ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇ–ಅದಾಲತ್‌ನಲ್ಲಿ 4,921 ಪ್ರಕರಣ ಇತ್ಯರ್ಥ

Last Updated 19 ಸೆಪ್ಟೆಂಬರ್ 2020, 14:07 IST
ಅಕ್ಷರ ಗಾತ್ರ

ದಾವಣಗೆರೆ: ಕಾನೂನು ಸೇವಾ ಪ್ರಾಧಿಕಾರದಿಂದ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶರಾದ ಗೀತಾ ಕೆ.ಬಿ. ಶನಿವಾರ ನಡೆದ ಮೆಗಾ ಇ-ಲೋಕ್ ಅದಾಲತ್‌ನಲ್ಲಿ ವ್ಯಾಜ್ಯಪೂರ್ವ 414 ಪ್ರಕರಣಗಳು ಮತ್ತು ವಿಚಾರಣೆಗೆ ಬಾಕಿ ಇದ್ದ4,507 ಒಟ್ಟು 4,921 ಪ್ರಕರಣಗಳು ಇತ್ಯರ್ಥಗೊಂಡಿವೆ. ₹ 4.47 ಕೋಟಿ ಪರಿಹಾರ ಕೊಡಿಸಲಾಯಿತು.

ರಾಜೀಯಾಗಬಲ್ಲ ಕ್ರಿಮಿನಲ್‌ ಅಪರಾಧಗಳು 22 ಇತ್ಯರ್ಥಗೊಂಡಿವೆ. ₹ 6.20 ಲಕ್ಷ ಪರಿಹಾರ ಒದಗಿಸಲಾಗಿದೆ. 30 ಚೆಕ್‌ ಬೌನ್ಸ್‌ ಪ್ರಕರಣಗಳನ್ನು ರಾಜಿಯಲ್ಲಿ ಮುಗಿಸಲಾಗಿದೆ. ₹ 77.32 ಲಕ್ಷ ಪರಿಹಾರದ ತೀರ್ಪು ನೀಡಲಾಗಿದೆ.

ಬ್ಯಾಂಕ್‌ ವ್ಯವಹಾರಕ್ಕೆ ಸಂಬಂಧಿಸಿದಂತೆ 41 ವ್ಯಾಜ್ಯಪೂರ್ವ ಪ್ರಕರಣಗಳಲ್ಲಿ ₹ 28.97 ಲಕ್ಷ ಪರಿಹಾರ ಒದಗಿಸಲಾಯಿತು. ಬಾಕಿ ಪ್ರಕರಣಗಳಲ್ಲಿ ಏಳು ಇತ್ಯರ್ಥಪಡಿಸಿ ₹ 10.44 ಲಕ್ಷ ಪರಿಹಾರ ಕೊಡಿಸಲಾಯಿತು.

ಹಣ ವಸೂಲಾತಿ ವ್ಯಾಜ್ಯಪೂರ್ವ 9 ಪ್ರಕರಣಗಳಲ್ಲಿ ₹ 20,617 ಪರಿಹಾರ ಒದಗಿಸಲಾಯಿತು. ಬಾಕಿ ಇದ್ದುವಗಳಲ್ಲಿ 5 ಪ್ರಕರಣ ಇತ್ಯರ್ಥಗೊಂಡು ₹ 14.85 ಲಕ್ಷ ಕೊಡಿಸಲಾಯಿತು.

ವಾಹನ ಅಪಘಾತಕ್ಕೆ ಸಂಬಂಧಿಸಿದಂತೆ 100 ಪ್ರಕರಣಗಳು ರಾಜೀಯಲ್ಲಿ ಮುಗಿಸಲಾಯಿತು. ಸಂತ್ರಸ್ತರಿಗೆ ₹ 2.48 ಕೋಟಿ ಪರಿಹಾರ ಒದಗಿಸಲಾಯಿತು. ಕಾರ್ಮಿಕರಿಗೆ ಸಂಬಂಧಿಸಿದ 3 ಸಮಸ್ಯೆ ಸರಿಪಡಿಸಲಾಯಿತು. ₹ 7.5 ಲಕ್ಷ ಕೊಡಿಸಲಾಯಿತು.

ವಿದ್ಯುತ್‌ಗೆ ಸಂಬಂಧಿಸಿದಂತೆ 364 ಪ್ರಕರಣಗಳನ್ನು ಇತ್ಯರ್ಥಪಡಿಸಿ ₹ 10.01 ಲಕ್ಷ ಪರಿಹಾರ ನೀಡಲು ಆದೇಶ ನೀಡಲಾಯಿತು. ನಾಲ್ಕು ವೈವಾಹಿಕ ವಿವಾಧ ಸುಖಾಂತ್ಯಗೊಳಿಸಲಾಯಿತು.

ಬಾಡಿಗೆ ವಿವಾದ ಸಹಿತ ಇತರ ನಾಗರಿಕ ಪ್ರಕರಣಗಳಿಗೆ ಸಂಬಂಧಿಸಿದಂತೆ 119 ಇತ್ಯರ್ಥಪಡಿಸಿ ₹ 34.72 ಲಕ್ಷ ಪರಿಹಾರ ನೀಡಲು ಆದೇಶಿಸಲಾಯಿತು.

ಇತರ ಅಪರಾಧ ಪ್ರಕರಣಗಳಿಗೆ ಸಂಬಂಧಿಸಿದಂತೆ 4,217 ರಾಜಿಯಲ್ಲಿ ಮುಗಿದವು., ₹ 9.48 ಪರಿಹಾರ ಒದಗಿಸಲಾಯಿತು. ಜಿಲ್ಲೆಯ ಎಲ್ಲ 24 ನ್ಯಾಯಾಲಯಗಳಲ್ಲಿ ಇ–ಲೋಕ ಅದಲಾತ್‌ ನಡೆಯಿತು ಎಂದು ಕಾನೂನು ಸೇವಾ ಪ್ರಾಧಿಕಾರದ ಜಿಲ್ಲಾ ಸದಸ್ಯರ ಕಾರ್ಯದರ್ಶಿ ಸಾಬಪ್ಪ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT