ಬದಿಯಡ್ಕ: ಉದಿನೂರು ಶಾಲೆಯಲ್ಲಿ ನಡೆದ ಜಿಲ್ಲಾ ಮಟ್ಟದ ಕಲೋತ್ಸವದ ಯಕ್ಷಗಾನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಕೇರಳ ರಾಜ್ಯಮಟ್ಟದ ಕಲೋತ್ಸವಕ್ಕೆ ಕಾಟುಕುಕ್ಕೆ ಸುಬ್ರಹ್ಮಣ್ಯೇಶ್ವರ ಪ್ರೌಢ ಶಾಲಾ ತಂಡ ಆಯ್ಕೆಯಾಗಿದೆ.

ಈ ತಂಡದ ಹಿಮ್ಮೇಳದಲ್ಲಿ ಭಾಗವತರಾಗಿ ನಾರಾಯಣ ಶರ್ಮ ನೀರ್ಚಾಲು, ಚೆಂಡೆಯಲ್ಲಿ ವರ್ಷಿತ್ ಕಿಜ್ಜೆಕ್ಕಾರು, ಮದ್ದಳೆಯಲ್ಲಿ ಪೃಥ್ವಿರಾಜ್ ಪೆರುವೋಡಿ, ಚಕ್ರತಾಳದಲ್ಲಿ ಬಾಲಕೃಷ್ಣ ಏಳ್ಕಾನ ಭಾಗವಹಿಸಿದ್ದರು.

ರಂಗಸಜ್ಜಿಕೆಯಲ್ಲಿ ಪ್ರದೀಶ್ ರಾಜ್ ವಾಟೆ, ಹರ್ಷ ಸಜಂಗದ್ದೆ, ಅಧ್ಯಾಪಕರಾದ ಚಂದ್ರಹಾಸ ಕಾಟುಕುಕ್ಕೆ, ಶಿವರಾಮ ಅರಿಕ್ಕಾಡಿ, ಹರಿಪ್ರಸಾದ್ ಮಾಯಿಲೆಂಗಿ, ವೇಷಭೂಷಣದಲ್ಲಿ ಮಲ್ಲದ ದುರ್ಗಾಂಬ ವೇಷಭೂಷಣ ತಂಡ ಸಹಕರಿಸಿದ್ದರು. ಹರ್ಷಲ್ ಮಾಯಿಲೆಂಗಿ, ಆತ್ಮೀಕ್ ಅರಿಕ್ಕಾಡಿ, ಸ್ಕಂದ ಕಾಟುಕುಕ್ಕೆ, ಧನುಷ್ ನಲ್ಕ, ಧನುಷ್ ಮಾಯಿಲೆಂಗಿ, ಹೃತೇಶ್ ಬಾಳೆಮೂಲೆ, ಲಿಖಿತ್ ಬಾಳೆಮೂಲೆ ಪಾತ್ರ ನಿರ್ವಹಿಸಿದ್ದರು. ಕಳೆದ ವರ್ಷ ಈ ಶಾಲಾ ಈ ತಂಡವು ಕೇರಳ ರಾಜ್ಯ ಕಲೋತ್ಸವದಲ್ಲಿ ಪ್ರಥಮ ಸ್ಥಾನ ಪಡೆದಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.