ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ: 35 ಹಿರಿಯರು ಸೇರಿ 165 ಮಂದಿಗೆ ಕೊರೊನಾ

29 ಹಿರಿಯರು ಸೇರಿ ಒಂದೇ ದಿನ 212 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ
Last Updated 17 ಆಗಸ್ಟ್ 2020, 17:44 IST
ಅಕ್ಷರ ಗಾತ್ರ

ದಾವಣಗೆರೆ: ಜಿಲ್ಲೆಯಲ್ಲಿ 20 ವೃದ್ಧರು, 15 ವೃದ್ಧೆಯರು ಸೇರಿ 165 ಮಂದಿಗೆ ಕೊರೊನಾ ಇರುವುದು ಸೋಮವಾರ ದೃಢಪಟ್ಟಿದೆ. 212 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.

ಎಂಟು ಬಾಲಕರು, ಐವರು ಬಾಲಕಿಯರಿಗೂ ಕೊರೊನಾ ಬಂದಿದೆ. 18ರಿಂದ 59 ವರ್ಷದ ವರೆಗಿನ 60 ಪುರುಷರು, 53 ಮಹಿಳೆಯರಿಗೆ ಸೊಂಕು ತಗುಲಿದೆ.

ಎಂದಿನಂತೆ ದಾವಣಗೆರೆ ತಾಲ್ಲೂಕಿನಲ್ಲಿಯೇ ಹೆಚ್ಚು ಪ್ರಕರಣಗಳು ದಾಖಲಾಗಿವೆ. ದೊಡ್ಡಬಾತಿ, ಬಸಾಪುರ, ಕನಗೊಂಡನಹಳ್ಳಿಯ ಒಟ್ಟು ನಾಲ್ವರು ತಾಲ್ಲೂಕಿನ ಗ್ರಾಮೀಣ ಪ್ರದೇಶದವರಾಗಿದ್ದಾರೆ. ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 73 ಮಂದಿಗೆ ಕೊರೊನಾ ಇರುವುದು ಖಚಿತವಾಗಿದೆ. ಇನ್‌ಸ್ಟಿಟ್ಯೂಷನಲ್‌ ಕ್ವಾರಂಟೈನ್‌ನಲ್ಲಿದ್ದ 11 ಮಂದಿಗೆ ಸೋಂಕು ತಗುಲಿದೆ. ಪಿ.ಜೆ ಬಡಾವಣೆಯೊಂದರಲ್ಲಿ 8 ಮಂದಿಗೆ ಕೊರೊನಾ ಬಂದಿದ್ದರೆ, ವಿನೋಬನಗರದಲ್ಲಿ ಐದಕ್ಕಿಂತ ಅಧಿಕ ಮಂದಿಯಲ್ಲಿ ಪತ್ತೆಯಾಗಿದೆ.

ಹೊನ್ನಾಳಿ– ನ್ಯಾಮತಿ ತಾಲ್ಲೂಕು ವ್ಯಾಪ್ತಿಯಲ್ಲಿ 30, ಹರಿಹರ ತಾಲ್ಲೂಕಿನಲ್ಲಿ 27, ಚನ್ನಗಿರಿ ತಾಲ್ಲೂಕಿನಲ್ಲಿ 18, ಜಗಳೂರು ತಾಲ್ಲೂಕಿನಲ್ಲಿ 8 ಮಂದಿಗೆ ಕೊರೊನಾ ವೈರಸ್‌ ತಗುಲಿರುವುದು ದೃಢಪಟ್ಟಿದೆ. ದಾವಣಗೆರೆಯ ಆಸ್ಪತ್ರೆಗಳಲ್ಲಿ ವಿವಿಧ ರೋಗಗಳಿಗೆ ಚಿಕಿತ್ಸೆ ಪಡೆಯುತ್ತಿದ್ದ ಹಾವೇರಿ ಜಿಲ್ಲೆಯ ರಾಣೆಬನ್ನೂರಿನ ಐವರು, ಬಳ್ಳಾರಿ ಜಿಲ್ಲೆಯ ಕೊಟ್ಟೂರಿನ ಒಬ್ಬರು ಮತ್ತು ಚಿತ್ರದುರ್ಗದ ಒಬ್ಬರಿಗೆ ಕೊರೊನಾ ಕಂಡು ಬಂದಿದೆ.

29 ಹಿರಿಯರು ಬಿಡುಗಡೆ: ಒಂದೇ ದಿನ 212 ಮಂದಿ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ. ಅದರಲ್ಲಿ 90 ವರ್ಷದ ಅಜ್ಜ ಸೇರಿ 19 ವೃದ್ಧರು, 88 ವರ್ಷದ ಇಬ್ಬರು ಸೇರಿ 10 ವೃದ್ಧೆಯರು ಸೇರಿದ್ದಾರೆ. ಒಂದು ವರ್ಷದ ಮಗು ಸೇರಿ 6 ಬಾಲಕಿಯರು, ಐವರು ಬಾಲಕರು ಬಿಡುಗಡೆಗೊಂಡಿದ್ದಾರೆ.

ಜಿಲ್ಲೆಯಲ್ಲಿ ಈವರೆಗೆ 5423 ಮಂದಿಗೆ ಕೊರೊನಾ ಬಂದಿದೆ. 3742 ಮಂದಿ ಬಿಡುಗಡೆಗೊಂಡಿದ್ದಾರೆ. 129 ಮಂದಿ ಮೃತಪಟ್ಟಿದ್ದಾರೆ. 1582 ಸಕ್ರಿಯ ಪ್ರಕರಣಗಳಿವೆ. ಅದರಲ್ಲಿ 9 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT