ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

288 ಮಂದಿಗೆ ಕೊರೊನಾ: 152 ಮಂದಿ ಗುಣಮುಖ

Last Updated 29 ಸೆಪ್ಟೆಂಬರ್ 2020, 16:14 IST
ಅಕ್ಷರ ಗಾತ್ರ

ದಾವಣಗೆರೆ: 90 ವರ್ಷದ ವೃದ್ಧ, ಒಂದು ವರ್ಷದ ಗಂಡುಮಗು ಸೇರಿ 288 ಮಂದಿಗೆ ಕೊರೊನಾ ಇರುವುದು ಮಂಗಳವಾರ ದೃಢಪಟ್ಟಿದೆ. ಒಂದು ವರ್ಷದ ಎರಡು ಹೆಣ್ಣು ಶಿಶುಗಳು ಸೇರಿ 152 ಮಂದಿ ಗುಣಮುಖರಾಗಿದ್ದಾರೆ.

38 ವೃದ್ಧರು, 16 ವೃದ್ಧೆಯರು, 11 ಬಾಲಕರು, 8 ಬಾಲಕಿಯರಿಗೂ ಕೊರೊನಾ ಬಂದಿದೆ.

ದಾವಣಗೆರೆ ತಾಲ್ಲೂಕಿನಲ್ಲಿ 123 ಮಂದಿಗೆ ಸೋಂಕು ತಗುಲಿದೆ. ನೇರ್ಲಿಗೆ, ಹುಚ್ಚವ್ವನಹಳ್ಳಿ, ಶಿರಮಗೊಂಡನಹಳ್ಳಿ, ಮಳಲ್ಕೆರೆ, ತೋಳಹುಣಸೆ, ಎಲೆಬೇತೂರು, ಆಲೂರು, ಹುಲಿಕಟ್ಟೆ, ನಾಗರಕಟ್ಟೆ, ಬಿಸಲೇರಿ, ದೊಡ್ಡಬಾತಿ, ಕೆಂಚಮ್ಮನಹಳ್ಳಿ, ಬಸವನಕೋಟೆ, ನಲ್ಕುಂದ ಹೀಗೆ 18 ಮಂದಿ ಗ್ರಾಮೀಣ ಪ್ರದೇಶದವರು. 105 ಮಂದಿ ಪಾಲಿಕೆ ವ್ಯಾಪ್ತಿಯವರು.

ಜೆಜೆಎಂಎಂಸಿ ಪ್ರಿನ್ಸಿ‍ಪಾಲ್‌, ಜಿಲ್ಲಾಧಿಕಾರಿ ಕಚೇರಿ ಸಿಬ್ಬಂದಿ, ಸಿ.ಜಿ. ಆಸ್ಪತ್ರೆಯ ಇಬ್ಬರು ಸಿಬ್ಬಂದಿ, ಆನಗೋಡು ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿಗೂ ಸೋಂಕು ತಗುಲಿದೆ.

ಆಂಜನೇಯ ಬಡಾವಣೆ, ತರಳಬಾಳು ಬಡಾವಣೆ, ವಿದ್ಯಾನಗರ, ದೇವರಾಜ ಅರಸು ಬಡಾವಣೆ ಎಂಸಿಸಿ ‘ಬಿ’ ಬ್ಲಾಕ್‌, ಪಿ.ಜೆ. ಬಡಾವಣೆ, ವಿನೋಬನಗರ, ಎಸ್‌ಎಸ್‌ ಬಡಾವಣೆ, ಶಿವಕುಮಾರಸ್ವಾಮಿ ಬಡಾವಣೆ, ಜಯನಗರ, ಆನೆಕೊಂಡ ಮುಂತಾದ ಕಡೆಗಳಲ್ಲಿ ಐದಕ್ಕೂ ಅಧಿಕ ಪ್ರಕರಣಗಳು ಕಂಡು ಬಂದಿವೆ.

ಹೊನ್ನಾಳಿ–ನ್ಯಾಮತಿ ತಾಲ್ಲೂಕಿನ 58, ಹರಿಹರ ತಾಲ್ಲೂಕಿನ 52, ಚನ್ನಗಿರಿ ತಾಲ್ಲೂಕಿನ 34, ಜಗಳೂರು ತಾಲ್ಲೂಕಿನ 21 ಮಂದಿಗೆ ಕೊರೊನಾ ಬಂದಿದೆ.

ಮಂಗಳವಾರ ಗುಣಮುಖರಾಗಿ ಬಿಡುಗಡೆಗೊಂಡವರಲ್ಲಿ 23 ವೃದ್ಧರು, 16 ವೃದ್ಧೆಯರು, ಮೂವರು ಬಾಲಕರು, ಐವರು ಬಾಲಕಿಯರು ಇದ್ದಾರೆ.

ಜಿಲ್ಲೆಯಲ್ಲಿ ಈವರೆಗೆ 15,920 ಮಂದಿಗೆ ಸೋಂಕು ತಗುಲಿದೆ. 12,736 ಮಂದಿ ಗುಣಮುಖರಾಗಿದ್ದಾರೆ. 241 ಮಂದಿ ಮೃತಪಟ್ಟಿದ್ದಾರೆ. 2,943 ಸಕ್ರಿಯ ಪ್ರಕರಣಗಳಿವೆ.

ರೇಣುಕಾಚಾರ್ಯಗೆ ಸೋಂಕು

ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ, ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ಅವರಿಗೆ ಕೊರೊನಾ ಸೋಂಕು ಬಂದಿದೆ.

‘ಬೆಳಿಗ್ಗೆ ಆರೋಗ್ಯದಲ್ಲಿ ಸ್ವಲ್ಪ ವ್ಯತ್ಯಾಸ ಕಾಣಿಸಿದ ಕಾರಣ ಬೆಂಗಳೂರಿನ ಅಪೋಲೋ ಆಸ್ಪತ್ರೆಯಲ್ಲಿ ಪರೀಕ್ಷೆ ಮಾಡಿದಾಗ ಕೊರೊನಾ ಇರುವುದು ದೃಢ‍‍ಟ್ಟಿದೆ. ಕಳೆದ ನಾಲ್ಕೈದು ದಿನಗಳಿಂದ ನನ್ನ ಸಂಪರ್ಕದಲ್ಲಿದ್ದ ಎಲ್ಲರು ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳಬೇಕು. ನಾನು ಆರೋಗ್ಯವಾಗಿದ್ದೆನೆ’ ಎಂದು ಅವರು ಟ್ವೀಟ್‌ ಮಾಡಿದ್ದಾರೆ.

ದೇಶದಲ್ಲಿ ಕೊರೊನಾ ಕಾಣಿಸಿಕೊಂಡು ಲಾಕ್‌ಡೌನ್‌ ಆಗಿದ್ದಲ್ಲಿಂದ ಜನರ ಸಂಪರ್ಕದಲ್ಲಿಯೇ ಇದ್ದ ರೇಣುಕಾಚಾರ್ಯ ಹೊನ್ನಾಳಿ– ನ್ಯಾಮತಿ ತಾಲ್ಲೂಕುಗಳ 48 ಗ್ರಾಮ ಪಂಚಾಯಿತಿಗಳಿಗೂ ಭೇಟಿ ನೀಡಿದ್ದರು. ಮಾಸ್ಕ್, ಸ್ಯಾನಿಟೈಸರ್‌ ವಿತರಣೆ ಮಾಡಿದ್ದರು. ಕೋವಿಡ್‌ ಕೇರ್ ಸೆಂಟರ್‌ಗೂ ಭೇಟಿ ನೀಡಿದ್ದಲ್ಲದೇ ಕೊರೊನಾ ಸೋಂಕಿತರಿಗೆ ಹೋಳಿಗೆ ಊಟ ಬಡಿಸಿ ಸುದ್ದಿಯಾಗಿದ್ದರು. 9 ಬಾರಿ ಕೊರೊನಾ ಪರೀಕ್ಷೆ ಮಾಡಿಸಿದ್ದರು. ಈಗ 10ನೇ ಬಾರಿ ಮಾಡಿರುವುದು ಮಾತ್ರ ಪಾಸಿಟಿವ್‌ ಎಂದು ಫಲಿತಾಂಶ ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT