ಸೋಮವಾರ, ಜೂನ್ 1, 2020
27 °C

ವಾಟ್ಸ್ಆ್ಯಪ್‌ ಮೂಲಕ ಔಷಧಿ: ಮಂಗಳೂರಿನ ಕೆ‌.ಎಸ್‌.ಹೆಗ್ಡೆ ಆಸ್ಪತ್ರೆಯ ವಿನೂತನ ಸೇವೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ಕೊರೊನಾ ಹರಡುವಿಕೆ ನಿಯಂತ್ರಿಸಲು ದೇಶದಲ್ಲಿ ಲಾಕ್ ಡೌನ್ ಘೋಷಣೆಯ ಬಳಿಕ ಜಿಲ್ಲೆಯಲ್ಲಿ ಹಲವು ಆಸ್ಪತ್ರೆಗಳು ತಮ್ಮ ಹೊರ ರೋಗಿಗಳಿಗೆ ನೀಡುವ ಚಿಕಿತ್ಸಾ ಸೇವೆಯನ್ನು ಸ್ಥಗಿತಗೊಳಿಸಿದೆ. ಇದರಿಂದ ಅನೇಕ ರೋಗಿಗಳಿಗೆ ಸಕಾಲಕ್ಕೆ ವೈದ್ಯರ ಸಲಹೆ ಔಷಧಗಳು ಸಿಗದೆ ತೊಂದರೆಗೀಡಾಗಿದ್ದಾರೆ.

ಇದಕ್ಕಾಗಿ ನಗರದ ದೇರಳಕಟ್ಟೆಯಲ್ಲಿರುವ ಕೆ‌.ಎಸ್‌.ಹೆಗ್ಡೆ ಆಸ್ಪತ್ರೆ ವಿನೂತನವಾಗಿ ರೋಗಿಗಳ ಸೇವೆಗೆ ನಿಂತಿದೆ. ಸಾರ್ವಜನಿಕರಿಗೆ ಓಡಾಟಕ್ಕೆ ಅವಕಾಶ ಇಲ್ಲದ ಕಾರಣ ಕೆ‌.ಎಸ್‌.ಹೆಗ್ಡೆ ಆಸ್ಪತ್ರೆಯೂ ಆನ್ ಲೈನ್ ನ ಮೂಲಕ ರೋಗಿಗಳ ಸೇವೆಗೆ ಮುಂದಾಗಿದೆ.

ಆಸ್ಪತೆಯೂ ಎಲ್ಲಾ ವಿಭಾಗದ ವೈದ್ಯರ ವಾಟ್ಸಪ್ ನಂಬರ್ ನೀಡಿದ್ದು, ಆಯಾ ವಿಭಾಗದ ವೈದ್ಯರಿಗೆ ಯಾವುದಾದರೂ ರೋಗಗಳಿಂದ ಬಳಲುತ್ತಿರುವ ರೋಗಿಗಳು ವಾಟ್ಸಾಪ್ ನಲ್ಲಿ ತಮ್ಮ ರೋಗ ಲಕ್ಷಣ ಮಾಹಿತಿನ್ನು ರವಾನಿಸಬೇಕು . ಇದರೊಂದಿಗೆ ಹೆಸರು, ವಯಸ್ಸು, ಲಿಂಗ, ತೂಕ, ಖಾಯಿಲೆಯ ಮಾಹಿತಿ ಹಾಗೂ ಹಳೆಯ ಪ್ರಿಸ್ಕ್ರಿಪ್ಷನ್ ಗಳಿದ್ದರೆ ತಪ್ಪದೆ ನೀಡಬೇಕು.

ಇವೆಲ್ಲವೂ ನೋಡಿದ ಬಳಿಕ ಅಗತ್ಯವಿದ್ದರೆ ವೈದ್ಯರೇ ನಿಮಗೆ ಕರೆ ಮಾಡುತ್ತಾರೆ ಇಲ್ಲವಾದರೆ, ಯಾವ ಔಷಧಿಸೂಕ್ತವೆಂದು ಅಥವಾ ವೈದ್ಯರ ಸಲಹೆಯನ್ನು "ವೈದ್ಯರ ನೋಂದಣಿ ಸಂಖ್ಯೆವಿರುವ ಚೀಟಿಯಲ್ಲಿ" ಬರೆದು ರೋಗಿಗಳ ಸಂಖ್ಯೆಗೆ ವೈದ್ಯರು ವಾಟ್ಸಾಪ್ ಮಾಡಲಿದ್ದಾರೆ. ಬಳಿಕ ಔಷಧಿಯನ್ನು ಸಮೀಪದ ಮೆಡಿಕಲ್ ನಲ್ಲಿ ಪಡೆಯಬಹುದಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು