ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯೋಗಾಭ್ಯಾಸದಿಂದ ಆರೋಗ್ಯ ವೃದ್ಧಿ: ಡಾ. ಎ.ರಾಘವೇಂದ್ರ ರಾವ್‌

ವಿಶ್ವ ಸಂಸ್ಕೃತ ಸಮ್ಮೇಳನದಲ್ಲಿ ಭಾರತ್‌ ಇನ್ಫ್ರಾಟೆಕ್‌ನ ನಿರ್ದೇಶಕ ಮುಸ್ತಫಾ
Last Updated 25 ಫೆಬ್ರುವರಿ 2023, 15:48 IST
ಅಕ್ಷರ ಗಾತ್ರ

ಮಂಗಳೂರು: ‘ಜ್ಞಾನ ಎಂಬುದು ಆಹಾರವಿದ್ದಂತೆ. ಜ್ಞಾನವೆಂಬ ಆಹಾರವನ್ನು ಶ್ರೀನಿವಾಸ ವಿಶ್ವವಿದ್ಯಾಲಯ ಯಾವ ರೀತಿಯಲ್ಲಿ ಬಂದರೂ ಸ್ವೀಕರಿಸುತ್ತದೆ. ಶ್ರೀನಿವಾಸ ವಿಶ್ವವಿದ್ಯಾಲಯವು ಜ್ಞಾನಸಾಗರವಾಗಿದೆ’ ಎಂದು ಶ್ರೀನಿವಾಸ ವಿಶ್ವವಿದ್ಯಾಲಯದ ಕುಲಾಧಿಪತಿ ಡಾ. ಎ.ರಾಘವೇಂದ್ರ ರಾವ್‌ ಹೇಳಿದರು.

ಶ್ರೀನಿವಾಸ ವಿಶ್ವವಿದ್ಯಾಲಯ ಆಯೋಜಿಸಿರುವ ‘ವಿಶ್ವ ಸಂಸ್ಕೃತ ಸಮ್ಮೇಳನ’ದ ಎರಡನೇ ದಿನವಾದ ಶನಿವಾರ ಸಮ್ಮೇಳನದ ಸಾರಾಂಶ ಮತ್ತು ತಜ್ಞರ ಅಧಿವೇಶನದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಲೋಕಸಭಾ ಪ್ರಚಾರ ಪರಿಷತ್‌ನ ಅಂತರರಾಷ್ಟ್ರೀಯ ಅಧ್ಯಕ್ಷ ಪ್ರೊ. ಸದಾನಂದ ದೀಕ್ಷಿತ್‌ ಮಾತನಾಡಿ, ಈ ಸಮ್ಮೇಳನವು ಜ್ಞಾನವನ್ನು ಸಂಪಾದಿಸಲು ಸಿಕ್ಕಿರುವ ಒಳ್ಳೆಯ ಅವಕಾಶವಾಗಿದೆ ಎಂದರು.

ಭಾರತ್‌ ಇನ್ಫ್ರಾಟೆಕ್‌ನ ನಿರ್ದೇಶಕ ಮುಸ್ತಫಾ ಎಸ್‌.ಎಂ. ಮಾತನಾಡಿ, ನಿರಂತರ ಯೋಗಾಭ್ಯಾಸದಿಂದ ಆರೋಗ್ಯ ವೃದ್ಧಿಯಾಗುತ್ತದೆ. ಅಣು, ತೃಣ, ಕಾಷ್ಠದಲ್ಲಿ ದೇವರ ವಾಸವಿದೆ. ದೇವರನ್ನು ನೆನಪಿಸುವಾಗ ಮಾನವರು ಆ ಭಾವವನ್ನು ಅನುಭವಿಸಬೇಕು ಎಂದರು.

ಮೈಸೂರಿನ ಅಮೃತ ವಿಶ್ವವಿದ್ಯಾಪೀಠದ ಇಂಟರ್‌ನ್ಯಾಷನಲ್‌ ಸೆಂಟರ್‌ ಫಾರ್‌ ಸ್ಪಿರಿಚ್ಯುವಲ್‌ ಸ್ಟಡೀಸ್‌ನ ಸಹಾಯಕ ಪ್ರಾಧ್ಯಾಪಕ ವಿಘ್ನೇಶ್ವರ ಭಟ್‌, ಕರ್ನಾಟಕ ರಾಜ್ಯ ಫಿಸಿಯೊಥೆರಪಿಸ್ಟ್‌ ಫೆಡರೇಷನ್‌ ಅಧ್ಯಕ್ಷ ಡಾ.ಯು.ಟಿ. ಇಫ್ತಿಕಾರ್‌, ಶ್ರೀನಿವಾಸ ಸಮೂಹ ಸಂಸ್ಥೆಗಳ ಆಡಳಿತ ಮಂಡಳಿ ಟ್ರಸ್ಟಿಗಳಾದ ಪ್ರೊ. ಎ. ಮಿತ್ರಾ ಎಸ್‌. ರಾವ್‌, ಎ.ವಿಜಯಲಕ್ಷ್ಮಿ ಆರ್. ರಾವ್, ಉಪಕುಲಪತಿ ಡಾ. ಪಿ.ಎಸ್. ಐತಾಳ್, ರಿಜಿಸ್ಟ್ರಾರ್‌ಗಳಾದ ಆದಿತ್ಯ ಕುಮಾರ್ ಮಯ್ಯ, ಡಾ.ಅನಿಲ್ ಕುಮಾರ್, ಶ್ರೀನಿವಾಸ ಮಯ್ಯ ಡಿ., ಸಂಚಾಲಕರಾದ ಡಾ.ಶಾಂತಲಾ ವಿಶ್ವಾಸ, ಸಹ ಸಂಚಾಲಕ ಡಾ. ಬಿ.ಗೋಪಾಲಚಾರ್, ಪದ್ಮಿನಿ ಕುಮಾರ್, ಮೇಘನಾ ಎಸ್‌. ರಾವ್‌, ಡಾ. ಉದಯ ಕುಮಾರ್ ಮಯ್ಯ ಇದ್ದರು.

ಶ್ರೀನಿವಾಸ ವಿಶ್ವವಿದ್ಯಾಲಯ ಸಹ ಕುಲಾಧಿಪತಿ ಡಾ. ಎ. ಶ್ರೀನಿವಾಸ ರಾವ್ ಸ್ವಾಗತಿಸಿದರು. ವ್ಯೋಮ ಲಿನ್‌ಗ್ವಿಸ್ಟಿಕ್‌ ಲ್ಯಾಬ್ಸ್‌ ಫೌಂಡೇಶನ್‌ನ ಡಾ. ವೆಂಕಟ ಸುಬ್ರಹ್ಮಣ್ಯನ್‌ ಪಿ. ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ಅಜಯ್‌ ಕುಮಾರ್ ವಂದಿಸಿದರು.

-ಡಾ.ವಿಜಯಲಕ್ಷ್ಮಿ, ಪ್ರೊ.ರೋಹನ್ ಫರ್ನಾಂಡಿಸ್, ಡಾ.ಅಂಬಿಕಾ ಮಲ್ಯ ಕಾಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT