ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣರೆಗೆಯಲ್ಲಿ 45 ಮಂದಿಗೆ ಕೊರೊನಾ ಸೋಂಕು: ಒಬ್ಬರ ಸಾವು

ಮೃತಪಟ್ಟವರ ಸಂಖ್ಯೆ 21ಕ್ಕೆ ಏರಿಕೆ * ಸೋಮವಾರ 21 ಮಂದಿ ಗುಣಮುಖರಾಗಿ ಬಿಡುಗಡೆ
Last Updated 13 ಜುಲೈ 2020, 17:07 IST
ಅಕ್ಷರ ಗಾತ್ರ

ದಾವಣಗೆರೆ: ಹೊನ್ನಾಳಿಯ ಕೆಎಸ್‌ಆರ್‌ಟಿಸಿಯ ಐವರು ಸಿಬ್ಬಂದಿ, ದಾವಣಗೆರೆಯ ಒಬ್ಬ ಪೊಲೀಸ್‌ ಸೇರಿ 45 ಮಂದಿಗೆ ಸೋಂಕು ಇರುವುದು ಸೋಮವಾರ ದೃಢಪಟ್ಟಿದೆ. ಜಿಲ್ಲೆಯಲ್ಲಿ ಒಬ್ಬರು ಮೃತಪಟ್ಟಿದ್ದಾರೆ. ಅಲ್ಲಿಗೆ ಒಟ್ಟು 21 ಮಂದಿ ಕೊರೊನಾ ಸೋಂಕಿನಿಂದ ಸಾವು ಕಂಡಿದ್ದಾರೆ.

ಉಸಿರಾಟದ ತೊಂದರೆ, ಜ್ವರ, ಕಫ, ಅಧಿಕ ರಕ್ತದ ಒತ್ತಡ ಇದ್ದ ಬೇತೂರು ರಸ್ತೆಯ 39 ವರ್ಷದ ಪುರುಷ ಜುಲೈ 6ರಂದು ಆಸ್ಪತ್ರೆಗೆ ದಾಖಲಾಗಿದ್ದು, ಜುಲೈ 10ರಂದು ಅವರಿಗೆ ಕೊರೊನಾ ಇರುವುದು ದೃಢಪಟ್ಟಿತ್ತು. ಜುಲೈ 12ರಂದು ಮೃತಪಟ್ಟಿದ್ದಾರೆ.

ಹೊನ್ನಾಳಿ ಕೆಎಸ್‌ಆರ್‌ಟಿಸಿಯ 36, 36, 48, 36, 50 ವರ್ಷದ ಐವರು ಸಿಬ್ಬಂದಿಗೆ ಸೋಂಕು ಬಂದಿದೆ. ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ. ದಾವಣಗೆರೆ ಬಡಾವಣೆ ಪೊಲೀಸ್‌ ಠಾಣೆಯ 46 ವರ್ಷದ ಸಿಬ್ಬಂದಿಗೆ ಕೊರೊನಾ ಬಂದಿದ್ದು, ಸಂಪರ್ಕ ‍ಪತ್ತೆ ಹಚ್ಚಲಾಗುತ್ತಿದೆ.

ಹರಿಹರ ತಾಲ್ಲೂಕಿನ 8 ಮಂದಿಗೆ ಕೊರೊನಾ: ಕೊಂಡಜ್ಜಿ ಕ್ಯಾಂಪಿನ 24 ವರ್ಷ ಯುವತಿ, ಟಿಪ್ಪುನಗರದ 32 ವರ್ಷದ ಮಹಿಳೆ, ಇಂದಿರಾನಗರದ 55 ವರ್ಷದ ಪುರುಷ, ಹಳ್ಳದಕೆರೆಯ 12 ವರ್ಷದ ಬಾಲಕ, 32 ವರ್ಷದ ಮಹಿಳೆ, ಸರ್ಕಾರಿ ಆಸ್ಪತ್ರೆಯ ಎದುರಿನ 40 ವರ್ಷದ ಪುರುಷ, ಕುಂಬಾರ ಓಣಿಯ 10 ವರ್ಷದ ಬಾಲಕಿ, ಅಮರಾವತಿ ಬಡಾವಣೆಯ 26 ವರ್ಷದ ಪುರುಷರಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ.

ಜಗಳೂರು ತಾಲ್ಲೂಕಿನ 20 ಮಂದಿಗೆ ಸೋಂಕು: ಜಗಳೂರು ದುರ್ಗಮ್ಮ ದೇವಸ್ಥಾನ ಬಳಿಯ 24, 18 ವರ್ಷದ ಯುವಕರು, ಮೂಡಲಮಾಚಿಕೆರೆಯ 29 ವರ್ಷದ ಮಹಿಳೆ, 32 ವರ್ಷದ ಪುರುಷ, ಮೆದಿಕೆರೇನಹಳ್ಳಿಯ 20 ವರ್ಷದ ಮಹಿಳೆ, ಆಂಜನೇಯ ದೇವಸ್ಥಾನ ಬಳಿಯ 42 ವರ್ಷದ ಪುರುಷ, ಸರ್ಕಾರಿ ಶಾಲೆ ಬಳಿಯ 39 ಮತ್ತು 23 ವರ್ಷದ ಪುರುಷರು, ಹಳೇ ಎ.ಕೆ. ಕಾಲೊನಿಯ ತಲಾ 65 ವರ್ಷದ ಇಬ್ಬರು ವೃದ್ದೆಯರು, 23, 18, 24 ವರ್ಷದ ಯುವತಿಯರು, ತಲಾ 16 ವರ್ಷದ ಮೂವರು ಬಾಲಕಿಯರು, 10 ವರ್ಷದ ಬಾಲಕ, 35 ವರ್ಷದ ಮಹಿಳೆ, ಪೋಸ್ಟ್‌ ಆಫೀಸ್‌ ಬಳಿಯ 35 ವರ್ಷದ ಪುರುಷನಿಗೆ ಕೊರೊನಾ ಸೋಂಕು ಬಂದಿದೆ. ಜಗಳೂರಿನ ದಾವಣಗೆರೆಯ 47 ವರ್ಷದ ಪುರುಷನಿಗೆ ಶೀತಜ್ವರ ಎಂದು ಗುರುತಿಸಲಾಗಿದೆ.

ಜಗಳೂರು ರಸ್ತೆ ಮಾಚಿಕೆರೆಯ ಒಬ್ಬರಿಗೆ ಸೋಂಕಿದೆ ಎಂದು ಅಲ್ಲಿನ ಜನರು ಆತಂಕಗೊಂಡಿದ್ದರು. ಅದು ಮೂಡಲ ಮಾಚಿಕೆರೆಯವರು ಎಂದು ತಿಳಿದ ಮೇಲೆ ನಿರಾಳರಾಗಿದ್ದಾರೆ.

ಚನ್ನಗಿರಿ ತಾಲ್ಲೂಕಿನ ಪಾಂಡೋಮಟ್ಟಿಯ 56 ವರ್ಷದ ಪುರುಷ, 42 ವರ್ಷದ ಮಹಿಳೆಗೆ ಶೀತಜ್ವರ ಬಂದಿದೆ.

ದಾವಣಗೆರೆ ಸಯ್ಯದ್‌ ಪೀರ್ ಬಡಾವಣೆಯ 42 ವರ್ಷದ ಪುರುಷ, ದಾವಣಗೆರೆಯ ಹುಬ್ಬಳ್ಳಿ ಚೌಡಪ್ಪ ಗಲ್ಲಿಯ 42 ವರ್ಷದ ವಕ್ತಿ ಬೆಂಗಳೂರಿನಿಂದ ಹಿಂತಿರುಗಿದ್ದಾರೆ. ಅವರಿಗೆ ಸೋಂಕು ಕಾಣಿಸಿಕೊಂಡಿದ್ದಾರೆ.

ಬಳ್ಳಾರಿ ಜಿಲ್ಲೆಯ ಸಂಡೂರಿನಿಂದ ಬಂದು ಇಲ್ಲಿನ ಆಸ್ಪತ್ರೆಗೆ ದಾಖಲಾಗಿರುವ 68 ವರ್ಷದ ವೃದ್ಧನಿಗೆ ಶೀತಜ್ವರ ಎಂದು ಗುರುತಿಸಲಾಗಿದೆ.

ಎಂಸಿಸಿ ಎ ಬ್ಲಾಕ್‌ನ 55 ವರ್ಷದ ಮಹಿಳೆ, 32 ವರ್ಷದ ಪುರುಷನಿಗೆ ಶೀತಜ್ವರ ಬಂದಿದೆ. ನರಸರಾಜಪೇಟೆ 26 ವರ್ಷದ ಯುವಕ, ದಾವಣಗೆರೆಯ 51 ವರ್ಷದ ಮಹಿಳೆ, 12 ವರ್ಷದ ಬಾಲಕಿಗೂ ಸೋಂಕು ತಗುಲಿದೆ. ಪಿ.ಜೆ. ಬಡಾವಣೆಯ 58 ವರ್ಷದ ವ್ಯಕ್ತಿಗೆ ತೀವ್ರ ಉಸಿರಾಟದ ಸಮಸ್ಯೆ (ಸಾರಿ) ಎಂದು ಗುರುತಿಸಲಾಗಿದೆ.

ಜಿಲ್ಲೆಯಲ್ಲಿ ಈವರೆಗೆ 581 ಮಂದಿಗೆ ಕೊರೊನಾ ಸೋಂಕು ಬಂದಿದೆ. ಸೋಮವಾರ 21 ಮಂದಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಅವರೂ ಸೇರಿ ಒಟ್ಟು 431 ಮಂದಿ ಗುಣಮುಖರಾಗಿದ್ದಾರೆ. 129 ಸಕ್ರಿಯ ಪ್ರಕರಣಗಳಿವೆ. 5 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT