ಅಮೆರಿಕದಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಘಟಕ ಉದ್ಘಾಟನೆ 29ರಂದು

ಮಂಗಳವಾರ, ಜೂಲೈ 16, 2019
25 °C

ಅಮೆರಿಕದಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಘಟಕ ಉದ್ಘಾಟನೆ 29ರಂದು

Published:
Updated:

ಮಂಗಳೂರು: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್‌ 34ನೇ ಘಟಕವು ಅಮೆರಿಕದ ನ್ಯೂಜೆರ್ಸಿಯಲ್ಲಿರುವ ಪುತ್ತಿಗೆ ಮಠದಲ್ಲಿ ಜೂ.29ರಂದು ಉದ್ಘಾಟನೆಯಾಗಲಿದೆ.

ಬಳಿಕ ಅಮೆರಿಕದ 12 ರಾಜ್ಯಗಳಲ್ಲಿ ಯಕ್ಷಧ್ರುವ ತಂಡದಿಂದ ಯಕ್ಷಗಾನ ಪ್ರದರ್ಶನ ನಡೆಯಲಿದೆ ಎಂದು ಟ್ರಸ್ಟ್‌ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ತಿಳಿಸಿದ್ದಾರೆ.

ಘಟಕದ ಉದ್ಘಾಟನಾ ಸಮಾರಂಭದಲ್ಲಿ ಅಮೆರಿಕದ ಸ್ಥಳೀಯ ಜನಪ್ರತಿನಿಧಿಗಳು, ಅನಿವಾಸಿ ಭಾರತೀಯರು ಭಾಗವಹಿಸುವರು. ಈ ಕಾರ್ಯಕ್ರಮದ ಬಳಿಕ ಸೆಪ್ಟೆಂಬರ್‌ 3ರರವರೆಗೆ ಅಲ್ಲಿನ 12 ವಿವಿಧ ರಾಜ್ಯಗಳಲ್ಲಿ 15 ಯಕ್ಷಗಾನ ಪ್ರಸಂಗಗಳನ್ನು ಪ್ರದರ್ಶಿಸಲಾಗುವುದು ಎಂದರು.

ಸುದರ್ಶನ ವಿಜಯ, ಕೃಷ್ಣ ಲೀಲೆ, ಕಂಸವದೆ, ಮಹಿಷಮರ್ಧಿನಿ, ನರಕಾಸುರವಧೆ, ಶ್ರೀನಿವಾಸ ಕಲ್ಯಾಣ, ಯಕ್ಷಗಾನಗಳ ಪ್ರದರ್ಶನಗಳು ನಡೆಯಲಿವೆ. ದಕ್ಷಿಣ ಕನ್ನಡದಿಂದ 8 ಮಂದಿ ಕಲಾವಿದರು ಅಲ್ಲಿಗೆ ತೆರಳುತ್ತಿದ್ದು, ಅಮೆರಿಕದಲ್ಲಿರುವ ಸ್ಥಳೀಯ ಕಲಾವಿದರೂ ಬಣ್ಣ ಹಚ್ಚಲಿದ್ದಾರೆ. ಪ್ರಸಂಗಗಳ ಆಯ್ದ ಭಾಗಗಳನ್ನು ಮಾತ್ರ ಬಳಸಿಕೊಂಡು 2 ಗಂಟೆಯ ಅವಧಿಯಲ್ಲಿ ಯಕ್ಷ ಪ್ರದರ್ಶನ ನಡೆಯಲಿದೆ.

ಸೆಪ್ಟೆಂಬರ್‌ 1ರಂದು ಅಮೆರಿಕದಲ್ಲಿ ನಡೆಯಲಿರುವ ನಾವಿಕ ವಿಶ್ವಕನ್ನಡ ಸಮ್ಮೇಳನದಲ್ಲೂ ತಂಡವು ಭಾಗವಹಿಸಲಿದೆ. ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು. ಯಕ್ಷಗಾನ ಪ್ರದರ್ಶನ ಮಾತ್ರವಲ್ಲದೇ ಅಲ್ಲಿನ ವಿದ್ಯಾರ್ಥಿಗಳಿಗೆ ಯಕ್ಷಗಾನ ಪ್ರಾತ್ಯಕ್ಷಿಕೆ, ನಾಟ್ಯ, ಹಿಮ್ಮೇಳದ ತರಬೇತಿಯನ್ನೂ ನೀಡಲಾಗುವುದು. ಮುಖ್ಯ ಕಲಾವಿದರಾಗಿ ಪ್ರೊ.ಎಂ.ಎಲ್. ಸಾಮಗ ಪ್ರಾತ್ಯಕ್ಷಿಕೆ ನೀಡುವರು. ಅಮೆರಿಕದಲ್ಲಿ ನೋಂದಾಯಿಸಿರುವ ಕೆಲವೇ ಭಾರತೀಯರು ಸಂಸ್ಥೆಗಳಲ್ಲಿ ಯಕ್ಷ ಧ್ರುವಪಟ್ಲ ಫೌಂಡೇಶನ್ ಟ್ರಸ್ಟ್ ಕೂಡಾ ಒಂದಾಗಿದೆ ಎಂದು ಅವರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !