ವಿಟ್ಲ: ‘ಮೇಗಿನಪೇಟೆಯಲ್ಲಿ ಎಲ್ಲವೂ ರಸ್ತೆಯ ಬದಿಗೆ ಬರುತ್ತಿದ್ದು, ಅದನ್ನು ತಡೆಯಬೇಕು. ನಿಯಮ ಬಾಹಿರವಾಗಿ ರಸ್ತೆ ಬದಿ ನಿಲ್ಲಿಸುವ ವಾಹನಗಳನ್ನು ಕಸದ ವಾಹನದ ಟೋಯಿಂಗ್ ಮಾಡಿ ತೆರವು ಮಾಡಬೇಕು. ಬೀದಿ ಬದಿಯಲ್ಲಿ ತಳ್ಳುಗಾಡಿ ಇಡುವುದರಿಂದ ಮತ್ತೆ ಸಮಸ್ಯೆಯಾಗಲಿದ್ದು, ಈಗಲೇ ಎಚ್ಚರ ವಹಿಸಬೇಕು. ಚರಂಡಿಗಳ ಹೂಳೆತ್ತದೆ ಇದ್ದರೆ ಮಳೆ ನೀರು ರಸ್ತೆಯಲ್ಲೇ ಹರಿಯಲಿದ್ದು, ಈ ಬಗ್ಗೆ ಈಗಲೇ ಕ್ರಮ ಕೈಗೊಳ್ಳಬೇಕು ಎಂದು ಪಟ್ಟಣ ಪಂಚಾಯಿತಿ ಸದಸ್ಯರು ಆಗ್ರಹಿಸಿದರು.

ವಿಟ್ಲ ಪಟ್ಟಣ ಪಂಚಾಯಿತಿ ಅಧ್ಯಕ್ಷ ಕರುಣಾಕರ ನಾಯ್ತೊಟ್ಟು ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯರು ಆಗ್ರಹಿಸಿದರು.

ಅಧ್ಯಕ್ಷರ ವಿವೇಚನಾ ನಿಧಿಯಲ್ಲಿ ಹಣ ಇರಿಸಿ ತ್ವರಿತವಾಗಿ ಚರಂಡಿ ದುರಸ್ತಿ ಮಾಡಬೇಕು. ಲೋಕೋಪಯೋಗಿ ಇಲಾಖೆಯವರು, ಪಟ್ಟಣ ಪಂಚಾಯಿತಿಯವರಿಗೆ ಚರಂಡಿ ಹಸ್ತಾಂತರ ಮಾಡುವುದು ಬೇಡ. ಕೆಲವು ಭಾಗದಲ್ಲಿ ಮೋರಿ ಅಳವಡಿಸಿ ಆಗುತ್ತಿರುವ ಸಮಸ್ಯೆಯನ್ನು ಸರಿಪಡಿಸಬೇಕಾದ ಅನಿವಾರ್ಯತೆ ಇದೆ ಎಂದು ಸದಸ್ಯರು ಆಗ್ರಹಿಸಿದರು.

ವಾಹನ ದುರಸ್ತಿಗೂ ತ್ವರಿತ ಕ್ರಮ ವಹಿಸುವುದಿಲ್ಲ. ಪಂಚಾಯಿತಿಯ ವಾಹನ ಎಲ್ಲಿದೆ ಎಂಬುದು ಅಧಿಕಾರಿಗಳಿಗೆ ಮಾಹಿತಿಯಿಲ್ಲ ಎಂದಾದರೆ ಹೇಗೆ? ವಾಹನಗಳನ್ನು ನೋಡಿಕೊಳ್ಳಲು ಸರಿಯಾಗಿ ಜನ ಇಲ್ಲದೇ ಇರುವುದೇ ಸಮಸ್ಯೆಯಾಗಿದೆ. ₹2ಸಾವಿರದಿಂದ ₹5ಸಾವಿರದ ಒಳಗಿನ ಬಿಲ್ ಪಾವತಿಗೆ ಸಾಮಾನ್ಯ ಸಭೆಯವರೆಗೆ ಕಾಯದೆ ನೇರ ಪಾವತಿಗೆ ಕ್ರಮಕೈಗೊಳ್ಳಬೇಕು. ವಾಹನಗಳನ್ನು ಮೂಲೆಗುಂಪು ಮಾಡಿ ಹಾಳು ಮಾಡುವುದು ಬೇಡ ಎಂಬ ಅಭಿಪ್ರಾಯ ಸದಸ್ಯರಿಂದ ವ್ಯಕ್ತವಾಯಿತು.

ಪ್ರತಿ ಸಭೆಯಲ್ಲಿ ಹೊಸ ನಿಯಮಗಳನ್ನು ತಂದರೆ ಅದು ಸರಿಯಲ್ಲ ಎಂಬ ಆಗ್ರಹ ಕೇಳಿ ಬಂತು.

ಉಪಾಧ್ಯಕ್ಷೆ ಸಂಗೀತಾ ಜಗದೀಶ ಪಾಣೆಮಜಲು, ಸ್ಥಾಯಿ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ, ಮುಖ್ಯಾಧಿಕಾರಿ ಕರುಣಾಕರ ವಿ., ಸದಸ್ಯರು ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260603-29-1059899497

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.