ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯೆನೆಪೋಯ; ಕ್ಯಾನ್ಸರ್‌ ತಡೆ ಕ್ಲಿನಿಕ್‌, ಕಾಲ್ಪೋಸ್ಕೋಪ್ ಘಟಕ ಉದ್ಘಾಟನೆ

Last Updated 11 ಮಾರ್ಚ್ 2023, 14:59 IST
ಅಕ್ಷರ ಗಾತ್ರ

ಉಳ್ಳಾಲ: ದೇರಳಕಟ್ಟೆಯ ಝುಲೇಖಾ ಯೆನೆಪೋಯ ಹಾಗೂ ಟಾಟಾ ಟ್ರಸ್ಟ್‌ ಸಹಕಾರದೊಂದಿಗೆ ನಿರ್ಮಾಣಗೊಂಡಿರುವ ಕ್ಯಾನ್ಸರ್‌ ಆಸ್ಪತ್ರೆಯಲ್ಲಿ ‘ಕ್ಯಾನ್ಸರ್‌ ತಡೆಗಟ್ಟುವ ಕ್ಲಿನಿಕ್‌ ಹಾಗೂ ಕಾಲ್ಪೋಸ್ಕೋಪ್’ ಘಟಕವನ್ನು ರಾಜ್ಯ ಸರ್ಕಾರದ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆಯ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಜಾವೇದ್‌ ಅಖ್ತರ್‌ ಶುಕ್ರವಾರ ಉದ್ಘಾಟಿಸಿದರು.

ಕ್ಯಾನ್ಸರ್‌ ಆಸ್ಪತ್ರೆಯ ಸ್ತ್ರೀರೋಗ ಆಂಕೊಲಾಜಿ ಲ್ಯಾಪ್ರಸ್ಕೋಪಿಕ್ ಮತ್ತು ರೊಬೊಟಿಕ್ ಶಸ್ತ್ರಚಿಕಿತ್ಸಕಿ ಡಾ.ಮರಿಯಮ್‌ ಅಂಜುಮ್‌ ಇಫ್ತಿಕರ್‌ ಮಾತನಾಡಿ, ‘ಆಸ್ಪತ್ರೆಯಲ್ಲಿ ಬಾಯಿ, ಸ್ತನ ಮತ್ತು ಸರ್ವೈಕಲ್‌ ಕ್ಯಾನ್ಸರ್‌ ತಡೆಗಟ್ಟುವಿಕೆ ಕುರಿತು ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಸ್ತನ ಕ್ಯಾನ್ಸರ್‌ ತಡೆಗಟ್ಟುವಿಕೆ, ನಿವಾರಣೆ ಹಾಗೂ ಪತ್ತೆ ಕಾರ್ಯಕ್ಕೆ ಮ್ಯಾಮೊಗ್ರಾಮ್‌ನಂತಹ ಉತ್ತಮ ವಿಧಾನವನ್ನು ಆಸ್ಪತ್ರೆ ಹೊಂದಿದೆ’ ಎಂದರು.

ಯೆನೆಪೋಯ ಸಂಸ್ಥೆ ‘ಆರೋಗ್ಯವಂತ ಮಹಿಳೆ’ ಅನ್ನುವ ಕಾರ್ಯಕ್ರಮದಡಿ ವಿವಿಧ ಯೋಜನೆಗಳನ್ನು ಹಮ್ಮಿಕೊಂಡಿದೆ. ಗ್ರಾಮೀಣ ಮಹಿಳೆಯರ ಆರೋಗ್ಯ ತಪಾಸಣೆ, ಮೊಬೈಲ್‌ ಬಸ್‌ ಕ್ಲಿನಿಕ್, ಬುಡಕಟ್ಟು ಪ್ರದೇಶದಲ್ಲಿರುವ ಮಹಿಳೆಯರನ್ನು ಆರೋಗ್ಯವಂತರನ್ನಾಗಿಸುವ ಪ್ರಯತ್ನದಲ್ಲಿ ನಿರತವಾಗಿದೆ ಎಂದರು.

ಯೆನೆಪೋಯ ಸ್ವಾಯತ್ತ ವಿವಿ ಸಹಕುಲಪತಿ ಡಾ.ಬಿ.ಎಚ್‌ ಶ್ರೀಪತಿ ರಾವ್, ಕುಲಸಚಿವ ಡಾ.ಗಂಗಾಧರ ಸೋಮಯಾಜಿ, ವೈದ್ಯಕೀಯ ಅಧೀಕ್ಷಕ ಡಾ.ಪ್ರಕಾಶ್‌ ಸಲ್ದಾನ್ಹ, ಯೆನೆಪೋಯ ವೈದ್ಯಕೀಯ ಕಾಲೇಜು ಡೀನ್‌ ಡಾ.ಮೂಸಬ್ಬ, ಹಣಕಾಸು ವಿಭಾಗದ ಅಧಿಕಾರಿ‌ ಅಬ್ದುಲ್ ಮೊಹ್ಸಿನ್, ಆಂಕಾಲಜಿ ವಿಭಾಗ ಮುಖ್ಯಸ್ಥ ಡಾ.ಜಲಾಲುದ್ದೀನ್‌ ಅಕ್ಬರ್,
ಸಹಾಯಕ ವೈದ್ಯಕೀಯ ಅಧೀಕ್ಷಕ ಡಾ.ಬೋನಿ ಪೌಲ್, ರಾಮಚಂದ್ರ ಶೆಟ್ಟಿ, ವಿಭಾಗದ ಡಾ.ಅಶ್ವಿನಿ, ಡಾ.ಪೂನಂ, ಡಾ.ಶ್ರುತಿ, ಡಾ.ರಚನಾ, ಡಾ.ಲ್ಯಾನ್ಸಿ, ಆಸ್ಪತ್ರೆ ಸಾರ್ವಜನಿಕ ಸಂಪರ್ಕ
ಅಧಿಕಾರಿ ಸಬಿತಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT