ಶನಿವಾರ, ಜೂನ್ 19, 2021
26 °C

ಮೈ ಡಾಟರ್ ಮೈ ಹೀರೊ ಸ್ಪರ್ಧೆ: ಬಹುಮಾನ ವಿತರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಹೆಣ್ಣುಮಕ್ಕಳ ದಿನದ ಅಂಗವಾಗಿ ಮಲಬಾರ್ ಗೋಲ್ಡ್ ಮತ್ತು ಡೈಮಂಡ್ಸ್ ವತಿಯಿಂದ 'ಮೈ ಡಾಟರ್ ಮೈ ಹೀರೊ' ಎಂಬ ಸ್ಪರ್ಧೆಯನ್ನು ದೇಶದಾದ್ಯಂತ ತನ್ನ ಎಲ್ಲ ಮಳಿಗೆಗಳಲ್ಲಿ ಆಯೋಜಿಸಿತ್ತು. ಇವುಗಳಲ್ಲಿ ವಿಶೇಷವಾದ ಪತ್ರಗಳನ್ನು ಆಯ್ಕೆ ಮಾಡಿ, ವಿಜೇತರಿಗೆ ಆಕರ್ಷಕ ಉಡುಗೊರೆಗಳು ಹಾಗೂ ವೋಚರ್‌ಗಳನ್ನು ಒಳಗೊಂಡ ಬಹುಮಾನವನ್ನು ಭಾನುವಾರ ವಿತರಿಸಲಾಯಿತು.

ಸೆ.21ರಿಂದ 26ರವರೆಗೆ ನಡೆದ ಈ ಸ್ಫರ್ಧೆಯಲ್ಲಿ ಭಾಗವಹಿಸುವ ಗ್ರಾಹಕರು ತಮ್ಮ ಸಮೀಪದ ಮಳಿಗೆಯಿಂದ ಮೈ ಡಾಟರ್ ಮೈ ಹೀರೊ ಪತ್ರವನ್ನು ಪಡೆದು, ಮಗಳು ಹಾಗೂ ತಂದೆಯ ಕುರಿತು ವಿಶೇಷ ಸಂಗತಿಗಳನ್ನು ಪರಸ್ಪರ ಬರೆದು, ಮಳಿಗೆಯ ಬಾಕ್ಸ್ ನಲ್ಲಿ ಹಾಕುವಂತೆ ತಿಳಿಸಲಾಗಿತ್ತು.

'ಪ್ರತಿ ತಂದೆಗೂ ತನ್ನ ಮಗಳೆಂದರೆ ವಿಶೇಷ. ಹಾಗಾಗಿ, ಹೆಣ್ಣುಮಕ್ಕಳ ದಿನವೇ ತಂದೆಯರಿಗೆ ವಿಶೇಷವಾದ ದಿನ. ತಂದೆ ಮತ್ತು ಮಗಳ ನಡುವಿನ ಆರೈಕೆ, ಪ್ರೇಮ, ನಂಬಿಕೆ ಮತ್ತು ಅನುಬಂಧವನ್ನು ಬೆಸೆಯುವ ಉದ್ದೇಶದಿಂದ ಈ ಸ್ಪರ್ಧೆ ಆಯೋಜಿಸಲಾಯಿತು' ಎಂದು ಮಲಬಾರ್ ಸಮೂಹ ಸಂಸ್ಥೆಯ ಅಧ್ಯಕ್ಷ ಎಂ.ಪಿ.ಅಹಮದ್ ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು