ಸೋಮವಾರ, ಜನವರಿ 20, 2020
24 °C

‘ಹಣ ಉಳಿತಾಯ ಕಷ್ಟಕಾಲಕ್ಕೆ ಸಹಾಯ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚನ್ನಗಿರಿ: ಜೀವನದಲ್ಲಿ ಕಷ್ಟ ಕಾಲ ಬರುವುದು ಸಹಜವಾಗಿದೆ. ಉಳಿತಾಯ ಮಾಡುವ ಹಣ ನಮ್ಮಗಳ ಕಷ್ಟ ಕಾಲಕ್ಕೆ ಸಹಾಯವಾಗುತ್ತದೆ. ಆದ್ದರಿಂದ ಸಣ್ಣ ಉಳಿತಾಯ ಇಲಾಖೆಯಲ್ಲಿ ನಾವು ಗಳಿಸಿದ ಒಂದಿಷ್ಟು ಹಣವನ್ನು ಉಳಿತಾಯ ಮಾಡಬೇಕು ಎಂದು ಶಾಸಕ ವಡ್ನಾಳ್‌ ರಾಜಣ್ಣ ಕರೆ ನೀಡಿದರು.ಪಟ್ಟಣದ ತಾಲ್ಲೂಕು ಕಚೇರಿಯಲ್ಲಿ ಶನಿವಾರ ನಡೆದ ಸಣ್ಣ ಉಳಿತಾಯ ಅಧಿಕೃತ ಪ್ರತಿನಿಧಿಗಳ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.ಇಂದಿನ ದಿನಗಳಲ್ಲಿ ನಮ್ಮ ಜನರು ಹೆಚ್ಚಿನ ಬಡ್ಡಿ ಆಸೆಗೆ ಮರುಳಾಗಿ ಯಾವುದೋ ಗೊತ್ತುಗುರಿ ಇಲ್ಲದ ಸಮಸ್ಥೆಗಳಲ್ಲಿ ಹಣ ತೊಡಗಿಸಿ ಹಣ ಕಳೆದುಕೊಳ್ಳುತ್ತಿರುವ ಬಗ್ಗೆ ನಿದರ್ಶನಗಳಿವೆ.  ಹಣ ವಾಪಾಸ್‌ ಬರುವ ನಂಬಿಕೆ ಇರುವ ಸಂಸ್ಥೆಗಳಲ್ಲಿ ಹಣ ತೊಡಗಿಸಬೇಕು. ಇದರಲ್ಲಿ ಸಣ್ಣ ಉಳಿತಾಯ ಇಲಾಖೆ ಉತ್ತಮ ಸಂಸ್ಥೆಯಾಗಿದೆ. ಒಟ್ಟಾರೆ ಉಳಿತಾಯ ಮಾಡುವ ಗುಣವನ್ನು ಬೆಳೆಸಿಕೊಳ್ಳುವುದು ಉತ್ತಮ ಎಂದರು.ಜಿಲ್ಲಾ ಸಣ್ಣ ಉಳಿತಾಯ ಇಲಾಖೆ ಸಹಾಯಕ ನಿರ್ದೇಶಕ ಬಿ.ಜೆ. ಜಯ್ಯಪ್ಪ, ಕಾಂಗ್ರೆಸ್‌ ಮುಖಂಡ ಕೆ.ಜಿ.ಡಿ. ಬಸವರಾಜಪ್ಪ, ತಾಲ್ಲೂಕು ಸಣ್ಣ ಉಳಿತಾಯ ಇಲಾಖೆ ಅಭಿವೃದ್ಧಿ ಅಧಿಕಾರಿ ಬಿ. ಜಯ್ಯಣ್ಣ ಉಪಸ್ಥಿತರಿದ್ದರು.ಬಿಜೆಪಿಗೆ ಆಯ್ಕೆ

ದಾವಣಗೆರೆ: ಬಿಜೆಪಿ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಪರಿಶಿಷ್ಟ ಜಾತಿ ಮೋರ್ಚಾ ಅಧ್ಯಕ್ಷರನ್ನಾಗಿ ಜಿ.ತಿಪ್ಪೇಸ್ವಾಮಿ ಬಸಾಪುರ ಅವರನ್ನು ನೇಮಕ ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಪ್ರತಿಕ್ರಿಯಿಸಿ (+)