7

ಲಾರಿ-ಬೈಕ್ ಮುಖಾಮುಖಿ ಡಿಕ್ಕಿ:  ಓರ್ವ ಸಾವು

Published:
Updated:
ಸಮೀಪದ ಅರಸೀಕೆರೆ ಬಳಿಯ ಹರಿಯಮ್ಮನಹಳ್ಳಿ ಕ್ರಾಸ್ ಬಳಿ ಲಾರಿ ಹಾಗೂ ಬೈಕ್ ನಡುವೆ  ಮುಖಾಮುಖಿ  ಅಪಘಾತ ಸಂಭವಿಸಿದೆ.

ಉಚ್ಚಂಗಿದುರ್ಗ: ಲಾರಿ ಹಾಗೂ ಬೈಕ್ ನಡುವೆ ಮುಖಾಮುಖಿ ಅಪಘಾತ ಸಂಭವಿಸಿ ಒರ್ವ ಸ್ಥಳದಲ್ಲೇ ಮೃತ ಪಟ್ಟಿದ್ದು, ಮತ್ತೋರ್ವ ಗಂಭೀರ ಗಾಯಗೊಂಡಿರುವ ಘಟನೆ ಸಮೀಪದ ಅರಸೀಕೆರೆ ಬಳಿಯ ಹರಿಯಮ್ಮನಹಳ್ಳಿ ಕ್ರಾಸ್ ಬಳಿ ಶುಕ್ರವಾರ ಮಧ್ಯಾಹ್ನ ಸಂಭವಿಸಿದೆ.

ಮೃತ ವ್ಯಕ್ತಿಯನ್ನು ಯಲ್ಲಾಪುರದ ಕೊರಚರಹಟ್ಟಿ ವಾಸಿ ಹೊನ್ನಪ್ಪರ ವೆಂಕಟೇಶ (35) ಎಂದು ಗುರುತಿಸಲಾಗಿದ್ದು, ಗಾಯಗೊಂಡ ಮತ್ತೊಬ್ಬರನ್ನು ದಾವಣಗೆರೆ ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಗಿದೆ. ಗಾಯಳುವಿನ ಹೆಸರು ತಿಳಿದು ಬಂದಿಲ್ಲ. ಹರಪನಹಳ್ಳಿ ಕಡೆಯಿಂದ ಬೈಕ್ ಸವಾರ ಹತ್ತಿರದ ಹರಿಯಮ್ಮನಹಳ್ಳಿ ಕ್ರಾಸ್ ಬಳಿ ಸರ್ಕಾರಿ ಬಸ್ ಅನ್ನು ಹಿಂದಿಕ್ಕಲು ಮುಂದಾದಾಗ ಹರಪನಹಳ್ಳಿಗೆ ಕಡೆ ಹೋಗುವ ಎಂ. ಸ್ಯಾಂಡ್ ಸಾಗಿಸುವ ಲಾರಿಗೆ ಎದುರಾಗಿ ಡಿಕ್ಕಿ ಸಂಭವಿಸಿದೆ.

ಅಪಘಾತದದ ರಭಸಕ್ಕೆ ಬೈಕ್ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮತ್ತೋರ್ವ ರಸ್ತೆ ಬದಿಗೆ ಬಿದ್ದಿದ್ದಾನೆ. ಚಾಲಕನ ನಿಯಂತ್ರಣ ತಪ್ಪಿದ ಲಾರಿಯು ವಿದ್ಯುತ್ ಕಂಬಕ್ಕೆ ಬಡಿದು 2 ಕಂಬಗಳು ಮುರಿದು ಬಿದ್ದಿದೆ. ಅದೃಷ್ಟಾವಶಾತ್ ಹತ್ತಿರದ ಮನೆಯ ಮೇಲೆ ಬಿದ್ದಿಲ್ಲ. ಹೀಗಾಗಿ ಭಾರಿ ಅನಾಹುತ ತಪ್ಪಿದಂತಾಗಿದೆ.

ದಾವಣಗೆರೆಯಿಂದ ಹರಪನಹಳ್ಳಿ ಸಾಗುವ ಮಾರ್ಗವು ಕಿರಿದಾಗಿದ್ದು, ಪ್ರತಿ ನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತದೆ. ಇತ್ತಿಚಿಗೆ ಎಂ ಸ್ಯಾಂಡ್ ಸಾಗಿಸುವ ವಾಹನಗಳು ಹೆಚ್ಚು ಓಡಾಡುತ್ತಾ ಇರುವುದರಿಂದ ಈ ಮಾರ್ಗದಲ್ಲಿ ಅಪಘಾತಗಳಿಗೆ ಮಿತಿ ಇಲ್ಲದಾಗಿದೆ.

 ಭಾರೀ ಗಾತ್ರದ ಲಾರಿಗಳಲ್ಲಿ 50ರಿಂದ 70 ಟನ್‌ವರೆಗೆ ಎಂ.ಸ್ಯಾಂಡ್ ಸಾಗಿಸುತ್ತಾ ಇರುವುದರಿಂದ ರಸ್ತೆಗಳು ಅಲ್ಲಲ್ಲಿ ಕುಸಿಯುತ್ತಿದ್ದು, ಅಪಘಾತಗಳಿಗೆ ಕಾರಣವಾಗಿದೆ. ಭಾರೀ ವಾಹನಗಳನ್ನು ನಿಯಂತ್ರಿಸುವಲ್ಲಿ ಅಧಿಕಾರಿ ವರ್ಗ ಜಾಣ ಕುರುಡುತನ ತೋರುತ್ತಿದೆ ಎಂದು ಸ್ಥಳೀಯರು ಆರೋಪಿಸಿದರು. ಅಪಘಾತ ಕುರಿತಂತೆ ಪ್ರಕರಣ ಹರಪನಹಳ್ಳಿ ಠಾಣೆಯಲ್ಲಿ ದಾಖಲಾಗಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !