ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪತ್ರಕರ್ತ ಸಿ. ಕೇಶವಮೂರ್ತಿ

Last Updated 8 ಜುಲೈ 2019, 19:38 IST
ಅಕ್ಷರ ಗಾತ್ರ

ದಾವಣಗೆರೆ: ಮಾಜಿ ಸಚಿವೆ ಡಾ.ನಾಗಮ್ಮ ಕೇಶವಮೂರ್ತಿ ಅವರ ಪತಿ, ಹಿರಿಯ ರಾಜಕಾರಣಿ, ಪತ್ರಕರ್ತ ಸಿ. ಕೇಶವಮೂರ್ತಿ (89) ಸೋಮವಾರ ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ನಿಧನರಾದರು.

1951ರಲ್ಲಿ 21ನೇ ವಯಸ್ಸಿಗೆ ದಾವಣಗೆರೆ ನಗರಸಭೆಯ ಅಧ್ಯಕ್ಷ ರಾಗಿ ಆಯ್ಕೆಯಾಗುವ ಮೂಲಕ ದೇಶದಲ್ಲಿಯೇ ನಗರಾಡಳಿತಗಳಲ್ಲಿ ಅತಿ ಕಿರಿಯ ವಯಸ್ಸಿನ ಅಧ್ಯಕ್ಷ ಎಂಬ ಹಿರಿಮೆಗೆ ಪಾತ್ರವಾಗಿದ್ದರು. ದಾವಣಗೆರೆ ಸ್ಟೇಡಿಯಂ, ಈಜುಕೊಳ ಅವರ ಆಡಳಿತದ ಕಾಲದಲ್ಲಿ ಆರಂಭಗೊಂಡಿದ್ದವು. ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾಗಿದ್ದರು. ದಾವಣಗೆರೆ–ಚಿತ್ರದುರ್ಗ ಅವಿಭಜಿತ ಜಿಲ್ಲೆಯ ಪ್ರಥಮ ಕನ್ನಡ ದಿನಪತ್ರಿಕೆ ದಾವಣಗೆರೆ ‘ನಗರವಾಣಿ’ಯನ್ನು 1973ರಲ್ಲಿ ಆರಂಭಿಸಿದ್ದರು. ಸಿ.ಕೆ. ವಾಕ್‌ಶ್ರವಣ ಕೇಂದ್ರ, ಶಾಸ್ತ್ರಿಹಳ್ಳಿ ಮಾತಾ ಟ್ರಸ್ಟ್‌ ವೃದ್ಧಾಶ್ರಮ, ಸತ್ಯಸಾಯಿ ಶಾಲೆ, ರೋಟರಿ ಸಮುದಾಯಭವನ ಮುಂತಾದ ವುಗಳ ನಿರ್ಮಾಣಕ್ಕೆ ಅವರು ದಾನ ಮಾಡಿದ್ದರು. ಮಾಧ್ಯಮ ಅಕಾಡೆಮಿ ಪ್ರಶಸ್ತಿ, ವರ್ಷದ ವ್ಯಕ್ತಿ ಮುಂತಾದ ಹಲವು ಪ್ರಶಸ್ತಿಗಳಿಗೆ ಅವರು ಭಾಜನರಾಗಿದ್ದರು.

ಮೃತರಿಗೆ ಪತ್ನಿ ನಾಗಮ್ಮ, ಪುತ್ರ ಡಾ.ಸಿ.ಕೆ. ಜಯಂತ್‌, ಮೊಮ್ಮಗಳು, ಸಹೋದರರು, ಸಹೋದರಿಯರು ಇದ್ದಾರೆ.

ಕೇಶವಮೂರ್ತಿಯವರ ಆಸೆ ಯಂತೆ ಅವರ ದೇಹವನ್ನು ಜೆಜೆಎಂ ವೈದ್ಯಕೀಯ ಕಾಲೇಜಿಗೆ ಹಸ್ತಾಂತರ ಮಾಡಲಾಯಿತು ಎಂದು ಕುಟುಂಬದ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT