ಸೋಮವಾರ, ಅಕ್ಟೋಬರ್ 26, 2020
21 °C

162 ಮಂದಿಗೆ ಕೊರೊನಾ: ಮೂವರ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: 90 ವರ್ಷದ ವೃದ್ಧೆ, ಒಂದು ವರ್ಷದ ಹೆಣ್ಣು ಮಗು ಸೇರಿ 162 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ಸೋಮವಾರ ದೃಢಪಟ್ಟಿದೆ. ಮೂವರು ಮೃತಪಟ್ಟಿದ್ದಾರೆ.

ಬೆಳವನೂರಿನ 70 ವರ್ಷದ ವೃದ್ಧ ತೀವ್ರ ಉಸಿರಾಟದ ಸಮಸ್ಯೆಯಿಂದ ಮೃತಪಟ್ಟರು. ವಿನೋಬನಗರದ 85 ವರ್ಷದ ವೃದ್ಧ ಮತ್ತು ಹರಿಹರ ತಾಲ್ಲೂಕು ಬೆಳ್ಳೂಡಿಯ 53 ವರ್ಷದ ಮಹಿಳೆ ಉಸಿರಾಟದ ಸಮಸ್ಯೆ, ಹೃದಯ ಸಂಬಂಧಿ ಕಾಯಿಲೆ, ರಕ್ತದೊತ್ತಡಗಳಿಂದ ಬಳಲಿ ನಿಧನರಾದರು.

27 ವೃದ್ಧರು, 15 ವೃದ್ಧೆಯರು, ಮೂವರು ಬಾಲಕರು, 9 ಮಂದಿ ಬಾಲಕಿಯರಿಗೆ ಕೊರೊನಾ ಬಂದಿದೆ.

ಪೊಲೀಸ್‌ ಕ್ವಾರ್ಟರ್ಸ್‌ನ ಇಬ್ಬರು, ಎಸ್‌ಎಸ್‌ ಆಸ್ಪತ್ರೆಯ ಇಬ್ಬರು, ಎಸ್‌ಎಸ್‌ ಆಸ್ಪತ್ರೆ ಕ್ವಾರ್ಟರ್ಸ್‌ನ ಒಬ್ಬರು, ಬಾಪೂಜಿ ಆಸ್ಪತ್ರೆಯ ಒಬ್ಬರು, ಸಿಜಿ ಆಸ್ಪತ್ರೆಯ ಒಬ್ಬರು, ನಲ್ಕುಂದ ಪ್ರಾಥಮಿಕ ಆರೋಗ್ಯ ಕೇಂದ್ರದ ಒಬ್ಬರಿಗೆ ಕೊರೊನಾ ಬಂದಿದೆ.

ದಾವಣಗೆರೆ ತಾಲ್ಲೂಕಿನ 79 ಮಂದಿಗೆ ಸೋಂಕು ತಗುಲಿದೆ. ತೋಳಹುಣಸೆ, ಕಡ್ಲೇಬಾಳ್‌, ಬಾವಿಕಲ್‌, ಬಸವನಾಳ್‌, ಲೋಕಿಕೆರೆ, ಯರಗುಂಟೆ, ನಲ್ಕುಂದ ಹೀಗೆ ಎಂಟು ಮಂದಿ ಗ್ರಾಮೀಣ ಭಾಗದವರು. ಉಳಿದ 71 ಮಂದಿ ಮಹಾನಗರ ಪಾಲಿಕೆ ವ್ಯಾಪ್ತಿಯವರು.

137 ಮಂದಿ ಸೋಮವಾರ ಗುಣಮುಖರಾಗಿದ್ದಾರೆ. 16 ವೃದ್ಧರು, 6 ವೃದ್ಧೆಯರು, 6 ಬಾಲಕರು, 6 ಬಾಲಕಿಯರು ಒಳಗೊಂಡಿದ್ದಾರೆ.

ಜಿಲ್ಲೆಯಲ್ಲಿ ಈವರೆಗೆ 14,698 ಮಂದಿಗೆ ಕೊರೊನಾ ಬಂದಿದೆ. 11,639 ಮಂದಿ ಗುಣಮುಖರಾಗಿದ್ದಾರೆ. 234 ಮಂದಿ ಮೃತಪಟ್ಟಿದ್ದಾರೆ. 2,825 ಸಕ್ರಿಯ ಪ್ರಕರಣಗಳಿವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು