ಬುಧವಾರ, ಸೆಪ್ಟೆಂಬರ್ 18, 2019
28 °C

ಮಳೆಯಿಂದ ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ ₹5 ಲಕ್ಷ ಪರಿಹಾರ

Published:
Updated:
Prajavani

ದಾವಣಗೆರೆ: ದಾವಣಗೆರೆಯಲ್ಲಿ ಸುರಿದ ಭಾರಿ ಮಳೆಗೆ ಸಿಲುಕಿ ಮೃತಪಟ್ಟ ಎಸ್‌.ಎಂ. ಕೃಷ್ಣ ನಗರದ ನಿವಾಸಿ ಅಶೋಕ್ ಕುಟುಂಬಕ್ಕೆ ಶಾಸಕ ಶಾಮನೂರು ಶಿವಶಂಕರಪ್ಪ ₹5 ಲಕ್ಷ ಪರಿಹಾರ ವಿತರಿಸಿದರು.

ಶನಿವಾರ ತಮ್ಮ ಗೃಹ ಕಚೇರಿಯಲ್ಲಿ ಪರಿಹಾರ ವಿತರಿಸಿ ಕುಟುಂಬಕ್ಕೆ ಸಾಂತ್ವನ ಹೇಳಿ, ಈ ಹಣವನ್ನು ಮಕ್ಕಳ ಶಿಕ್ಷಣಕ್ಕೆ ಬಳಸಿ ಎಂದು ಸಲಹೆ ನೀಡಿದರು.

ಮಳೆಯಿಂದಾಗಿ 20ಕ್ಕೂ ಹೆಚ್ಚು ಮನೆಗಳು ಬಿದ್ದಿದ್ದು, ಆರು ಮನೆಗಳು ಸಂಪೂರ್ಣ ಜಖಂಗೊಂಡಿದ್ದರೆ, ಇನ್ನುಳಿದ ಮನೆಗಳಿಗೆ ಸಣ್ಣಪುಟ್ಟ ಹಾನಿಯಾಗಿದೆ. ಸಂಪೂರ್ಣ ಜಖಂಗೊಂಡ ಮನೆಗಳಿಗೆ ಕ್ರಮವಾಗಿ ₹ 71,325 ಮತ್ತು ಸಣ್ಣಪುಟ್ಟ ಹಾನಿಯಾದ ಮನೆಗಳಿಗೆ ₹5,200 ಪರಿಹಾರ ವಿತರಿಸಲಾಯಿತು.

ತಹಶೀಲ್ದಾರ್ ಜಿ. ಸಂತೋಷ್‍ಕುಮಾರ್, ಶಿರಸ್ತೆದಾರ್ ರಾಜೇಶ್, ಗ್ರಾಮ ಲೆಕ್ಕಾಧಿಕಾರಿ ಸಂಜಯ್, ಮುಖಂಡ ದುಗ್ಗೇಶ್ ಇದ್ದರು.

Post Comments (+)