ವಿಟ್ಲ: ವಿಟ್ಲ ತಾಲ್ಲೂಕು ರಚನೆ ಮತ್ತು ವಿಟ್ಲ ವಿಧಾನಸಭಾ ಕ್ಷೇತ್ರದ ಮರುಸ್ಥಾಪನೆಗೆ ಒತ್ತಾಯಿಸಿ ವಿಟ್ಲದಲ್ಲಿ ಸಭೆ ನಡೆಸಿ ನೂತನ ಸಮಿತಿ ರಚಿಸಲಾಯಿತು.

ವಿಟ್ಲ ತಾಲ್ಲೂಕು ರಚನೆ ಮತ್ತು ವಿಧಾನಸಭೆ ಕ್ಷೇತ್ರ ಮರುಸ್ಥಾಪನೆ ಆಗ್ರಹ ಹೋರಾಟ ಸಮಿತಿಯ ಗೌರವಾಧ್ಯಕ್ಷರಾಗಿ ವಿಟ್ಲ ಅರಮನೆಯ ಬಂಗಾರು ಅರಸರು ಮತ್ತು ಹಿರಿಯ ಹೋರಾಟಗಾರ ಮುರುವ ನಡುಮನೆ ಮಹಾಬಲ ಭಟ್ ಅವರನ್ನು ಆಯ್ಕೆ ಮಾಡಲಾಯಿತು.

ಅಧ್ಯಕ್ಷರಾಗಿ ಬಿ.ಕೆ.ಬಶೀರ್, ಸಂಚಾಲಕರಾಗಿ ರಾಮಣ್ಣ ಪಾಲಿಗೆ, ಉಪಾಧ್ಯಕ್ಷರಾಗಿ ಹಸೈನಾರ್ ಕಡಂಬು, ಸುದರ್ಶನ ಪಡಿಯಾರ್, ಪ್ರಧಾನ ಕಾರ್ಯದರ್ಶಿಯಾಗಿ ರಮಾನಾಥ ವಿಟ್ಲ, ಕಾರ್ಯದರ್ಶಿಯಾಗಿ ಕಾನ ಈಶ್ವರ ಭಟ್, ಸಂಘಟನಾ ಕಾರ್ಯದರ್ಶಿಯಾಗಿ ಅಬ್ದುಲ್ ರಹಮಾನ್ ನೆಲ್ಲಿಗುಡ್ಡೆ , ಜತೆ ಕಾರ್ಯ ದರ್ಶಿಯಾಗಿ ಸದಾನಂದ ಗೌಡ ಸೇರಾಜೆ ಅವರನ್ನು ಆರಿಸಲಾಯಿತು. ಸದಸ್ಯರಾಗಿ ಜಾನ್ ಡಿಸೋಜ ,ಅಶ್ವಿನಿ ಪೆರುವಾಯಿ, ಪ್ರೇಮಲತಾ ಆಯ್ಕೆಯಾದರು.

ಸಭೆಯಲ್ಲಿ ಉಪಸ್ಥಿತರಿದ್ದ ಮುರುವ ನಡುಮನೆ ಮಹಾಬಲ ಭಟ್, ಬಿ.ಕೆ.ಬಶೀರ್, ಕಾನ ಈಶ್ವರ ಭಟ್, ಅಬ್ದುಲ್ ರಹಿಮಾನ್ ನೆಲ್ಲಿಗುಡ್ಡೆ, ರಾಮಣ್ಣ ಪಾಲಿಗೆ, ರಮಾನಾಥ ವಿಟ್ಲ, ಜಯರಾಮ ಬಳ್ಳಾಲ್, ಹಸೈನಾರ್ ಕಡಂಬು ಸಲಹೆ ಸೂಚನೆ ಮುಂದಿಟ್ಟರು.

ಉದ್ದೇಶಿತ ವಿಟ್ಲ ತಾಲೂಕು ವ್ಯಾಪ್ತಿಯ ಗ್ರಾಮ ಪಂಚಾಯಿತಿಗಳಲ್ಲಿ ಸಭೆ ನಡೆಸಿ ಅಲ್ಲಿನ ಸದಸ್ಯರನ್ನು ಸೇರಿಸಿಕೊಳ್ಳುವುದು. ವ್ಯಾಪ್ತಿಯ ಶಾಸಕರಿಗೆ, ಸಭಾಪತಿಗೆ ಮನವಿ ಮಾಡುವುದು. ವಿಟ್ಲದಲ್ಲಿ ಸಭೆ ನಡೆಸುವುದು ಇತ್ಯಾದಿ ನಿರ್ಣಯ ಕೈಗೊಳ್ಳಲಾಯಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260525-29-203653563

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.