ಸೋಮವಾರ, ಜನವರಿ 17, 2022
18 °C

ವಿದೇಶದಿಂದ 11 ಮಂದಿ ಆಗಮನ: ಓಮೈಕ್ರಾನ್‌ ಪತ್ತೆಯಿಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ವಿವಿಧ ದೇಶಗಳಿಂದ 11 ಮಂದಿ ದಾವಣಗೆರೆಗೆ ಬಂದಿದ್ದಾರೆ. ಎಲ್ಲರಿಗೂ ಕೊರೊನಾ ಪರೀಕ್ಷೆ ಮಾಡಲಾಗಿದೆ. ಸದ್ಯ ಪಾಸಿಟಿವ್‌ ಪತ್ತೆಯಾಗಿಲ್ಲ.

ಜರ್ಮನಿಯಿಂದ ಮೂವರು, ಅಮೆರಿಕದಿಂದ ಮೂವರು, ಬ್ರಿಟನ್‌ನಿಂದ ಇಬ್ಬರು, ಮಸ್ಕತ್‌ನಿಂದ ಇಬ್ಬರು ಹಾಗೂ ಸೌದಿ ಅರೇಬಿಯಾದಿಂದ ಒಬ್ಬರು ಬಂದಿದ್ದಾರೆ. ಜರ್ಮನಿಯಿಂದ ಬಂದವರು ಹರಿಹರದ ನಿವಾಸಿಗಳಾಗಿದ್ದಾರೆ. ಉಳಿದವರು ದಾವಣಗೆರೆಯವರು.

ವಿದೇಶದಿಂದ ಬಂದವರನ್ನು 72 ಗಂಟೆಗಳ ಒಳಗೆ ಪರೀಕ್ಷೆಗೆ ಒಳಪಡಿಸಬೇಕು ಎಂಬ ನಿಯಮ ಇದೆ. ಅದರಂತೆ ಎಲ್ಲರಿಗೂ ಪರೀಕ್ಷೆ ಮಾಡಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು