21ರಂದು ‘ಹಫ್ತಾ’ ಚಿತ್ರ ಬಿಡುಗಡೆ

ಭಾನುವಾರ, ಜೂಲೈ 21, 2019
25 °C

21ರಂದು ‘ಹಫ್ತಾ’ ಚಿತ್ರ ಬಿಡುಗಡೆ

Published:
Updated:
Prajavani

ದಾವಣಗೆರೆ: ವಿಭಿನ್ನ ಕಥಾಹಂದರ ಹೊಂದಿರುವ ‘ಹಫ್ತಾ’ ಕನ್ನಡ ಚಲನಚಿತ್ರದಲ್ಲಿ ಮನರಂಜನೆ ಜೊತೆಗೆ ಸಾಮಾಜಿಕ ಸಂದೇಶವೂ ಇದೆ. ರಾಜ್ಯದಾದ್ಯಂತ ಟ್ರೇಲರ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಇದೇ 21ರಂದು ಚಿತ್ರ ಬಿಡುಗಡೆಯಾಗುತ್ತಿದೆ.

ಮಂಗಳೂರು, ಭಟ್ಕಳ, ಮುರ್ಡೇಶ್ವರದ ರಮಣೀಯ ಪ್ರದೇಶಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ರಾಜ್ಯದ 150 ಥಿಯೇಟರ್‌ಗಳಲ್ಲಿ ಚಿತ್ರ ಬಿಡುಗಡೆಯಾಗುತ್ತಿದೆ ಎಂದು ನಾಯಕನಟ ವರ್ಧನ್‌ ತೀರ್ಥಹಳ್ಳಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

40 ಸಿನಿಮಾಗಳಲ್ಲಿ ಅಭಿನಯಿಸಿರುವ ಅನುಭವ ಇದ್ದು, ನಾಯಕನಾಗಿ ಇದು ಮೊದಲ ಸಿನಿಮಾ. ಚಿತ್ರದಲ್ಲಿ ಮೊದಲ ಬಾರಿ ಎರಡು ಶೇಡ್‌ಗಳ ಪಾತ್ರ ಇದೆ. ಮಾಸ್‌ ಹಾಗೂ ಮಂಗಳಮುಖಿ ಪಾತ್ರ ಇದ್ದು, ಮಂಗಳಮುಖಿ ಪಾತ್ರದ ಮೂಲಕ ಸಮಾಜಕ್ಕೆ ಸಂದೇಶವೂ ಇದೆ ಎಂದು ಹೇಳಿದರು.

ಚಿತ್ರದ ಮತ್ತೊಬ್ಬ ನಾಯಕ ರಾಘವನಾಗ್, ‘ಇದು ನನ್ನ 3ನೇ ಸಿನಿಮಾ. ವಿಭಿನ್ನ ಕತೆ ಚಿತ್ರದಲ್ಲಿದೆ. ಇಬ್ಬರು ನಾಯಕಿಯರಿದ್ದು, ಬಿಂಬಶ್ರೀ ನೀನಾಸಂ, ಮಾಡೆಲ್‌ ಸೌಮ್ಯ ತಿಥಿರ ಅಭಿನಯಿಸಿದ್ದಾರೆ. ‘ಸೆಂಟಿಮೆಂಟ್‌ ನಾಟ್‌ ಅಲೋಡ್‌’ ಇದು ಚಿತ್ರದ ಅಡಿಬರಹ’ ಎಂದರು.

ಚಿತ್ರದ ನಿರ್ದೇಶಕ ಪ್ರಕಾಶ್‌ ಹೆಬ್ಬಾಳ, ‘ಚಿತ್ರದಲ್ಲಿ ಹಲವು ಟ್ವಿಸ್ಟ್‌ಗಳಿವೆ. ಹಲವು ನಿರ್ದೇಶಕರ ಬಳಿ ಸಹಾಯಕನಾಗಿ ಕೆಲಸ ಮಾಡಿದ ಅನುಭವ ಇದ್ದು, ಮೊದಲ ಬಾರಿ ಚಿತ್ರಕ್ಕೆ ಆಕ್ಷನ್‌ ಕಟ್‌ ಹೇಳಿದ್ದೇನೆ. ದಾವಣಗೆರೆಯ ಬಸವರಾಜ್‌ ಅವರು ಸಂಭಾಷಣೆ ಬರೆದಿದ್ದಾರೆ. ಗೌತಮ್‌ ಶ್ರೀವತ್ಸ ಸಂಗೀತ ನಿರ್ದೇಶನ ಮಾಡಿದ್ದಾರೆ. ಸಿನಿಟೆಕ್‌ ಸೂರಿ ಛಾಯಾಗ್ರಹಣ, ವೆಂಕಿ ಸಂಕಲನ ಮಾಡಿದ್ದಾರೆ. ಮಾಸ್‌ ಚಿತ್ರವಾದರೂ ಹಿರೋಯಿಸಂ ಇಲ್ಲ. ಉತ್ತಮ ಸಂದೇಶ ಚಿತ್ರದಲ್ಲಿದೆ’ ಎಂದು ವಿವರಿಸಿದರು.

ಸುದ್ದಿಗೋಷ್ಠಿಯಲ್ಲಿ ಸಂಭಾಷಣೆಕಾರ ಬಸವರಾಜ್‌ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !