ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾರಿ ಇತಿಹಾಸದಲ್ಲಿ ಇಚ್ಲಂಗೋಡು ಕೊಡುಗೆ ಅನನ್ಯ: ರಹೀಂ ಉಚ್ಚಿಲ್

ಮಂಗಳೂರು ವಿಶ್ವವಿದ್ಯಾನಿಯ ಬ್ಯಾರಿ ಅಧ್ಯಯನ ಪೀಠ ವೆಬಿನಾರ್
Last Updated 4 ಜೂನ್ 2021, 14:42 IST
ಅಕ್ಷರ ಗಾತ್ರ

ಮಂಗಳೂರು: ಹಿರಿಯ ಸಾಹಿತಿ, ಬ್ಯಾರಿ ಸಂಶೋಧಕ, ಪತ್ರಕರ್ತ, ಪ್ರಾಧ್ಯಾಪಕರಾಗಿ ಬಿ.ಎಂ. ಇಚ್ಲಂಗೋಡು ಅವರು ಬ್ಯಾರಿ ಇತಿಹಾಸಕ್ಕೆ ಅನನ್ಯ ಕೊಡುಗೆ ನೀಡಿದ್ದಾರೆ, ಬ್ಯಾರಿ ಕ್ಷೇತ್ರ ಕಾರ್ಯದಲ್ಲಿ ಆಳವಾದ ಅಧ್ಯಯನ ನಡೆಸಿದ್ದರು ಎಂದು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ರಹೀಂ ಉಚ್ಚಿಲ್ ಹೇಳಿದರು.

ಮಂಗಳೂರು ವಿಶ್ವವಿದ್ಯಾಲಯ ಬ್ಯಾರಿ ಅಧ್ಯಯನ ಪೀಠದ ವತಿಯಿಂದ ಈಚೆಗೆ ನಡೆದ ‘ಬ್ಯಾರಿ ಇತಿಹಾಸದಲ್ಲಿ ಇಚ್ಲಂಗೋಡು ಹೆಜ್ಜೆ ಗುರುತು’ ಎಂಬ ವೆಬಿನಾರ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ ಮಾತನಾಡಿದರು.

ವಿಶ್ವವಿದ್ಯಾಲಯ ಕಾಲೇಜಿನ ಪ್ರಾಂಶುಪಾಲರಾದ ಡಾ. ಅನಸೂಯ ರೈ ಮಾತನಾಡಿ, ಇಚ್ಲಂಗೋಡು ಅವರದು ಸರಳ ವ್ಯಕ್ತಿತ್ವ, ಗ್ರಾಹಕ ಕಾನೂನನ್ನು ಅಧ್ಯಯನ ಮಾಡಿ, ಗ್ರಾಹಕರಿಗಾಗುತ್ತಿದ್ದ ಅನ್ಯಾಯದ ವಿರುದ್ಧ ಕಾನೂನು ಹೋರಾಟಕ್ಕೆ ಜನರಿಗೆ ಸಹಕರಿಸುತ್ತಿದ್ದರು ಎಂದರು.‌

ಸಾಹಿತಿಗಳಾದ ಅಬ್ದುಲ್ ರಹಿಮಾನ್ ಕುತ್ತೆತ್ತೂರು, ಸಾಹಿತಿ ಷಂಷುದ್ದೀನ್ ಮಡಿಕೇರಿವಿಶೇಷ ಉಪನ್ಯಾಸ ನೀಡಿದರು. ಬ್ಯಾರಿ ಅಧ್ಯಯನ ಪೀಠದ ಸಲಹಾ ಸಮಿತಿ ಸದಸ್ಯ ಅಹಮದ್ ಬಾವ ಮೊಯ್ದಿನ್ ಮಾತನಾಡಿ ಇಚ್ಲಂಗೋಡು ಅವರ ಸೇವೆ ಬ್ಯಾರಿ ಇತಿಹಾಸಕ್ಕೆ ಅನನ್ಯವಾದುದು ಎಂದರು. ಬ್ಯಾರಿ ಅಧ್ಯಯನ ಪೀಠದ ಸಂಯೋಜಕ ಡಾ. ಎ. ಸಿದ್ಧಿಕ್ , ವಿದ್ಯಾರ್ಥಿನಿ ಶಫೀಕಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT