ಶುಕ್ರವಾರ, ಜೂನ್ 25, 2021
21 °C

ಶಾರ್ಟ್‌ ಸರ್ಕೀಟ್‌: ಮಿಲ್ಲತ್ ಬ್ಯಾಂಕಿನ ಬ್ರಾಂಚ್‌ ಕಚೇರಿಗೆ ಬೆಂಕಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಮಿಲ್ಲತ್‌ ಬ್ಯಾಂಕ್‌ನ ಬಾಷಾನಗರದ ಶಾಖಾ ಕಚೇರಿಯಲ್ಲಿ ಬುಧವಾರ ವಿದ್ಯುತ್‌ ಶಾರ್ಟ್‌ ಸರ್ಕೀಟ್‌ನಿಂದ ಬೆಂಕಿ ಹತ್ತಿಕೊಂಡು ಸುಟ್ಟಿದೆ. ಅಗ್ನಿ ಶಾಮಕದಳದ ಸಿಬ್ಬಂದಿ ಬಂದು ಬೆಂಕಿ ನಂದಿಸಿದ್ದಾರೆ.

ಮೇಜು, ಖುರ್ಚಿಗಳು, ಐದು ಕಂಪ್ಯೂಟರ್‌ಗಳು, ಕೆಲವು ದಾಖಲೆಗಳು ಸುಟ್ಟು ಹೋಗಿವೆ.

ಮಿಲ್ಲತ್‌ ಬ್ಯಾಂಕ್‌ನ ವಿಸ್ತೃತ ಕೌಂಟರ್‌ ಅದಾಗಿದ್ದು, ಬಂದ್‌ ಆಗಿತ್ತು. ಅದರಲ್ಲಿ ಈಚೆಗೆ ವ್ಯವಹಾರ ನಡೆಯುತ್ತಿರಲಿಲ್ಲ. ಆದರೆ ದಾಖಲೆಪತ್ರಗಳು ಪೀಠೋಪಕರಣಗಳು ಎಲ್ಲವೂ ಅದರಲ್ಲಿ ಇದ್ದವು ಎಂದು ಬ್ಯಾಂಕ್‌ ಅಧ್ಯಕ್ಷ ಖಾಲಿದ್‌ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಬೆಂಕಿ ಬಿದ್ದಿರುವ ಬಗ್ಗೆ ಮಾಹಿತಿ ಬಂದ ಕೂಡಲೇ ನಮ್ಮ ಸಿಬ್ಬಂದಿ ಹೋಗಿ ಬೆಂಕಿ ನಂದಿಸಿದ್ದಾರೆ. ಏನೆಲ್ಲ ಒಳಗೆ ಇತ್ತು ಎಂಬ ಬಗ್ಗೆ ಬ್ಯಾಂಕ್‌ನವರು ಮಾಹಿತಿಯನ್ನು ಗುರುವಾರ ನೀಡಲಿದ್ದಾರೆ ಎಂದು ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಬಸವಪ್ರಭು ಶರ್ಮಾ ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು