ಮಂಗಳವಾರ, ಡಿಸೆಂಬರ್ 1, 2020
24 °C

ಕೆಲಸ ಕೊಡಿಸುವುದಾಗಿ ₹ 3 ಲಕ್ಷ ವಂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ಕೆಲಸ ಕೊಡಿಸುವುದಾಗಿ ನಂಬಿಸಿದ ವ್ಯಕ್ತಿಯೊಬ್ಬ ಭರಣಿ ಹೋಟೆಲ್ ಬಳಿ ₹ 3 ಲಕ್ಷ ವಂಚಿಸಿದ್ದು, ಈ ಸಂಬಂಧ ಒಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.

ನಿಜಲಿಂಗಪ್ಪ ಬಡಾವಣೆಯ 2ನೇ ಮೇನ್, 2ನೇ ಕ್ರಾಸ್‌ನ ಎಂ.ಎಸ್. ಅಬ್ದುಲ್ ಬಷೀರ್ ಮೋಸ ಹೋದವರು. ಬಾಗೇಪಲ್ಲಿ ನಿವಾಸಿ ಸುಬಾನ್ ಮೋಸ ಮಾಡಿದ ವ್ಯಕ್ತಿ. ಈತ ಬಾಗಲಕೋಟೆ ನಿವಾಸಿ ಜಿಯಾವುಲ್ಲಾ ಎಂದು ಹೇಳಿ ಮೋಸ ಮಾಡಿದ್ದಾನೆ.

ಅಬ್ದುಲ್ ಬೆಂಗಳೂರಿನಲ್ಲಿ ಖಾಸಗಿ ಕಂಪನಿಯಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡಿಕೊಂಡಿದ್ದರು. ಎರಡು ತಿಂಗಳ ಹಿಂದೆ ಹೈಕೋರ್ಟ್ ಬಳಿ ಸುಬಾನ್ ಪರಿಚಯವಾಗಿದ್ದು, ‘ನಾನು ನಿರುದ್ಯೋಗಿಗಳಿಗೆ ಉದ್ಯೋಗ ಕೊಡಿಸುವ ಕೆಲಸ ಮಾಡುತ್ತಿದ್ದೇನೆ. ನಿಮ್ಮ ಕಡೆ ಹುಡುಗರು ಇದ್ದರೆ ಹೇಳಿ. ತಿಂಗಳಿಗೆ ₹1 ಲಕ್ಷದಿಂದ ₹1.50 ಲಕ್ಷದವರೆಗೆ ಸಂಬಳ ಸಿಗುವ ಕೆಲಸ ಕೊಡಿಸುತ್ತೇನೆ’ ಎಂದು ಅಬ್ದುಲ್‌ ಅವರನ್ನು
ನಂಬಿಸಿದ್ದಾನೆ.

ಕೆಲಸ ಕೊಡಿಸಲು ₹3 ಲಕ್ಷ ಡಿಪಾಸಿಟ್ ಕಟ್ಟಬೇಕು ಎಂದು ಹೇಳಿ ಹಣ ಪಡೆದು ದೂರವಾಣಿ
ಮೂಲಕ ಸಂದರ್ಶನದ ಕರೆ ಬರುತ್ತದೆ ಎಂದು ಹೇಳಿ ಸುಬಾನ್ ಮೊಬೈಲ್ ಸ್ವಿಚ್ಡ್‌ ಆಫ್
ಮಾಡಿಕೊಂಡಿದ್ದಾನೆ.

ಆ ಬಳಿಕ ಅಬ್ದುಲ್ ಸಿ.ಇ.ಎನ್ ಅಪರಾಧ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.