ಸೋಮವಾರ, ಡಿಸೆಂಬರ್ 5, 2022
27 °C

ದಕ್ಷಿಣ ಕನ್ನಡ, ಉಡುಪಿ ಜಿಲ್ಲಾ ಮಟ್ಟದ ಯೋಗಾಸನ ಸ್ಪರ್ಧೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಯೋಗಾಸನ ಸ್ಪೋರ್ಟ್ಸ್ ಅಸೋಸಿಯೇಷನ್, ನಗರದ ಆವಿಷ್ಕಾರ ಯೋಗ ಸಂಸ್ಥೆಯ ಸಹಯೋಗದಲ್ಲಿ ಆಯೋಜಿಸಿರುವ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲಾ ಮಟ್ಟದ ಯೋಗಾಸನ ಸ್ವರ್ಧೆ ಇದೇ 16ರಂದು ಪಂಪ್‌ವೆಲ್‌ನ ಸಾರ್ವಜನಿಕ ಶ್ರೀ ಗಣೇಶೋತ್ಸವ ಸುಮುಖ ಸಭಾಭವನದಲ್ಲಿ ನಡೆಯಲಿದೆ.

16 ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿದ್ದು ಬೆಳಿಗ್ಗೆ 9.30ಕ್ಕೆ ಆರಂಭ ಆಗಲಿದೆ. 6 ವರ್ಷದೊಳಗಿನ ಬಾಲಕ ಬಾಲಕಿಯರು, 6ರಿಂದ 10 ವರ್ಷದೊಳಗಿನ ಬಾಲಕ ಬಾಲಕಿಯರು, 11ರಿಂದ 16 ವರ್ಷದೊಳಗಿನ ಬಾಲಕ ಬಾಲಕಿಯರು, 17ರಿಂದ 25 ವರ್ಷದೊಳಗಿನ ಯುವಕ ಯುವತಿಯರು, 26ರಿಂದ 35 ವರ್ಷದೊಳಗಿನ ಪುರುಷರು, 60 ವರ್ಷದೊಳಗಿನ ಮತ್ತು 61 ವರ್ಷ ಮೇಲಿನ ಪುರುಷ–ಮಹಿಳೆಯರ ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿವೆ.

ಪಶ್ಚಿಮೋತ್ತಾನಾಸನ, ವೃಕ್ಷಾಸನ, ಉಷ್ಟ್ರಾಸನ, ಧನುರಾಸನ, ಸರ್ವಾಂಗಾಸನ, ಮತ್ತ್ಯಾಸನಗಳ ಪೈಕಿ ಮೂರನ್ನು ಎಲ್ಲ ವಿಭಾಗದವರು ಕೂಡ ಕಡ್ಡಾಯುವಾಗಿ ಮಾಡಬೇಕು. 2 ಐಚ್ಛಿಕ ಆಸನ ಪ್ರದರ್ಶಿಸಬೇಕು ಎಂದು ಪ್ರಕಟಣೆ ತಿಳಿಸಿದೆ.

ಮಾಹಿತಿ ಹಾಗೂ ನೋಂದಣಿಗೆ ಕುಶಾಲಪ್ಪ ಗೌಡ, ಆವಿಷ್ಕಾರ ಯೋಗ, ಗುರುಕೃಪಾ 1ನೇ ಮಹಡಿ, 5ನೇ ಅಡ್ಡರಸ್ತೆ, ಬಿಜೈ ಕಾಪಿಕಾಡ್,  ಮಂಗಳೂರು (9845588740, 9591130105) ಅವರನ್ನು ಸಂಪರ್ಕಿಸುವಂತೆ ತಿಳಿಸಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು