ಮಂಗಳೂರು: ಕೊಡಗು ಜಿಲ್ಲೆ ಎಮ್ಮೆಮಾಡು ಹಝುತ್ ಸೂಫಿ ಶಹೀದ್, ಸಯ್ಯದ್ ಹಸನ್ ಸಖಾಫ್ ಅಲ್ ಹಕ್ರಮೀ ಹಾಗೂ ಇತರ ಔಲಿಯಾಕ್ಕಳ ಉರುಸ್ ಏ. 17ರಿಂದ 24ರ ವರೆಗೆ ನಡೆಯಲಿದೆ ಎಂದು ಎಮ್ಮೆಮಾಡು ತಾಜುಲ್ ಇಸ್ಲಾಂ ಮುಸ್ಲಿಮ್ ಜಮಾಅತ್ ಸಮಿತಿ ಅಧ್ಯಕ್ಷ ಕೆ.ಎಂ ಹುಸೈನ್ ಸಖಾಫಿ ತಿಳಿಸಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು 17ರಂದು ಜುಮುಖಿ ನಮಾಝಿನ ನಂತರ ಧ್ವಜಾರೋಹಣ ನೆರವೇರಲಿದ್ದು. ಸಮಸ್ತ ಕೇರಳ ಜಂಇಯ್ಯತ್ ಉಲ್ ಉಲಮಾ ಅಧ್ಯಕ್ಷ ಸೈಯ್ಯದುಲ್ ಉಲಮಾ ಸಯ್ಯದ್ ಜಿಫ್ರಿ ಮುತ್ತುಕೋಯ ತಂಬಳ್ ಉದ್ಘಾಟನೆ ಮತ್ತು ಮಖಾಂ ಝಿಯಾರತ್ ನೆರವೇರಿಸಲಿದ್ದಾರೆ. ನಾಯಿಟ್ ಖಾಝಿ ಅಬ್ದುಲ್ಲ ಫೈಝಿ ಮತ್ತಿತರರು ಭಾಗವಹಿಲಿದ್ದಾರೆ ಎಂದರು ತಿಳಿಸಿದರು.

17ರಂದು ರಾತ್ರಿ 8.30ಕ್ಕೆ ಸ್ಥಳೀಯ ಖತೀಬ್ ಅಬ್ದುಲ್ ರಾಝಿಕ್ ಫೈಯಿಯ ಅಧ್ಯಕ್ಷತೆಯಲ್ಲಿ ನಡೆಯಲಿರುವ ರಾತೀಬ್ನಲ್ಲಿ ಮುದರಿಸ್ ಎ.ಪಿ ಹಂಸ ಸಖಾಫಿ ಮುಖ್ಯ ಭಾಷಣ ಮಾಡಲಿದ್ದು ರಿಫಾಯಿ ರಾತೀಬ್ ಶೈಖ್ ಕೋಯ ಕಾಪಾಡ್ ನೇತೃತ್ವ ವಹಿಸುವರು.

18 ರಂದು ರಾತ್ರಿ 7 ಗಂಟೆಗೆ ಶಿಹಾಬುದ್ದೀನ್ ಅಲ್ ಬುಖಾರಿ ಕಡಲುಂಡಿ ಅವರ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಲಿದ್ದು ಮುಸ್ತಫಾ ಸಖಾಫಿ ತೆನ್ನಲ ಮುಖ್ಯ ಭಾಷಣ ಮಾಡಲಿದ್ದಾರೆ. 19ರಂದು ರಾತ್ರಿ 7 ಗಂಟೆಗೆ ಸೂಫಿ ಶಹೀದ್ ದರ್ಗಾದಲ್ಲಿ ಶಿಹಾಬುದ್ದೀನ್ ಮುತ್ತನೂರ್ ತಂಙಳ್ ನೇತೃತ್ವದಲ್ಲಿ ಖತಂ ದುಆ ನಡೆಯಲಿದೆ. ರಾತ್ರಿ 8.30ಕ್ಕೆ ಪೇರೋಡ್ ಅಬ್ದುಲ್ ರಹ್ಮಾನ್ ಸಖಾಫಿ ಭಾಷಣ ಮಾಡಲಿದ್ದಾರೆ ಎಂದು ಅವರು ವಿವರಿಸಿದರು.

ಏ.20ರಂದು ಪಾಣಕ್ಕಾಡ್ ಶಿಹಾಬ್ ತಂಙಳ್ ನೇತೃತ್ವದಲ್ಲಿ ನಡೆಯುವ ಸಮಾವೇಶವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸುವರು. ಇಂಡಿಯನ್ ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಮುಖ್ಯ ಭಾಷಣ ನೆರವೇರಿಸಲಿದ್ದಾರೆ. ವಿಧಾನಸಭಾಧ್ಯಕ್ಷ ಯು.ಟಿ ಖಾದರ್, ವಕ್ಫ್ ವಸತಿ ಸಚಿವ ಜಮೀರ್ ಅಹಮ್ಮದ್, ಕೊಡಗು ಉಸ್ತುವಾರಿ ಸಚಿವ ಬೋಸರಾಜು, ಶಾಸಕರಾದ ಪೊನ್ನಣ್ಣ, ಮಂತರಗೌಡ, ಎನ್.ಎ ಹ್ಯಾರಿಸ್, ಕರ್ನಾಟಕ ವಕ್ಫ್ ಸಮಿತಿ ಉಪಾದ್ಯಕ್ಷ ಶಾಫಿ ಸಅದಿ, ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ವಕ್ಫ್ ಮಂಡಳಿ ಅಧ್ಯಕ್ಷ ಮುಹಮ್ಮದ್ ಅಲಿ ಅಲ್ ಹುಸೈನಿ, ಮುಖಂಡರಾದ ಕೆ.ಜಿ ಬೋಪಯ್ಯ, ಇಬ್ರಾಹಿಂ ಮಾಸ್ಟರ್ ಸುಂಟಿಕೊಪ್ಪ, ಬಿ.ಜಿ ಹನೀಫ್. ರಾತ್ರಿ 8.30ಕ್ಕೆ ಅನ್ವರ್ ಮುಹಿಯುದ್ದೀನ್ ಹುದವಿ ಆಲುವ ಧಾರ್ಮಿಕ ಪ್ರವಚನ ನೀಡುವರು. 21ರಂದು ರಾತ್ರಿ ನವಾಸ್ ಮನ್ನಾನಿ ಪನವೂರ್, 22ರಂದು ಮುಹಮ್ಮದ್ ಫಾರೂಕ್ ನಯೀಮಿ, 23ರಂದು ಸಿರಾಜುದ್ದೀನ್ ಖಾಸಿಮಿ ಪತ್ತನಾಪುರಂ ಪ್ರವಚನ ನೀಡಲಿರುವರು. 24ರಂದು ಮಧ್ಯಾಹ್ನ 2 ಗಂಟೆಗೆ ಶಿಹಾಬುದ್ದೀನ್ ಅಲ್ ಹೈದರೂಸಿ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಮಾರೋಪ ಸಮಾರಂಭದ ಉದ್ಘಾಟನೆಯನ್ನು ಇಲ್ಯಾಸ್ ಅಲ್ ಐದರೂಸಿ ತಂಙಳ್ ನೆರವೇರಿಸುವರು. ಶಿಹಾಬುದ್ದೀನ್ ತಂಙಳ್ ಅಲ್ ಐದರೂಸಿ ಅಧ್ಯಕ್ಷತೆ ವಹಿಸಲಿದ್ದು ವಕೀಲ ಹುಸೈನ್ ಸಖಾಫಿ ಚುಳ್ಳಿಕ್ಕೋಡ್ ಪ್ರವಚನ ನೀಡುವರು ಎಂದು ಅವರು ತಿಳಿಸಿದರು.

ಅಶ್ರಫ್ ಜೌಹರಿ ಎಮ್ಮೆಮಾಡು ಮತ್ತು ಅಬ್ದುಲ್ ರಹಿಮಾನ್ ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260417-29-1832641867

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.