ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಟ್ಯೋತ್ಸವದಲ್ಲಿ ಮಟಪಾಡಿ ಶೈಲಿ ಯಕ್ಷಗಾನ

Last Updated 28 ನವೆಂಬರ್ 2022, 4:59 IST
ಅಕ್ಷರ ಗಾತ್ರ

ಕೋಟ (ಬ್ರಹ್ಮಾವರ): ಶಿವಮೊಗ್ಗ ಜಿಲ್ಲೆಯ ಸಾಗರದ ನಾಟ್ಯ ತರಂಗ ಟ್ರಸ್ಟ್ ನೂಪುರ ನಿನಾದ ಶ್ರೀನಗರದ ಆಶ್ರಯದಲ್ಲಿ ಡಿಸೆಂಬರ್ 3ರ ವರೆಗೆ ನೃತ್ಯ ಆಯೋಜಿಸಿದ ರಾಷ್ಟ್ರೀಯ ಸಂಸ್ಕೃತಿ ಸಪ್ತಾಹದಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಭಾಗವಹಿಸಲಿರುವ ನೃತ್ಯ ತಂಡದ ಜತೆಗೆ ಎಚ್.ಎಸ್. ಮೋಹನ್ ಸಂಯೋಜನೆಯಲ್ಲಿ ಸುಜಯೀಂದ್ರ ಹಂದೆ ಸಾರಥ್ಯದ ಕೋಟದ ಹಂದೆ ಯಕ್ಷ ವೃಂದ ಯಕ್ಷಗಾನ ಪ್ರದರ್ಶನ ನೀಡಲಿದೆ.

ಸಂಜೆ 6ಕ್ಕೆ ಎಚ್.ಶ್ರೀಧರ ಹಂದೆ ನಿರ್ದೇಶನದಲ್ಲಿ ಭಾಗವತ ಉದಯ ಹೊಸಾಳ, ದೇವದಾಸ ರಾವ್ ಕೂಡ್ಲಿ, ಸುದೀಪ ಉರಾಳರ ಹಿಮ್ಮೇಳದಲ್ಲಿ ಕೋಟ ಸುದರ್ಶನ ಉರಾಳ, ಸುಜ ಯೀಂದ್ರ ಹಂದೆ, ಮನೋಜ ಭಟ್ಟ್, ಮಹೇಂದ್ರ ಆಚಾರ್, ರಾಘವೇಂದ್ರ ತುಂಗ, ನವೀನ್ ಮಣೂರು, ಸುಹಾಸ ಕರಬ, ವೆಂಕಟೇಶ ವೈದ್ಯ ಕೊಮೆ, ಆದಿತ್ಯ ಹೆಗಡೆ, ನರಸಿಂಹ ತುಂಗ, ಸಮೀಕ್ಷಿತ್ ಆಚಾರ್, ಸ್ಕಂದ ಅವರಿಂದ ಮಟಪಾಡಿ ಮತ್ತು ಹಾರಾಡಿ ಶೈಲಿಯ ತಾಮ್ರಧ್ವಜ ಕಾಳಗ ಪ್ರದರ್ಶನಗೊಳ್ಳಲಿದೆ ಎಂದು ಸುಜಯೋಂದ್ರ ಹಂದೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT