.

ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ಮನೋಹರ್ ಲ್ಯಾನ್ಸಿ ಡಿ ಸೋಜ, ಕಾರ್ಯದರ್ಶಿ ವಿಜಯ್ ಪಾಯಸ್,
ಜೇಸನ್ ಪಿಂಟೊ ಮತ್ತು ಜಾಸ್ಮಿನ್ ವೇಗಸ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT