ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಿಮನೆ ಕಲಾವೃಂದದಿಂದ ಯಕ್ಷೋಲ್ಲಾಸ

Last Updated 25 ಜೂನ್ 2020, 8:11 IST
ಅಕ್ಷರ ಗಾತ್ರ

ಮಂಗಳೂರು: ಲಾಕ್‌ಡೌನ್‌ ಸಂದರ್ಭದಲ್ಲಿ ಕರಾವಳಿಯ ಗಂಡುಕಲೆ ಯಕ್ಷಗಾನವನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಮಕ್ಕಿಮನೆ ಕಲಾವೃಂದದಿಂದ ಯಕ್ಷೋಲ್ಲಾಸ ಕಲಾ ನಾಟ್ಯ ಪ್ರಸ್ತುತಿಯನ್ನು ತಯಾರಿಸಿದೆ.

ಯಕ್ಷಗಾನ ಕ್ಷೇತ್ರದ ಬಾಲ ಹಾಗೂ ಯುವ ಕಲಾವಿದರಾದ ಸಾಯಿಸುಮಾ ನಾವಡ ಕಾರಿಂಜ, ವಿಜೇಶ್ ದೇವಾಡಿಗ ಮಂಗಳಾದೇವಿ, ರಕ್ಷಿತ್ ಪೂಜಾರಿ ಕಾರ್ಕಳ, ಮೈತ್ರಿ ಭಟ್ ಮಾವ್ವಾರು, ವಿನುತಾ ಕೆ. ಗಟ್ಟಿ ಕೈರಂಗಳ, ಟಿ.ಎನ್. ಶ್ರೀರಕ್ಷಾ ಭಟ್ ಕಳಸ, ಕೃತಿ ವಿ. ರಾವ್ ಚಿತ್ರಾಪುರ, ವಿದ್ಯಾ ಭಟ್ ಕುಂಟಿಕಾನಮಠ, ಅನನ್ಯ ಬೆಳ್ತಂಗಡಿ, ಸುಷ್ಮಿತಾ ಆರ್. ಕಳಸ, ಅಭಿನವಿ ಹೊಳ್ಳ ಬೈಕಂಪಾಡಿ, ಸ್ವಸ್ತಿಶ್ರೀ ಕದ್ರಿ, ಖ್ಯಾತಿ ಆರ್. ಬಂಜನ್ ಸುರತ್ಕಲ್, ವಿಧಿಶಾ ಸುರತ್ಕಲ್, ಯಶ್ನ ಸುರತ್ಕಲ್ ಅವರು ನಾಟ್ಯ ಪ್ರಸ್ತುತಿ ನೀಡಿದ್ದಾರೆ.

ಶುಭಾಶಯ ಜೈನ್ ಅವರ ‘ಕಾಯದಾನ’ ಪ್ರಸಂಗದ ಸಾಹಿತ್ಯಕ್ಕೆ ಯುವ ಭಾಗವತ ಅಮೃತ ಅಡಿಗ ಅವರ ಕಂಠದಲ್ಲಿ, ಕೌಶಿಕ್ ರಾವ್ ಹಾಗೂ ಕೌಶಲ್ ರಾವ್ ಅವರ ಚೆಂಡೆಮದ್ದಳೆ ಸಹಕಾರದೊಂದಿಗೆ ಪ್ರಸ್ತುತಪಡಿಸಲಾಗಿದೆ. ಇದರ ಸಂಯೋಜನೆಯನ್ನು ಸುದೇಶ್ ಜೈನ್ ಮಕ್ಕಿಮನೆ, ಸಂಕಲನವನ್ನು ನಿಶಾಲ್ ವಾಮಂಜೂರು ಹಾಗೂ ಸುಮಂತ್ ಮಂಗಳೂರು ಮಾಡಿದ್ದಾರೆ.

ವಿಡಿಯೊ ಬಿಡುಗಡೆ: ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾ ಘಟಕದ ಕಚೇರಿಯಲ್ಲಿ ಬುಧವಾರ ಈ ನಾಟ್ಯಪ್ರಸ್ತುತಿಯ ವಿಡಿಯೊ ಅನ್ನು ಯಕ್ಷಗಾನ ವಿದ್ವಾಂಸ ಡಾ. ಎಂ. ಪ್ರಭಾಕರ ಜೋಶಿ ಅವರು ಮಕ್ಕಿಮನೆ ಕಲಾವೃಂದ ಯೂಟ್ಯೂಬ್‌ ಚಾನೆಲ್‌ನಲ್ಲಿ ಬಿಡುಗಡೆ ಮಾಡಿದರು.

ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾ ಘಟಕದ ಅಧ್ಯಕ್ಷ ಪ್ರದೀಪ್ ಕುಮಾರ ಕಲ್ಕೂರ, ಸಾಹಿತಿ ಪೊಳಲಿ ನಿತ್ಯಾನಂದ ಕಾರಂತ, ಸುಧಾಕರ ರಾವ್ ಪೇಜಾವರ, ರತ್ನಾಕರ ಜೈನ್ ಮಂಗಳೂರು, ಜನಾರ್ದನ ಹಂದೆ, ಸನತ್ ಕುಮಾರ್ ಜೈನ್, ಮಾಧವ ಎಂ.ಎಸ್. ಶಿವಮೊಗ್ಗ, ವಿಜೇಶ್ ದೇವಾಡಿಗ ಮಂಗಳಾದೇವಿ, ಪ್ರೀತಾ ಮಾಧವ, ಸಂದೀಪ್ ಮಂಗಳೂರು, ನಿಶಾಲ್ ವಾಮಂಜೂರು ಇದ್ದರು.

ಸುದೇಶ್ ಜೈನ್ ಮಕ್ಕಿಮನೆ ಸ್ವಾಗತಿಸಿದರು. ವಿಜೇಶ್ ದೇವಾಡಿಗ ನಿರೂಪಿಸಿದರು. ಮಾಧವ ಎಂ.ಎಸ್. ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT