ಶನಿವಾರ, ನವೆಂಬರ್ 16, 2019
21 °C

266 ನಾಮಪತ್ರ ಕ್ರಮಬದ್ಧ: 65 ತಿರಸ್ಕೃತ

Published:
Updated:

ದಾವಣಗೆರೆ: ಪಾಲಿಕೆ ಚುನಾವಣೆಗೆ ಸಂಬಂಧಿಸಿದಂತೆ ಸಲ್ಲಿಸಿರುವ ನಾಮಪತ್ರಗಳಲ್ಲಿ 65 ತಿರಸ್ಕೃತಗೊಂಡಿವೆ. 266 ನಾಮಪತ್ರಗಳು ಕ್ರಮಬದ್ಧವಾಗಿವೆ.

ನ.12ರಂದು ಮತದಾನ ನಡೆಯಲಿದ್ದು, ಶನಿವಾರ ನಾಮಪತ್ರ ಪರಿಶೀಲನೆ ನಡೆಯಿತು. 375 ನಾಮಪತ್ರಗಳು ಸಲ್ಲಿಕೆಯಾಗಿದ್ದವು. ಒಬ್ಬರೇ ಒಂದಕ್ಕಿಂತ ಹೆಚ್ಚು ಕ್ರಮಬದ್ಧ ನಾಮಪತ್ರಗಳನ್ನು ಸಲ್ಲಿಸಿದ್ದಲ್ಲಿ ಅದನ್ನು ಒಂದು ಎಂದೇ ಪರಿಗಣಿಸಲಾಗಿದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಜಿ. ನಜ್ಮಾ ತಿಳಿಸಿದ್ದಾರೆ.

ಸದ್ಯಕ್ಕೆ 30 ಮತ್ತು 45ನೇ ವಾರ್ಡ್‌ಗಳಲ್ಲಿ ಅತಿ ಹೆಚ್ಚು ಅಂದರೆ ತಲಾ 11 ಮಂದಿ ಕಣದಲ್ಲಿದ್ದರೆ, 1, 23, 36 ಹಾಗೂ 40ನೇ ವಾರ್ಡ್‌ಗಳಲ್ಲಿ ಅತಿ ಕಡಿಮೆ ಅಂದರೆ ತಲಾ ಇಬ್ಬರು ಅಭ್ಯರ್ಥಿಗಳಷ್ಟೇ ಇದ್ದಾರೆ.

ಉಮೇದುವಾರಿಕೆ ಹಿಂತೆಗೆದುಕೊಳ್ಳಲು ನ.4 ಕೊನೇ ದಿನಾಂಕವಾಗಿದೆ.

ಪ್ರತಿಕ್ರಿಯಿಸಿ (+)