ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ: 178 ಮಂದಿಗೆ ಕೊರೊನಾ, ಮೂವರ ಸಾವು

89 ಮಂದಿ ಆಸ್ಪತ್ರೆಯಿಂದ ಬಿಡುಗಡೆ * ಗುಣಮುಖರಾದವರ ಒಟ್ಟು ಸಂಖ್ಯೆ 1479
Last Updated 2 ಆಗಸ್ಟ್ 2020, 15:43 IST
ಅಕ್ಷರ ಗಾತ್ರ

ದಾವಣಗೆರೆ: ಜಿಲ್ಲೆಯಲ್ಲಿ 25 ವೃದ್ಧರು, 15 ವೃದ್ಧೆಯರು, ಇಬ್ಬರು ಬಾಲಕರು, 10 ಬಾಲಕಿಯರು ಸೇರಿ 178 ಮಂದಿಗೆ ಕೊರೊನಾ ಇರುವುದು ಭಾನುವಾರ ದೃಢಪಟ್ಟಿದೆ. ಮೂವರು ಮೃತಪಟ್ಟಿದ್ದಾರೆ.

ಹರಿಹರದ 45 ವರ್ಷದ ಮಹಿಳೆ ಉಸಿರಾಟದ ಸಮಸ್ಯೆಯಿಂದ ಜುಲೈ 31ರಂದು ಮೃತಪಟ್ಟಿದ್ದಾರೆ. ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ವಿನೋಬನಗರದ 70 ವರ್ಷದ ವೃದ್ಧೆ ಜುಲೈ 29ರಂದು ಆಸ್ಪತ್ರೆಗೆ ದಾಖಲಾಗಿದ್ದು, ಆ.1ರಂದು ಮೃತಪಟ್ಟರು. ಜುಲೈ 26ಕ್ಕೆ ಆಸ್ಪತ್ರೆಗೆ ದಾಖಲಾಗಿದ್ದ ಜಗಳೂರು ಮುಸ್ಟೂರಿನ 74 ವರ್ಷದ ವೃದ್ಧ ಜುಲೈ 31ರಂದು ನಿಧನರಾದರು. ಅವರಿಗೆ ಉಸಿರಾಟದ ಸಮಸ್ಯೆ, ಅಧಿಕ ರಕ್ಷತೊತ್ತಡ, ಮಧುಮೇಹ, ಮೂತ್ರಪಿಂಡದ ಸಮಸ್ಯೆ, ಹೃದಯದ ಸಮಸ್ಯೆ ಇತ್ತು. ಈ ಮೂವರಿಗೂ ಕೊರೊನಾ ಸೋಂಕು ತಗುಲಿರುವುದು ಖಚಿತವಾಗಿದೆ.

18ರಿಂದ 59 ವರ್ಷದವರೆಗಿನ 71 ಪುರುಷರಲ್ಲಿ, 55 ಮಹಿಳೆಯರಲ್ಲಿ ಸೋಂಕು ಕಾಣಿಸಿಕೊಂಡಿದೆ.

ಇನ್‌ಸ್ಟಿಟ್ಯೂಷನಲ್‌ ಕ್ವಾರಂಟೈನ್‌ನಲ್ಲಿರುವ 7 ಮಂದಿಗೆ, ನಿಟುವಳ್ಳೀಯ 6 ಮಂದಿಗೆ, ರಂಗನಾಥ ಬಡಾವಣೆಯ ಐವರು, ವಿನೋಬನಗರ, ಗಂಗನಕೋಟೆ, ಕೆಟಿಜೆ ನಗರದ ತಲಾ ನಾಲ್ವರು, ಆನೆಕೊಂಡ, ಶಾಂತಿನಗರದ ತಲಾ ಮೂವರು, ಬನಶಂಕರಿ ಬಡಾವಣೆ, ಎಸ್‌ಎಂಕೆ ನಗರ,ಎಸ್‌ಪಿಎಸ್‌ ನಗರ, ಭಾರತ್‌ ಕಾಲೊನಿಯ ತಲಾ ಇಬ್ಬರಿಗೆ ಸೋಂಕು ಇರುವುದು ಗೊತ್ತಾಗಿದೆ.

ಶಿವಕುಮಾರಸ್ವಾಮಿ ಬಡಾವಣೆ, ಎ.ಕೆ . ಕಾಲೊನಿ, ಉಪ್ಪಾರಬೀದಿ, ರಾಮನಗರ, ಸುರೇಶ್‌ನಗರ, ಡಿಸಿಎಂ ಟೌನ್‌ಶಿಪ್‌, ಎಸ್‌ಒಜಿ ಕಾಲೊನಿ, ದೇವರಾಜ ಅರಸು ಬಡಾವಣೆ, ಜೆ.ಎಚ್‌. ಪಟೇಲ್‌ ನಗರ, ಹೊಂಡದ ಸರ್ಕಲ್‌, ವಿವೇಕಾನಂದ ಬಡಾವಣೆ, ಬಂಬೂಬಜಾರ್‌, ನಗರ, ಎಂಸಿಸಿ ‘ಬಿ’ ಬ್ಲಾಕ್‌, ಸರಸ್ವತಿ ನಗರ, ಎಸ್‌ಎಸ್‌ ಬಡಾವಣೆ, ಯಲ್ಲಮ್ಮ ನಗರ, ಭಗತ್‌ಸಿಂಗ್‌ ನಗರ, ಅಮರಪ್ಪನ ತೋಟ, ತರಳಬಾಳು ಬಡಾವಣೆಯಲ್ಲಿ ಸೋಂಕು ಕಾಣಿಸಿಕೊಂಡಿದೆ.

ಗ್ರಾಮೀಣ ಪ್ರದೇಶಗಳಾ ಕಂದಗಲ್‌, ಹಳೇಬೇತೂರು, ಕೋಲ್ಕುಂಟೆಯ ತಲಾ ಇಬ್ಬರಿಗೆ ಹದಡಿ, ಬಾತಿ, ಅಗಸನಕಟ್ಟೆ, ಮೆಳ್ಳೆಕಟ್ಟೆ, ಕಾಡಜ್ಜಿ, ಮಾಯಕೊಂಡ, ನರಗನಹಳ್ಳಿಯ ತಲಾ ಒಬ್ಬರಿಗೆ ಸೋಂಕು ತಗುಲಿದೆ.

ಬಿಡಿಸಿಎಚ್‌, ಪೊಲೀಸ್‌ ಕ್ವಾರ್ಟರ್ಸ್‌ನ ಒಬ್ಬೊಬ್ಬರಿಗೆ ವೈರಸ್‌ ತಗುಲಿದೆ.

ಹೊನ್ನಾಳಿ ಮತ್ತು ನ್ಯಾಮತಿ ತಾಲ್ಲೂಕುಗಳ ಸುರಹೊನ್ನೆಯ 13 ಮಂದಿ, ಸಾಲಕಟ್ಟೆಯ ಏಳು, ಕುಂದೂರಿನ ಮೂವರು, ಸಾಸ್ವೆಹಳ್ಳಿ, ಬಿದಿರಹಳ್ಳಿಯ ತಲಾ ಇಬ್ಬರು, ಕೂಲಂಬಿ, ಕೆರೆಮಲ್ಲಾಪುರ, ಸವಳಂಗ, ಹಳೇಹರ್ಲಾಪುರ, ಹರಕೆರೆ, ಹಿರೆಕಲ್ಮಠ, ಹೊಸಭರಮಪುರ, ಪೊಲೀಸ್‌ ಕ್ವಾರ್ಟರ್ಸ್‌, ಜಿನಹಳ್ಳಿ, ನ್ಯಾಮತಿ ಸಿಎಚ್‌ಸಿಯ ಒಬ್ಬರಿಗೆ ಕೊರೊನಾ ಬಂದಿದೆ.

ಚನ್ನಗಿರಿ ತಾಲ್ಲೂಕಿನ ಸಂತೇಬೆನ್ನೂರಿನ 9 ಮಂದಿಗೆ, ನವಿಲೇಹಾಳ್‌ನ ಏಳು ಮಂದಿ, ಚನ್ನಗಿರಿ ಪಟ್ಟಣದ9 ಮಂದಿ , ಹೊನ್ನೆಭಾಗಿಯ ಇಬ್ಬರು, ತುಮ್ಕೋಸ್‌ನ ಒಬ್ಬರಿಗೆ ವೈರಸ್‌ ತಗುಲಿದೆ.

ಹರಿಹರ ತಾಲ್ಲೂಕಿನ ಹಳ್ಳದಕೇರಿ, ವಿದ್ಯಾನಗರದ ಐವರು, ಕುರುಬರಬೀದಿಯ ಮೂವರು, ತರಕಾರಿ ಮಾರುಕಟ್ಟೆ, ಮಲೆಬೆನ್ನೂರಿನ ತಲಾ ಇಬ್ಬರು, ಗುತ್ತೂರು, ಜೀಜಾಮಠ, ಅಮರಾವತಿ ಕಾಲೊನಿ, ಹೊಸಪೇಟೆ ಬೀದಿ, ದೊಡ್ಡಿಬೀದಿ, ಅಂಗನವಾಡಿ, ಜಡಿಯಪ್ಪ ಬಿಲ್ಡಿಂಗ್‌, ಇಂದಿರಾನಗರದ ಒಬ್ಬರಿಗೆ ಕೊರೊನಾ ಬಂದಿದೆ. ಜಗಳೂರು ಕಣಸವಳ್ಳಿಯ ಒಬ್ಬರಲ್ಲಿ ಸೋಂಕು ಕಂಡು ಬಂದಿದೆ.

ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನ ಇಬ್ಬರು, ಬಳ್ಳಾರಿ ಜಿಲ್ಲೆಯ ಹೊಸಪೇಟೆ, ಹರಪನಹಳ್ಳಿ ತಾಲ್ಲೂಕಿನ ಉಚ್ಚಂಗಿ ದುರ್ಗದ ತಲಾ ಒಬ್ಬರು ದಾವಣಗೆರೆ ಆಸ್ಪತ್ರೆಗೆ ಬಂದಿದ್ದು, ಅವರಲ್ಲಿ ಸೋಂಕು ದೃಢಪಟ್ಟಿದೆ.

ಜಿಲ್ಲೆಯಲ್ಲಿ ಈವರೆಗೆ 2384 ಮಂದಿಗೆ ಸೋಂಕು ತಗುಲಿದೆ. ಅದರಲ್ಲಿ ಭಾನುವಾರ ಆಸ್ಪತ್ರೆಯಿಂದ ಬಿಡುಗಡೆಗೊಂಡ 89 ಮಂದಿ ಸೇರಿ 1479 ಜನರು ಗುಣಮುಖರಾಗಿದ್ದಾರೆ. 55 ಮಂದಿ ಮೃತಪಟ್ಟಿದ್ದಾರೆ. 850 ಸಕ್ರಿಯ ಪ್ರಕರಣಗಳಿವೆ. ಅದರಲ್ಲಿ 10 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT