ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾರ್ಲಿ ಸಿನಿಮಾ ವೀಕ್ಷಣೆಗೆ ಶ್ವಾನದೊಂದಿಗೆ ಬಂದಿದ್ದ ಮಾಲೀಕ; ಪ್ರವೇಶ ನಿರಾಕರಣೆ

Last Updated 13 ಜೂನ್ 2022, 8:52 IST
ಅಕ್ಷರ ಗಾತ್ರ

ದಾವಣಗೆರೆ: ರಕ್ಷಿತ್ ಶೆಟ್ಟಿ ಅಭಿನಯದ ‘777 ಚಾರ್ಲಿ’ ಚಿತ್ರ ನೋಡಲು ಪ್ರೀತಿಯ ಶ್ವಾನದೊಂದಿಗೆ ಬಂದಿದ್ದ ತಾಲ್ಲೂಕಿನ ಪುಟಗನಾಳ್ಗ್ರಾಮದಕೆಂಚಅವರಿಗೆ ಪ್ರವೇಶ ನಿರಾಕರಿಸಲಾಯಿತು. ಇದನ್ನು ಖಂಡಿಸಿ ಶ್ವಾನದೊಂದಿಗೆಸಹೋದರ ನಂದೀಶ್ ಅವರ ಜೊತೆ ಕೆಂಚ ಅವರು ಭಾನುವಾರ ಪ್ರತಿಭಟನೆ ನಡೆಸಿದರು.

ಶ್ವಾನ ಮತ್ತು ಮನುಷ್ಯನ ನಡುವಿನ ಸಂಬಂಧದ ಬಗ್ಗೆ ಕಥಾ ಹಂದರವಿರುವ ‘777 ಚಾರ್ಲಿ’ ಚಿತ್ರ ನೋಡಲು ತಮ್ಮ ಪ್ರೀತಿಯ ಸಾಕು ನಾಯಿ ‘ಡಯಾನ’ದೊಂದಿಗೆ ದಾವಣಗೆರೆಯ ಗೀತಾಂಜಲಿ ಚಿತ್ರಮಂದಿರಕ್ಕೆ ಬಂದಿದ್ದರು. ಆ ವೇಳೆ ಚಿತ್ರಮಂದಿರದ ಮಾಲೀಕರು ಪ್ರವೇಶ ನಿರಾಕರಿಸಿದರು.

ಭಾನುವಾರ ಬೆಳಿಗ್ಗಿನ 10.30ರ ಪ್ರದರ್ಶನಕ್ಕೆ ಕೆಂಚ, ಅವರ ಸಹೋದರ ನಂದೀಶ್ ಹಾಗೂ ‘ಡಯಾನ’ ಈ ಮೂವರಿಗೂ ಮುಂಗಡ ಟಿಕೆಟ್ ಬುಕ್ಕಿಂಗ್ ಮಾಡಲಾಗಿತ್ತು. ಬೆಳಗ್ಗಿನ ಪ್ರದರ್ಶನಕ್ಕೆ ಬಂದಾಗ ‘ಜಿಲ್ಲಾಡಳಿತದಿಂದ ಅನುಮತಿ ತಂದರೆ ಮಾತ್ರವೆ ಶ್ವಾನಕ್ಕೆ ಪ್ರವೇಶ ನೀಡಲಾಗುತ್ತದೆ’ ಎಂದು ಚಿತ್ರಮಂದಿರದ ಮಾಲೀಕರು ತಿಳಿಸಿದರು. ಆಗ ನಿರಾಸೆಯಿಂದ ಹೊರಬಂದರು.

‘ಚಾರ್ಲಿ ಚಿತ್ರದಲ್ಲಿ ನಾಯಿ ಹಾಗೂ ಮನುಷ್ಯನ ಸಂಬಂಧವನ್ನು ಮನೋಜ್ಞವಾಗಿ ಚಿತ್ರಿಸಲಾಗಿದೆ. ಹಾಗಾಗಿ ನಾನು ಪ್ರೀತಿಯಿಂದ ಸಾಕಿದ ನಾಯಿಯೊಂದಿಗೆ ಚಿತ್ರ ನೋಡಬೇಕು ಎಂದು ಬಂದೆ. ಆದರೆ ಪ್ರವೇಶ ನಿರಾಕರಿಸಿದ್ದಾರೆ. ನಾನು ಸೇರಿ 25 ಜನರು ಅವರ ಶ್ವಾನದೊಂದಿಗೆ ಚಿತ್ರ ನೋಡಲು ಜಿಲ್ಲಾಧಿಕಾರಿಗಳ ಅನುಮತಿ ಪಡೆಯುತ್ತೇನೆ’ ಎಂದು ಪುಟಗನಾಳ್ ಗ್ರಾಮದ ಕೆಂಚ ತಿಳಿಸಿದರು.

‘ಸಾಕು ನಾಯಿಗಳ ಮಾಲೀಕರ ಒಂದು ಗುಂಪು ರಚಿಸಿ ಅವರಿಗೆ ಈ ಕುರಿತು ಮಾಹಿತಿ ನೀಡಲಾಗುವುದು. ಎಲ್ಲರೂ ಒಟ್ಟಿಗೆ ಜೂನ್ 29ರಂದು ಚಿತ್ರ ನೋಡಲು ನಿರ್ಧರಿಸಿದ್ದೇನೆ. ನನ್ನ ಶ್ವಾನಕ್ಕೆ ‘ಡಯಾನ 777’ ಎಂದು ಹೆಸರಿಡಬೇಕು ಎಂದೂ ತೀರ್ಮಾನ ಮಾಡಿದ್ದೇನೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT