ಶನಿವಾರ, ಆಗಸ್ಟ್ 13, 2022
22 °C
27 ಹಿರಿಯರು, 12 ಮಕ್ಕಳು ಸೇರಿ 139 ಮಂದಿ ಗುಣಮುಖರಾಗಿ ಬಿಡುಗಡೆ

222 ಮಂದಿಗೆ ಕೊರೊನಾ: ಮೂವರ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಜಿಲ್ಲೆಯಲ್ಲಿ 222 ಮಂದಿಗೆ ಕೊರೊನಾ ಇರುವುದು ಗುರುವಾರ ದೃಢಪಟ್ಟಿದೆ. ಮೂವರು ಮೃತಪಟ್ಟಿದ್ದಾರೆ.

ಕೆಟಿಜೆ ನಗರದ 45 ವರ್ಷದ ಪುರುಷ ತೀವ್ರ ಉಸಿರಾಟದ ಸಮಸ್ಯೆಯಿಂದ ಮೃತಪಟ್ಟರು. ಅಣಜಿಯ 75 ವರ್ಷದ ವೃದ್ಧ ಮತ್ತು ಹರಿಹರ ಕಡ್ಲೆಗೊಂದಿಯ 70 ವರ್ಷದ ವೃದ್ಧೆ ಮಧುಮೇಹ ಮತ್ತು ಉಸಿರಾಟದ ಸಮಸ್ಯೆಯಿಂದ ನಿಧನರಾದರು.

6 ಬಾಲಕರು, 8 ಬಾಲಕಿಯರು, 21 ವೃದ್ಧರು, 12 ವೃದ್ಧೆಯರಿಗೆ ಕೊರೊನಾ ಬಂದಿದೆ. 18ರಿಂದ 59 ವರ್ಷದೊಳಗಿನ 114 ಪುರುಷರು, 61 ಮಹಿಳೆಯರು ಸೋಂಕಿಗೊಳಗಾಗಿದ್ದಾರೆ.

ದಾವಣಗೆರೆ ತಾಲ್ಲೂಕಿನಲ್ಲಿ 118 ಮಂದಿಗೆ ಸೋಂಕು ಬಂದಿದೆ. ಕೆಂಚನಹಳ್ಳಿಯ ಐವರು, ಎಲೆಬೇತೂರಿನ ನಾಲ್ವರು, ಹೊನ್ನೂರು, ಬಾಡಾ, ಅಣಜಿ, ಆನಗೋಡು, ಹಳೇಬಾತಿ, ಮಲ್ಲಕೆರೆ, ಕಲಪನಹಳ್ಳಿ, ಶಿರಮಗೊಂಡನಹಳ್ಳಿ, ಯರಗುಂಟೆಯ ತಲಾ ಒಬ್ಬರು ಸೇರಿ ಒಟ್ಟು 18 ಮಂದಿ ತಾಲ್ಲೂಕಿನ ಗ್ರಾಮೀಣ ಪ್ರದೇಶದವರು. ಉಳಿದ ನೂರು ಮಂದಿ ಪಾಲಿಕೆ ವ್ಯಾಪ್ತಿಯವರಾಗಿದ್ದಾರೆ.

ಇನ್‌ಸ್ಟಿಟ್ಯೂಷನಲ್‌ ಕ್ವಾರಂಟೈನ್‌ನಲ್ಲಿದ್ದ 6 ಮಂದಿಗೆ ಕೊರೊನಾ ಬಂದಿದೆ. ಮಲ್ಲಾಪುರ ಪ್ರಾಥಮಿಕ ಆರೋಗ್ಯ ಕೇಂದ್ರ, ನಿಟುವಳ್ಳಿ ನಗರ ಆರೋಗ್ಯ ಕೇಂದ್ರ, ಎಪಿಎಂಸಿ ಕ್ವಾರ್ಟರ್ಸ್‌ನ ಸಿಬ್ಬಂದಿಗೆ ಸೋಂಕು ತಗುಲಿದೆ. ನಿಟುವಳ್ಳಿ, ವಿನೋಬನಗರ, ಸಿದ್ದವೀರಪ್ಪ ಬಡಾವಣೆ, ಜಯನಗರ, ಸರಸ್ವತಿನಗರ, ಆಂಜನೇಯ ಬಡಾವಣೆ, ಎಂಸಿಸಿ ‘ಬಿ’ ಬ್ಲಾಕ್‌ ಮುಂತಾದ ಕಡೆಗಳಲ್ಲಿ ಐದಕ್ಕಿಂತ ಅಧಿಕ ಪ್ರಕರಣಗಳು ಕಂಡು ಬಂದಿವೆ.

ಹರಿಹರ ತಾಲ್ಲೂಕಿನಲ್ಲಿ 38, ಚನ್ನಗಿರಿ ತಾಲ್ಲೂಕಿನಲ್ಲಿ 29, ಹೊನ್ನಾಳಿ–ನ್ಯಾಮತಿ ತಾಲ್ಲೂಕಿನಲ್ಲಿ 22, ಜಗಳೂರು ತಾಲ್ಲೂಕಿನಲ್ಲಿ 10 ಮಂದಿಗೆ ಕೊರೊನಾ ಬಂದಿದೆ. ದಾವಣಗೆರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶಿವಮೊಗ್ಗದ ಮೂವರು, ತುರುವನೂರು, ಕೂಡ್ಲಿಗಿ, ರಾಣೆಬೆನ್ನೂರು, ಬಳ್ಳಾರಿ, ರಟ್ಟಿಹಳಳಿ, ಹೊಸದುರ್ಗ, ಚಿತ್ರದುರ್ಗದ ತಲಾ ಒಬ್ಬರಲ್ಲಿ ಕೊರೊನಾ ಕಾಣಿಸಿಕೊಂಡಿದೆ.

14 ವೃದ್ಧರು, 13 ವೃದ್ಧೆಯರು, 6 ಬಾಲಕರು, 6 ಬಾಲಕಿಯರು ಸೇರಿ 139 ಮಂದಿ ಗುಣಮುಖರಾಗಿ ಗುರುವಾರ ಬಿಡುಗಡೆಗೊಂಡಿದ್ದಾರೆ.

ಜಿಲ್ಲೆಯಲ್ಲಿ ಈವರೆಗೆ 10,319 ಮಂದಿಗೆ ಕೊರೊನಾ ಬಂದಿದೆ.  7623 ಮಂದಿ ಗುಣಮುಖರಾಗಿದ್ದಾರೆ. 199 ಮಂದಿ ಮೃತಪಟ್ಟಿದ್ದಾರೆ. 2497 ಸಕ್ರಿಯ ಪ್ರಕರಣಗಳಿವೆ. ಏಳು ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.