ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ | ನಿತ್ಯ 5 ಕೋಟಿ ಸೈಬರ್‌ ಅಪರಾಧ: ಡಾ. ಉದಯಶಂಕರ ಪುರಾಣಿಕ

ವಿಚಾರಸಂಕಿರಣದಲ್ಲಿ ತಜ್ಞ ಉದಯ ಶಂಕರ ಪುರಾಣಿಕ
Last Updated 4 ಡಿಸೆಂಬರ್ 2022, 7:24 IST
ಅಕ್ಷರ ಗಾತ್ರ

ದಾವಣಗೆರೆ: ಜಗತ್ತಿನಲ್ಲಿ ನಿತ್ಯ ಸುಮಾರು 5 ಕೋಟಿಯಷ್ಟು ಸೈಬರ್ ಅಪರಾಧಗಳು ನಡೆಯುತ್ತಿವೆ. ಮೊಬೈಲ್ ಮುಂತಾದ ವಿದ್ಯುನ್ಮಾನ ಸಾಧನಗಳನ್ನು ಬಳಸುವವರು ಎಚ್ಚರಿಕೆ ವಹಿಸಿದಲ್ಲಿ ಸೈಬರ್ ಅಪರಾಧಗಳನ್ನು ಕಡಿಮೆಗೊಳಿಸಬಹುದು ಎಂದು ಸೈಬರ್ ಭದ್ರತಾ ಹಾಗೂ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಜ್ಞ ಡಾ. ಉದಯಶಂಕರ ಪುರಾಣಿಕ ಅಭಿಪ್ರಾಯಪಟ್ಟರು.

ಬಾಪೂಜಿ ವಿದ್ಯಾ ಸಂಸ್ಥೆ ವತಿಯಿಂದ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ವಿಜ್ಞಾನ ಪದವಿ ಪೂರ್ವ ಕಾಲೇಜಿನ ಸಹಯೋಗದಲ್ಲಿ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಸ್ಮರಣಾರ್ಥ ಶನಿವಾರ ಏರ್ಪಡಿಸಿದ್ದ 14ನೇ ವಿಜ್ಞಾನ ವಿಚಾರಸಂಕಿರಣವನ್ನು ಅವರು ಉದ್ಘಾಟಿಸಿ ಮಾತನಾಡಿದರು.

ಕಂಪ್ಯೂಟರ್ ಮತ್ತು ಇಂಟರ್ನೆಟ್ ಬಳಕೆ ಬಂದ ನಂತರ ಸೈಬರ್ ಅಪರಾಧಗಳು ಆರಂಭವಾದವು ಎಂಬ ನಂಬಿಕೆ ಇದೆ. ಆದರೆ, ಸುಮಾರು 180 ವರ್ಷಗಳ ಹಿಂದೆಯೇ ವಿಶ್ವದ ಮೊದಲ ಸೈಬರ್ ಅಪರಾಧ ನಡೆದಿದೆ. ಫ್ರಾನ್ಸ್ ದೇಶದಲ್ಲಿ ಬ್ಯಾಂಕ್, ವಾಣಿಜ್ಯ ಮತ್ತು ಮಾರುಕಟ್ಟೆ ವ್ಯವಹಾರದಲ್ಲಿ ಬಳಕೆಯಾಗುತ್ತಿದ್ದ ಟೆಲಿಗ್ರಾಫಿಕ್ ಸಂದೇಶಗಳನ್ನೇ ಕದ್ದು ಅಪರಾಧಗಳನ್ನು ಎಸಗಲಾಗಿದ್ದೇಸೈಬರ್ ಅಪರಾಧಗಳ ಆರಂಭ ಎಂದರು.

‘ಎಟಿಎಂ ಗಳಲ್ಲಿ ವ್ಯವಹರಿಸುವಾಗ, ನಮ್ಮ ಮಾಹಿತಿಗಳನ್ನು ಮೊಬೈಲ್ ಫೋನ್‌ಗಳ ವಾಟ್ಸ್‌ಆ್ಯಪ್, ಸ್ಟೇಟಸ್ ಮುಂತಾದ ವಿಧಾನಗಳ ಮೂಲಕ ಸ್ನೇಹ ಸಂಪರ್ಕಗಳನ್ನು ಏರ್ಪಡಿಸಿಕೊಳ್ಳುವಾಗ ಮಾಹಿತಿಗಳು ಸೋರಿ ಹೋಗುವುದು ಗಮನಕ್ಕೆ ಬರುವುದಿಲ್ಲ. ಇವು ಸೈಬರ್ ಅಪರಾಧಿಗಳಿಗೆ ಅನುಕೂಲಕರವಾಗುತ್ತವೆ’ ಎಂದರು.

ವಿಜ್ಞಾನ ವಿಚಾರಸಂಕಿರಣವನ್ನು ಕೈಗಾರಿಕೋದ್ಯಮಿ ಎಸ್.ಎಸ್. ಬಕೇಶ್ವರ ಉದ್ಘಾಟಿಸಿದರು. ಸಹ್ಯಾದ್ರಿ ಮ್ಯಾನೇಜ್‌ಮೆಂಟ್‌ ಕಾಲೇಜಿನ ನಿರ್ದೇಶಕ ಡಾ.ಎಸ್. ಮಂಜಪ್ಪ, ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಎಂ.ಪಿ. ರುದ್ರಪ್ಪ ಮಾತನಾಡಿದರು.

ಸಂಪನ್ಮೂಲ ವ್ಯಕ್ತಿ ಜಿ.ಎಸ್. ರವಿ. ಕೆ.ಸಿ. ವಿಜಯಕುಮಾರ್, ಉಮೇಶ್, ಶ್ರುತಿ ಕೆ.ಎಸ್., ಬಿ.ಎಂ. ಶಿವಕುಮಾರ್ ಎಚ್.ಸಿ. ವಿನಯಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT