ಬುಧವಾರ, ಡಿಸೆಂಬರ್ 2, 2020
17 °C
ದಾವಣಗೆರೆ ತಾಲ್ಲೂಕಿನಲ್ಲಿ 6 ಸೆಂಟಿಮೀಟರ್ ಮಳೆ

ಮಳೆಗೆ ₹23.55 ಲಕ್ಷ ಹಾನಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ನಗರ ಸೇರಿ ಜಿಲ್ಲೆಯಲ್ಲಿ ಮಂಗಳವಾರ ರಾತ್ರಿ ಭಾರಿ ಮಳೆಯಾಗಿದ್ದು, ಬುಧವಾರ ಬೆಳಿಗ್ಗೆ ಹಾಗೂ ಮಧ್ಯಾಹ್ನ ಮಳೆ ಸುರಿಯಿತು. ಕೆಲವು ಸಮಯ ಬಿಟ್ಟರೆ ಮುಂಜಾನೆಯಿಂದ ರಾತ್ರಿಯವರೆಗೂ ಮೋಡ ಕವಿದ ವಾತಾವರಣವಿತ್ತು.

ಜಿಲ್ಲೆಯಲ್ಲಿ ಮಂಗಳವಾರ 3.6 ಸೆಂಟಿ ಮೀಟರ್ ಸರಾಸರಿ ಮಳೆಯಾಗಿದ್ದು, ಮನೆ, ಬೆಳೆ ಸೇರಿ ಒಟ್ಟು ₹23.55 ಲಕ್ಷ ನಷ್ಟವಾಗಿದೆ. ದಾವಣಗೆರೆ ತಾಲ್ಲೂಕಿನಲ್ಲಿ ಅತಿ ಹೆಚ್ಚು ಮಳೆಯಾಗಿದೆ.

ದಾವಣಗೆರೆ ನಗರದ ಮಟ್ಟಿಕಲ್ ಸ್ಲಂನಲ್ಲಿ 16 ಮನೆಗಳಿಗೆ ಚರಂಡಿ ನೀರು ನುಗ್ಗಿದ್ದು, ನೀರನ್ನು ಹೊರಹಾಕಲು ಮಹಿಳೆಯರು ಹರಸಾಹಸ ಪಡಬೇಕಾಯಿತು. ಕೆ.ಆರ್. ರಸ್ತೆಯ ಮುದ್ದೇಗೌಡ ಸ್ಕೂಲ್‌ ಬಳಿ ಬುಧವಾರ ಸುರಿದ ಮಳೆಯಿಂದ ಮರದ ದೊಡ್ಡ ರೆಂಬೆಯೊಂದು ಮುರಿದು ಬಿದ್ದಿದ್ದರಿಂದ ವಾಹನ ಸವಾರರು ತೊಂದರೆ ಅನುಭವಿಸುವಂತಾಯಿತು. 

ದಾವಣಗೆರೆ ತಾಲೂಕು ಮಾಗಾನಹಳ್ಳಿ, ಅರಸಾಪುರ, ಕಡ್ಲೇಬಾಳು, ದೊಡ್ಡ ಓಬಜ್ಜಿಹಳ್ಳಿ, ಕೋಡಿ ಕ್ಯಾಂಪ್, ಅಮೃತನಗರ, ಬದಿಯನಾಯ್ಕನ ತಾಂಡಾ, ಹಳೇ ಕಡ್ಲೇಬಾಳು ಗ್ರಾಮಗಳಲ್ಲಿ ನೂರಾರು ಎಕರೆ ಭತ್ತದ ಬೆಳೆಯು ನೆಲ ಕಚ್ಚಿದೆ. ಅಣಬೇರು, ಎಲೆಬೇತೂರು ಗ್ರಾಮಗಳಲ್ಲಿ ಮನೆಗಳಿಗೆ ನೀರು ನುಗ್ಗಿದ್ದು, ಕುಟುಂಬದವರು ಮನೆಯ ಹೊರಗಡೆ ಕಾಲ
ಕಳೆಯಬೇಕಾಯಿತು.

ದಾವಣಗೆರೆ ತಾಲ್ಲೂಕಿನ ಲೋಕಿಕೆರೆಯಲ್ಲಿ 18, ಅಣಜಿಯಲ್ಲಿ 1, ಕಸಬಾ ಹೋಬಳಿಯಲ್ಲಿ 2, ಆನಗೋಡಿನಲ್ಲಿ 8, ಮಾಯಕೊಂಡದಲ್ಲಿ 7 ಮನೆಗಳಿಗೆ ಹಾನಿಯಾಗಿದ್ದು, 36 ಮನೆಗಳಿಗೆ ಭಾಗಶಃ ಹಾನಿಯಾಗಿದ್ದು, ₹8.75 ಲಕ್ಷ, 30 ಎಕರೆ ಭತ್ತ ಮತ್ತು ಮೆಕ್ಕೆಜೋಳ ಹಾನಿಯಾಗಿದ್ದು, ₹1.30 ಲಕ್ಷ ಸೇರಿ ಒಟ್ಟು ₹10.05 ಲಕ್ಷ ನಷ್ಟವಾಗಿದೆ ಎಂದು ಅಂದಾಜು ಮಾಡಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.