ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ | ಕಾರ್ಯಕರ್ತರೇ ಬಿಜೆಪಿಯ ಜೀವಾಳ

ಬಿಜೆಪಿ ಪ್ರಕೋಷ್ಠಗಳ ಜಿಲ್ಲಾ ಸಮಾವೇಶ ಉದ್ಘಾಟಿಸಿದ ಶಾಸಕ ಎಸ್‌.ಎ. ರವೀಂದ್ರನಾಥ
Last Updated 15 ಮೇ 2022, 4:01 IST
ಅಕ್ಷರ ಗಾತ್ರ

ದಾವಣಗೆರೆ: ಗ್ರಾಮಮಟ್ಟದಿಂದ ಬೆಳೆದ ಬಿಜೆಪಿಗೆ ಕಾರ್ಯಕರ್ತರೇ ದೊಡ್ಡ ಶಕ್ತಿ. ಅವರ ತ್ಯಾಗದಿಂದಾಗಿ ರಾಜ್ಯ, ದೇಶದಲ್ಲಿ ಪಕ್ಷ ಅಧಿಕಾರಕ್ಕೆ ಬಂದಿದೆ ಎಂದು ಶಾಸಕ ಎಸ್‌.ಎ. ರವೀಂದ್ರನಾಥ ಹೇಳಿದರು.

ನಗರದ ದಾವಣಗೆರೆ- ಹರಿಹರ ಅರ್ಬನ್ ಬ್ಯಾಂಕ್ ಸಮುದಾಯ ಭವನದಲ್ಲಿ ಶನಿವಾರ ಆಯೋಜಿಸಿದ್ದ ಬಿಜೆಪಿಯ ಪ್ರಕೋಷ್ಠಗಳ ಜಿಲ್ಲಾ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ನಾವು ಗ್ರಾಮಮಟ್ಟದಲ್ಲಿ ಸಂಘಟನೆ ಪ್ರಾರಂಭಿಸಿದ್ದೆವು. ಆ ಸಮಯದಲ್ಲಿ ಜನರು ಹೇಳುತ್ತಿದ್ದ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದೆವು. ಎಲ್ಲ ಪ್ರಕೋಷ್ಠಗಳಲ್ಲಿ ಕಾರ್ಯಕರ್ತರು ಸಕ್ರಿಯರಾಗಿರಬೇಕು. ಎಲ್ಲ ಯೋಜನೆಯನ್ನು ಜನರಿಗೆ ತಲುಪಿಸಬೇಕು. ದೇಶದಲ್ಲಿ ಇಂದಿಗೂ ಕೂಡ ಅನಕ್ಷರಸ್ಥರಿದ್ದಾರೆ ಅವರಿಗೆ ಅನುಕೂಲವಾಗುವಂತೆ ಉತ್ತಮ‌ ಕೆಲಸ ಮಾಡಿದರೆ ಪಕ್ಷಕ್ಕೆ ಹೆಸರು ಬರುತ್ತದೆ’ ಎಂದು ತಿಳಿಸಿದರು.

‘ನಮ್ಮ ಕೆಲಸ ಹೇಗಿರಬೇಕೆಂದರೆ ನಾವು ಬೀಜ ಊರಿದಾಗ ಅದು ಒಂದು ಸಮಯದಲ್ಲಿ ಫಲ ಸಿಗುತ್ತದೆ ಎಂದು ತಿಳಿದರಬೇಕು. ಅದಕ್ಕೆ ಸಾಕ್ಷಿ ನಾನು 5 ಬಾರಿ ಶಾಸಕನಾಗಿರುವುದು. ಸಾಮಾನ್ಯ ಜನರ ಕೆಲಸ ಮಾಡಿದಾಗ ಪಕ್ಷಕ್ಕೆ ಬಲ ಬರುತ್ತದೆ’ ಎಂದರು.

ರಾಜ್ಯ ಪ್ರಕೋಷ್ಟಗಳ ಸಹ ಸಂಯೋಜಕ ಡಾ.ಎ.ಎಚ್. ಶಿವಯೋಗಿಸ್ವಾಮಿ, ‘ಪ್ರಧಾನಿ ಮೋದಿಯಿಂದ ಪ್ರಪಂಚದಲ್ಲಿ ಭಾರತ ಹೆಸರುವಾಸಿಯಾಗಿದೆ. ಎರಡು ದೇಶದಲ್ಲಿ ಯುದ್ದ ಪ್ರಾರಂಭವಾದ ಸಂದರ್ಭದಲ್ಲಿ ನಮ್ಮ ಪ್ರಧಾನಿಯ ಮನವಿಯಿಂದ ರಷ್ಯಾ ಹಾಗೂ ಉಕ್ರೇನ್ ಯುದ್ದ ನಿಲ್ಲಿಸಿತ್ತು. 8 ವರ್ಷಗಳಲ್ಲಿ ಮೋದಿಜಿ ನೀಡಿದ ಜನಪರ ಯೋಜನೆ ಅನುಷ್ಠಾನಕ್ಕೆ ಕಾರ್ಯಕರ್ತರು ಜೊತೆಗೂಡಿದ್ದಾರೆ. ಅರ್ಹ ಫಲಾನುಭವಿಗಳಿಗೆ ಯೋಜನೆ ತಲುಪಿದೆ. ಪ್ರಕೋಷ್ಠದ ಕಾರ್ಯಕರ್ತರಾಗಿ ನಿಮ್ಮ ಜವಾಬ್ದಾರಿ ಅರಿತು ಕೊಳ್ಳಬೇಕು.
ಬಿಜೆಪಿ ಸರ್ವವ್ಯಾಪಿ ಸರ್ವ ಸ್ಪರ್ಶಿಯಾಗಬೇಕು. ಇದು ಚುನಾವಣಾ ವರ್ಷ ಆದ್ದರಿಂದ ಜನರಿಗೆ ನಮ್ಮ ಯೋಜನೆಗಳ ಬಗ್ಗೆ ತಿಳಿಸಬೇಕು’ ಎಂದರು.

‘ಕಾಂಗ್ರೆಸ್ ಒಡೆದ ಮನೆಯಾಗಿದೆ. ಸಾಮಾಜಿಕ ಜಾಲತಾಣದ ಜೊತೆಗೆ ದೃಶ್ಯ ಮಾಧ್ಯಮ, ಪ್ರಿಂಟ್ ಮಿಡಿಯಾ ಬಲವಾಗಿದೆ. ಯಾವುದನ್ನು ಮುಚ್ಚಿಡಲು ಸಾಧ್ಯವಿಲ್ಲ. ಕಾಂಗ್ರೆಸ್‌ನ ಕೊರತೆಯನ್ನು ಜನರಿಗೆ ತಿಳಿಸುವ ಜೊತೆ ಬಿಜೆಪಿ ಜನಪರ ಯೋಜನೆಗಳನ್ನು ಜನರಿಗೆ ತಿಳಿಸಬೇಕು’ ಎಂದು ಸಲಹೆನೀಡಿದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ವೀರೇಶ್ ಹನಗವಾಡಿ ಅಧ್ಯಕ್ಷ ತೆ ವಹಿಸಿದ್ದರು. ಕಾರ್ಯದರ್ಶಿ ಬಿ.ಎಸ್. ಜಗದೀಶ್, ಧೂಡಾ ಅಧ್ಯಕ್ಷ ಕೆ.ಎಂ. ಸುರೇಶ್, ಸುಧಾ ಜಯರುದ್ರೇಶ್, ಎಲ್.ಎನ್. ಕಲ್ಲೇಶ್, ಡಿ.ಎಸ್. ಶಿವಶಂಕರ್, ಬಾತಿ ಚಂದ್ರಪ್ಪ, ಮಂಜಾನಾಯ್ಕ್, ಸೊಕ್ಕೆ ನಾಗರಾಜ್,‌ ಶಿವರಾಜ್ ಪಾಟೀಲ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT