ಶನಿವಾರ, ಡಿಸೆಂಬರ್ 14, 2019
25 °C

ನ್ಯಾಮತಿ: ತಂದೆಯ ಸ್ನೇಹಿತನಿಂದಲೇ ಬಾಲಕಿ ಮೇಲೆ ಅತ್ಯಾಚಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನ್ಯಾಮತಿ (ದಾವಣಗೆರೆ ಜಿಲ್ಲೆ): ತಾಲ್ಲೂಕಿನ ಗ್ರಾಮವೊಂದರದಲ್ಲಿ 2ನೇ ತರಗತಿ ವಿದ್ಯಾರ್ಥಿನಿ ಮೇಲೆ ಭಾನುವಾರ ಅತ್ಯಾಚಾರ ನಡೆಸಲಾಗಿದ್ದು, ಅದೇ ಗ್ರಾಮದ ಆರೋಪಿ ರಂಜನ್‌ನನ್ನು (23) ಪೊಲೀಸರು ಬಂಧಿಸಿದ್ದಾರೆ.

ಆರೋಪಿ ರಂಜನ್‌, ಸಂತ್ರಸ್ತ ಬಾಲಕಿಯ ತಂದೆಯ ಸ್ನೇಹಿತನಾಗಿದ್ದ. ಆತ ಆಗಾಗ ಮನೆಗೆ ಬಂದು ಹೋಗುತ್ತಿದ್ದ. ಭಾನುವಾರ ಸಂಜೆ ದನದ ಕೊಟ್ಟಿಗೆಯಲ್ಲಿ ಮಗಳ ಮೇಲೆ ರಂಜನ್‌ ಅತ್ಯಾಚಾರ ಮಾಡಿದ್ದಾನೆ ಎಂದು ಬಾಲಕಿಯ ತಾಯಿ ನ್ಯಾಮತಿ ಠಾಣೆಗೆ ದೂರು ನೀಡಿದ್ದರು.

ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಡಿವೈಎಸ್‌ಪಿ ಪ್ರಶಾಂತ ಮುನ್ನೋಳಿ, ನ್ಯಾಮತಿ ಸಬ್‌ ಇನ್‌ಸ್ಪೆಕ್ಟರ್‌ ಹನುಮಂತಪ್ಪ ಎಂ. ಶಿರೀಹಳ್ಳಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು