ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಬಿಎಸ್‌ಇ: 10ನೇ ತರಗತಿ ಗಣಿತ, 12ನೇ ತರಗತಿ ಅರ್ಥಶಾಸ್ತ್ರ ಮರುಪರೀಕ್ಷೆ

Last Updated 28 ಮಾರ್ಚ್ 2018, 11:15 IST
ಅಕ್ಷರ ಗಾತ್ರ

ನವದೆಹಲಿ: ಹತ್ತನೇ ತರಗತಿಯ ಗಣಿತ ಮತ್ತು 12ನೇ ತರಗತಿಯ ಅರ್ಥಶಾಸ್ತ್ರ ವಿಷಯಗಳ ಮರುಪರೀಕ್ಷೆ ನಡೆಸುವುದಾಗಿ ಕೇಂದ್ರ ಪ್ರೌಢಶಿಕ್ಷಣ ಮಂಡಳಿಯ(ಸಿಬಿಎಸ್‌ಇ) ಬುಧವಾರ ಪ್ರಕಟಿಸಿದೆ.

ಗಣಿತ, ಅರ್ಥಶಾಸ್ತ್ರ ವಿಷಯಗಳ ಪ್ರಶ್ನೆಪತ್ರಿಕೆ ಸೋರಿಕೆಯಾಗಿರುವ ವರದಿಗಳ ಬೆನ್ನಲೇ ಸಿಬಿಎಸ್‌ಇ ಮರುಪರೀಕ್ಷೆಯ ನಿರ್ಧಾರ ಪ್ರಕಟಿಸಿದ್ದು, ಒಂದು ವಾರದೊಳಗೆ ಸಿಬಿಎಸ್‌ಇ ಅಧಿಕೃತ ವೆಬ್‌ಸೈಟ್‌ನಲ್ಲಿ ಪರೀಕ್ಷೆ ದಿನಾಂಕ ತಿಳಿಸುವುದಾಗಿ ಹೇಳಿದೆ.

ಸಾಮಾಜಿಕ ಮಾಧ್ಯಮಗಳು ಹಾಗೂ ವಾಟ್ಸ್‌ಆ್ಯಪ್‌ ಮೂಲಕ ಪ್ರಶ್ನೆಪತ್ರಿಕೆ ಸೋರಿಕೆ ಆಗಿರುವ ಕುರಿತ ವರದಿಗಳನ್ನು ಸೋಮವಾರ ಸಿಬಿಎಸ್‌ಇ ಅಲ್ಲಗಳೆದಿತ್ತು.

ಕೆಲವು ಪರೀಕ್ಷೆಗಳ ವೇಳೆ ನಡೆದಿರುವ ಸಂಗತಿಗಳನ್ನು ಪರಿಗಣಿಸಿರುವ ಮಂಡಳಿ, ವಿದ್ಯಾರ್ಥಿಗಳ ಹಿತಾಸಕ್ತಿ ಹಾಗೂ ಬೋರ್ಡ್‌ ಎಕ್ಸಾಮ್‌ನ ಘನತೆಗೆ ಧಕ್ಕೆ ಉಂಟಾಗಬಾರದು ಎಂಬ ದೃಷ್ಟಿಯಿಂದ ಮರು ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ ಎಂದು ಸಿಬಿಎಸ್‌ಇ ಪ್ರಕಟಣೆಯಲ್ಲಿ ತಿಳಿಸಿದೆ.

ಬುಧವಾರ 10ನೇ ತರಗತಿಯ ಗಣಿತ ಪರೀಕ್ಷೆ ಹಾಗೂ ಮಾ.26ರಂದು 12ನೇ ತರಗತಿಯ ಅರ್ಥಶಾಸ್ತ್ರ ಪರೀಕ್ಷೆ ನಡೆದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT