ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಸ್ಕೃತಿಗೆ ಯಕ್ಷಗಾನದ ಕೊಡುಗೆ ಅಪಾರ

ಯಕ್ಷಧ್ರುವ ಪಟ್ಲ ಸಂಭ್ರಮ ಕಾರ್ಯಕ್ರಮದಲ್ಲಿ ಕೊಂಡೆವೂರು ಯೋಗಾನಂದ ಸರಸ್ವತಿ ಸ್ವಾಮೀಜಿ
Last Updated 30 ಮೇ 2022, 4:17 IST
ಅಕ್ಷರ ಗಾತ್ರ

ಮಂಗಳೂರು: ‘ಭಾರತೀಯ ಸಂಸ್ಕೃತಿ ಸಂಸ್ಕಾರಗಳನ್ನು ಉಳಿಸುವಲ್ಲಿ ಯಕ್ಷಗಾನ ಕಲೆಯು ಮಹತ್ವದ ಕೊಡುಗೆ ನೀಡುತ್ತಿದೆ’ ಎಂದು ಉಪ್ಪಳ ಕೊಂಡೆವೂರು ಯೋಗಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.

‘ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್’ ವತಿಯಿಂದ ಭಾನುವಾರ ನಗರ ಹೊರವಲಯದ ಅಡ್ಯಾರ್ ಗಾರ್ಡನ್‌ ನಲ್ಲಿ ಆಯೋಜಿಸಿದ್ದ ‘ಯಕ್ಷಧ್ರುವ ಪಟ್ಲ ಸಂಭ್ರಮ–2022’ ಉದ್ಘಾಟನಾ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು. ‘ಯಕ್ಷಗಾನ ಕಲಾವಿದರು ಪೌರಾಣಿಕ ಕಥೆಗಳನ್ನು ವೀಕ್ಷಕರ ಕಣ್ಣಮುಂದೆ ತರುತ್ತಾರೆ. ಆ ಮೂಲಕ ಸನಾತನ ಸಂಸ್ಕೃತಿಯನ್ನು ಎತ್ತಿ ಹಿಡಿದು, ಹಿಂದೂ ಧರ್ಮವನ್ನು ರಕ್ಷಿಸುವ ಕೆಲಸ ನಡೆಯುತ್ತಿದೆ. ಇಂಥ ಕಾರ್ಯಕ್ರಮಗಳು ಕಲಾವಿದರನ್ನು ಹುರಿದುಂಬಿಸುತ್ತವೆ’ ಎಂದರು.

ಕಾರ್ಯಕ್ರಮವನ್ನು ಸಿ.ಎ. ದಿವಾಕರ ರಾವ್ ಉದ್ಘಾಟಿಸಿದರು. ಪ್ರಸಾದ್ ನೇತ್ರಾಲಯ ವೈದ್ಯಕೀಯ ನಿರ್ದೇಶಕ ಡಾ. ಕೃಷ್ಣ ಪ್ರಸಾದ್ ಕೂಡ್ಲು ಅವರು ಆರೋಗ್ಯ ಶಿಬಿರ ಉದ್ಘಾಟಿಸಿದರು. ಪಟ್ಲ ಟ್ರಸ್ಟ್ ಮೂಲಕ ಆಸ್ಪತ್ರೆಗೆ ಬರುವ ಯಕ್ಷಗಾನ ಕಲಾವಿದರಿಗೆ ಉಚಿತ ಚಿಕಿತ್ಸೆ ನೀಡುವುದಾಗಿ ತಿಳಿಸಿದರು.

ಟ್ರಸ್ಟ್ ಗೌರವಾಧ್ಯಕ್ಷ ಸದಾಶಿವ ಶೆಟ್ಟಿ ಕೂಳೂರು ಕನ್ಯಾನ ಮಾತನಾಡಿ, ‘ಯಕ್ಷಗಾನದಿಂದ ಆದಾಯವಿಲ್ಲ ಎಂಬ ಕಾರಣಕ್ಕೆ ಕಲಾವಿದರು ಈ ಕಲೆಯಿಂದ ದೂರವಾಗಿದ್ದರು. ಆದರೆ ಸತೀಶ್ ಪಟ್ಲ ಅವರು ಈ ಕಲೆಯ ಹಿರಿಮೆಯನ್ನು ಹೆಚ್ಚಿಸಿ ಯಕ್ಷಗಾನವು ಮತ್ತೆ ಮುನ್ನೆಲೆಗೆ ಬರುವಂತೆ ಮಾಡಿದ್ದಾರೆ’ ಎಂದರು.

ಪಟ್ಲಯಾನದ ಆರು ವರ್ಷಗಳ ಯಶೋಗಾಥೆ ಕುರಿತ ಕೃತಿ ‘ಧ್ರುವ ಪ್ರಭಾ’ವನ್ನು ಟ್ರಸ್ಟ್‌ನ ಪ್ರಧಾನ ಸಂಚಾಲಕ ಐಕಳ ಹರೀಶ್ ಶೆಟ್ಟಿ ಬಿಡುಗಡೆಗೊಳಿಸಿದರು. ಉದ್ಯಮಿ ಶಶಿಧರ ಬಿ. ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಪಳ್ಳಿ ಶರತ್ ಶೆಟ್ಟಿ ಅವರು ರಚಿಸಿದ ‘ಯಕ್ಷ ರಂಗದ ಧ್ರುವತಾರೆ’ ಕೃತಿಯನ್ನು ಉದ್ಯಮಿ ಬಡಾಜೆ ರವಿಶಂಕರ್ ಶೆಟ್ಟಿ ಮತ್ತು ಕತಾರ್‍ನ ಡಾ.ರವಿ ಶೆಟ್ಟಿ ಮೂಡಂಬೈಲ್ ಬಿಡುಗಡೆಗೊಳಿಸಿದರು.

ಮಾಜಿ ಶಾಸಕ ಕೃಷ್ಣ ಜೆ.ಪಾಲೆಮಾರ್, ನಿಟ್ಟೆ ವಿವಿ ಕುಲಪತಿ ಡಾ. ಸತೀಶ್ ಭಂಡಾರಿ, ಮೈಸೂರಿನ ಜ್ಞಾನ ಸರೋವರ ವಿದ್ಯಾಸಂಸ್ಥೆ ಅಧ್ಯಕ್ಷ ಡಾ. ಸುಧಾಕರ ಶೆಟ್ಟಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಸಿಇಒ ಅನಿಲ್ ಕುಮಾರ್ ಎಸ್.ಎಸ್., ಪುತ್ತಿಗೆ ಮಠ ನ್ಯೂಜೆರ್ಸಿ ಮುಖ್ಯಸ್ಥ ಯೋಗೀಂದ್ರ ಭಟ್ ಉಳಿ, ಥಾಣೆ ಬಂಟ್ಸ್ ಸಂಘ ಅಧ್ಯಕ್ಷ ವೇಣುಗೋಪಾಲ ಶೆಟ್ಟಿ , ಉದ್ಯಮಿ ಜಯರಾಮ ಶೇಖ, ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ ಸುಧಾಕರ ಪೂಂಜ, ಉದ್ಯಮಿಗಳಾದ ಅಡ್ಯಾರ್ ಮಾಧವ ನಾಯಕ್, ವಿಜಯ ಕುಮಾರ್ ಅಮೀನ್, ಟ್ರಸ್ಟಿ ದಾಂಡೇಲಿ ಪ್ರಕಾಶ್ ಶೆಟ್ಟಿ, ಕಳತ್ತೂರು ವಿಶ್ವನಾಥ ಶೆಟ್ಟಿ, ಮಹಾಬಲ ಶೆಟ್ಟಿ
ಪಟ್ಲ, ಡಾ.ಮನುರಾವ್, ಅಶೋಕ್ ಶೆಟ್ಟಿ ಪೆರ್ಮುದೆ, ದುರ್ಗಾಪ್ರಕಾಶ್ ರಾವ್ ಪಡುಬಿದ್ರೆ, ರಾಜೀವ ಪೂಜಾರಿ ಕೈಕಂಬ, ಉದಯ ಕುಮಾರ್ ಶೆಟ್ಟಿ ಕುಂದಾಪುರ, ಜಗನ್ನಾಥ ಶೆಟ್ಟಿ ಬಾಳ ಇದ್ದರು.

ಟ್ರಸ್ಟ್ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಜತೆಕಾರ್ಯದರ್ಶಿ ರವಿಚಂದ್ರ ಶೆಟ್ಟಿ ವಂದಿಸಿದರು. ಕದ್ರಿ ನವನೀತ ಶೆಟ್ಟಿ ಮತ್ತು ಪುರುಷೋತ್ತಮ ಕೆ. ಭಂಡಾರಿ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT