ಶನಿವಾರ, ಸೆಪ್ಟೆಂಬರ್ 25, 2021
28 °C

ಉಕ್ಕಿದ ನೇತ್ರಾವತಿ, ಕುಮಾರಧಾರಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಪ್ಪಿನಂಗಡಿ: ನೀರಿನ ಮಟ್ಟ ತುಸು ಇಳಿಕೆಯಾಗಿದ್ದ ಕುಮಾರಧಾರಾ ಮತ್ತು ನೇತ್ರಾವತಿ ಈ ಎರಡೂ
ಜೀವ ನದಿಗಳು ಶುಕ್ರವಾರ ಮಧ್ಯಾಹ್ನದ ಬಳಿಕ ಮತ್ತೆ ಮೈದುಂಬಿಕೊಂಡು ಉಕ್ಕಿ ಹರಿಯಲಾರಂಭಿಸಿವೆ.

ಶುಕ್ರವಾರ ಬೆಳಿಗ್ಗೆ ಕೊನೆಗೊಂಡಂತೆ ಕಳೆದ 24 ತಾಸುಗಳಲ್ಲಿ ಉಪ್ಪಿನಂಗಡಿಯಲ್ಲಿ 32.4 ಮಿ.ಮೀ ಮಳೆ ದಾಖಲಾಗಿದೆ.  ಇಲ್ಲಿ ಮಳೆ ಕಡಿಮೆ ಆಗಿದ್ದರೂ, ಕುಮಾರಧಾರಾ ಮತ್ತು ನೇತ್ರಾವತಿ ನದಿಯ ಉಗಮ ಪ್ರದೇಶಗವಾದ ಘಟ್ಟ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿರುವುದರಿಂದ ಎರಡೂ ನದಿಗಳಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ. 

ಇಲ್ಲಿನ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಾಲಯದ
ಬಳಿ ನದಿಗೆ ಇಳಿಯುವ ಸ್ನಾನಘಟ್ಟದಲ್ಲಿ 38 ಮೆಟ್ಟಿಲುಗಳಲ್ಲಿ ಬೆಳಿಗ್ಗೆ 18 ಮೆಟ್ಟಿಲುಗಳು ಮುಳುಗಿದ್ದವು.

ಸಂಜೆ ವೇಳೆಗೆ 28 ಮೆಟ್ಟಿಲುಗಳು ಮುಳುಗಿವೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.