ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮರಾಠರನ್ನು ‘2ಎ’ ಗೆ ಸೇರ್ಪಡೆಗೊಳಿಸಿ’

Last Updated 21 ಜನವರಿ 2021, 2:52 IST
ಅಕ್ಷರ ಗಾತ್ರ

ದಾವಣಗೆರೆ: ಮರಾಠ ಅಭಿವೃದ್ಧಿ ಪ್ರಾಧಿಕಾರವನ್ನು ಸಿಎಂ ಘೋಷಣೆ ಮಾಡಿದ್ದಾರೆ. ಅದರೆ ಅದು ಕಾರ್ಯಗತ
ಗೊಂಡಿಲ್ಲ. ಕೂಡಲೇ ಅದನ್ನು ಜಾರಿಗೊಳಿಸಬೇಕು. ‘3ಬಿ’ಯಲ್ಲಿರುವ ಸಮುದಾಯವನ್ನು ‘2ಎ’ಗೆ ಸೇರಿಸಬೇಕು ಎಂದುಕ್ಷತ್ರೀಯ ‘ಮರಾಠ ಮೀಸಲಾತಿ ಅಭಿಯಾನ’ ಸಂಘಟನೆ ಆಗ್ರಹಿಸಿದೆ.

‘ಅಭಿವೃದ್ಧಿ ಪ್ರಾಧಿಕಾರಕ್ಕೆ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಅಡ್ಡಗಾಲು ಹಾಕುತ್ತಿದ್ದು, ನಾವು ವಲಸಿಗರಲ್ಲ. ನಾವು ಕನ್ನಡಿಗರು. ನೂರಾರು ವರ್ಷಗಳಿಂದ ಇಲ್ಲಿನ ನೆಲ, ಜಲ, ಸಂಸ್ಕೃತಿಗೆ ಹೊಂದಿಕೊಂಡು ಬದುಕುತ್ತಿದ್ದೇವೆ. ಆದರೆ, ಪಟ್ಟಭದ್ರರು ನಮ್ಮನ್ನು ಹೊರಗಿನವರಂತೆ ಕಂಡು ನಮ್ಮ ನಡುವೆ ಕಿಡಿ ಹಾಕಲು ಪ್ರಯತ್ನಿಸುತ್ತಿದ್ದಾರೆ’ ಎಂದುಅಭಿಯಾನದ ರಾಜ್ಯ ಘಟಕದ ಅಧ್ಯಕ್ಷ ವಿಜಯೇಂದ್ರರಾವ್ ಜಾಧವ್ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.

‘ಈ ಹಿಂದೆ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿದ್ದ ಬಾಳಠಾಕ್ರೆ ಅವರು ನಮ್ಮ ರಾಜ್ಯದ ಮರಾಠಿಗರಿಗೆ ನಾವು ಉದ್ಯೋಗ, ಆಹಾರ ಕೊಟ್ಟರೆ ಸಾಕು. ಕರ್ನಾಟಕದಲ್ಲಿ ಇರುವವರು ಇಲ್ಲಿಗೆ ಬರುವುದು ಬೇಡ. ನೀವು ಎಲ್ಲಿದ್ದೀರೋ ಅಲ್ಲಿಯೇ ಇದ್ದುಬಿಡಿ ಎಂದಿದ್ದರು. ನಾವು ಎಂದಿಗೂ ಮಹಾರಾಷ್ಟ್ರಕ್ಕೆ ಹೋಗಿ ನೆಲೆಸಬೇಕೆಂಬ ಯೋಚನೆಯೂ ನಮಗಿಲ್ಲ. ನಾವು ಹುಟ್ಟಿದ್ದು ಮತ್ತು ಸಾಯುವುದು ಕನ್ನಡದ ನೆಲದಲ್ಲಿಯೇ’ ಎಂದು ಸ್ಪಷ್ಟನೆ ನೀಡಿದರು.

‘ಕನ್ನಡಪರ ಹೋರಾಟಗಾರನೆಂದು ಹೇಳುವ ವಾಟಾಳ್ ನಾಗರಾಜ್‍ ಅವರಿಗೆ ಅರಳು ಮರಳು ಆದಂತೆ ಕಾಣುತ್ತದೆ. ಮರಾಠ ಸಮಾಜದ ಅಭಿವೃದ್ಧಿ ನಿಗಮಕ್ಕೆ ಅಡ್ಡಿಪಡಿಸುತ್ತಿದ್ದಾರೆ. ಅಲ್ಲದೇ, ಕನ್ನಡ ರಕ್ಷಣಾ ವೇದಿಕೆ ಎಂದು ಹೇಳಿಕೊಳ್ಳುವವರು ಟಿ–20’ ಎಂದು ಟೀಕಿಸಿದರು.

‘ಮರಾಠರ ಸ್ಥಿತಿಗತಿ ಅಧ್ಯಯನ ನಡೆಸಿದ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಎನ್. ಶಂಕರಪ್ಪ ಅವರು ಮರಾಠ ಸಮಾಜವನ್ನು 2ಎ ಗೆ ಸೇರಿಸುವಂತೆ ಶಿಫಾರಸು ಮಾಡಿದ್ದರು. ಆದರೆ, ಇದುವರೆಗೂ ಸರ್ಕಾರ ತೀರ್ಮಾನ ತೆಗೆದುಕೊಂಡಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ಮರಾಠ ಸಮಾಜ ಆರ್ಥಿಕ, ಶೈಕ್ಷಣಿಕ ಮತ್ತು ಔದ್ಯೋಗಿಕವಾಗಿ ಹಿಂದುಳಿದಿದ್ದು,ಈಗಾಗಲೇ ಹಲವು ಸಮಾಜದವರು ಎಸ್‌ಟಿ ಮೀಸಲಿಗೆ ಮತ್ತು 2ಎ ಮೀಸಲಾತಿಗೆ ಒತ್ತಾಯಿಸಿ ಪ್ರತಿಭಟನೆ ಕೈಗೊಂಡಿದ್ದಾರೆ. ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ರಚಿಸಿ ಅದಕ್ಕೆ ಅಧ್ಯಕ್ಷರನ್ನು ನೇಮಿಸಲಾಗಿದೆ. ಆದರಂತೆ ಮರಾಠ ಅಭಿವೃದ್ಧಿ ನಿಗಮಕ್ಕೂ ಆಗಬೇಕು. ಬೇಡಿಕೆಗಳು ಈಡೇರದಿದ್ದರೆ ಹೋರಾಟ ಪ್ರಾರಂಭಿಸುತ್ತೇವೆ’ ಎಂದು ಎಚ್ಚರಿಕೆ ನೀಡಿದರು.

‘ದೇಶವನ್ನು ಲೂಟಿ ಹೊಡೆದ ವಂಶಸ್ಥರಿಗೆ ಕರೆದು ದಾನ ಮಾಡುತ್ತೀರಿ. ಆದರೆ, ದೇಶ ಕಾಪಾಡಿದ ಶಿವಾಜಿ ಮಹಾರಾಜರ ಸಮಾಜವನ್ನು ವಿರೋಧಿಸುತ್ತಿರುವುದು ಎಷ್ಟು ಸರಿ’ ಎಂದು ಸಮಾಜದ ಮುಖಂಡಯಶವಂತ ರಾವ್ ಜಾಧವ್ ಪ್ರಶ್ನಿಸಿದರು.

ಗೋಷ್ಠಿಯಲ್ಲಿ ಸಮಾಜದ ಮುಖಂಡರಾದ ನಳಿನಿ ಪವಾರ್, ಪರಶುರಾಮ್, ರಾಕೇಶ್, ಭವಾನಿರಾವ್ ಮೋನೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT